ರಾಜ್ಯಮನೆ ಹತ್ತಿರವೇ ಕೋವಿಡ್ ಆಸ್ಪತ್ರೆ: ಆತಂಕಗೊಂಡಿದ್ದ ನೆರೆಹೊರೆಯವರಿಗೆ ಜಗ್ಗೇಶ್ ಸಮಾಧಾನ ಮಾಡಿದ್ದು ಹೇಗೆ?
ಈಗಂತೂ ಎಲ್ಲಾ ಕಡೆ ಕೊರೋನಾದ್ದೆ ಭೀತಿ. ಹೀಗಿರೋವಾಗ ಮನೆ ಬಳಿಯೇ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಇದ್ರೆ ಮಾಡೋದೇನು? ದಿನಕ್ಕೆ ಅದೆಷ್ಟೋ ಸಲ ಆಂಬುಲೆನ್ಸ್ ಓಡಾಡುತ್ತೆ, ಎಷ್ಟೋ ಕೋವಿಡ್ ಸೋಂಕಿತರು, ಶಂಕಿತರು ಬರ್ತಿರ್ತಾರೆ. ಹೀಗಾಗಿ ಆತಂಕ ಸಹಜ.