ರಾಜ್ಯಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದು: ಖಾನ್ ಅಕಾಡೆಮಿ ಸಹಯೋಗದಲ್ಲಿ 'ಜ್ಞಾನ ಸೇತು' ಕಾರ್ಯಕ್ರಮ ಜಾರಿಗೆ ಅನುಮೋದನೆ!
ಕಾರ್ಯಕ್ರಮದ ಮೂಲಕ ರಾಜ್ಯದ 21,726 ಹಿರಿಯ ಪ್ರಾಥಮಿಕ ಶಾಲೆ, 4,821 ಪ್ರೌಢಶಾಲೆ ಹಾಗೂ 1,229 ಪಿಯು ಕಾಲೇಜುಗಳಲ್ಲಿ ಈಗಾಗಲೇ ಲಭ್ಯವಿರುವ ಎಲ್ಇಡಿ ಪ್ರೊಜೆಕ್ಟರ್ ಅಥವಾ ಸ್ಮಾರ್ಟ್ ಬೋರ್ಡ್ಗಳನ್ನು ಬಳಸಿಕೊಂಡು ವಾರದಲ್ಲಿ ಒಂದು ದಿನ ಡಿಜಿಟಲ್ ಕಲಿಕೆ ನೀಡಲಾಗುತ್ತದೆ.