• Tag results for ಡಿಕೆ.ಶಿವಕುಮಾರ್

ಉಪಚುನಾವಣೆ: ಕಾಗವಾಡ, ಗೋಕಾಕ್'ನಲ್ಲಿ ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ನಡುವೆ ಮನಸ್ತಾಪ?

ಉಪಚುನಾವಣೆ ಹತ್ತಿರಬರುತ್ತಿದ್ದು, ಪಕ್ಷದ ಟಿಕೆಟ್ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. 

published on : 12th November 2019

ಉಪಸಮರ: 12 ಕ್ಷೇತ್ರಗಳ ಮೇಲೆ ಡಿಕೆಶಿ ಕಣ್ಣು, ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಸಭೆ

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಮಾಜಿ ಸಚಿವ ಡಿಕೆ.ಶಿವಕುಮಾರ್ ಅವರು 12 ಕ್ಷೇತ್ರಗಳ ಮೇಲೆ ಕಣ್ಣಿದ್ದು, 15 ಕ್ಷೇತ್ರಗಳ ಉಪಚುನಾವಣೆ ಸಂಬಂಧ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದರು. 

published on : 12th November 2019

ಡಿಕೆಶಿ ಸಂಪರ್ಕಿಸಿದ ರಾಜು ಕಾಗೆ, ಅಶೋಕ ಪೂಜಾರಿ: ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ?

ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಪೂಜಾರಿಯವರು ಭಾನುವಾರ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು, ಮಹತ್ವದ ಮಾರುಕತೆ ನಡೆಸಿರುವುದು ತೀವ್ರ ಕುತೂಹಲವನ್ನು ಕೆರಳಿಸಿದೆ.

published on : 11th November 2019

ಜೈಲಿನಲ್ಲಿದ್ದಷ್ಟು ದಿನ ಡಿಕೆಶಿ ಏನು ಮಾಡುತ್ತಿದ್ದರು ಗೊತ್ತಾ?: 'ಜೈಲು ಕಥನ' ಬಿಚ್ಚಿಟ್ಟ ಕನಕಪುರ ಬಂಡೆ

ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿ 48 ದಿನಗಳನ್ನು ಕಳೆದ ಮಾಜಿ ಸಚಿವ ಡಿಕೆ.ಶಿವಕುಮಾರ್ ಅವರು, ಸೆರೆವಾಸದಲ್ಲಿದ್ದಷ್ಟು ದಿನ ಏನು ಮಾಡುತ್ತಿದ್ದರ, ಹೇಗಿದ್ದರು ಎಂಬ ವಿಚಾರವನ್ನು ಸ್ವತಃ ಬಿಚ್ಚಿಟ್ಟಿದ್ದಾರೆ. 

published on : 8th November 2019

ಸಿದ್ದು ಅಡ್ಡಾದಲ್ಲಿ ಡಿಕೆಶಿ ಕಲರವ: ಕಾರ್ಯಕರ್ತರ ಸ್ವಾಗತ ನೋಡಿ ಅಚ್ಚರಿಗೊಂಡ 'ಕನಕಪುರ ಬಂಡೆ'

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿಗೆ ಭೇಟಿ ನೀಡಿದ್ದು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ.

published on : 8th November 2019

ತಿಹಾರ್ ಜೈಲಿಗೆ ಸೋನಿಯಾ ನಾಳೆ ಭೇಟಿ: ಡಿಕೆಶಿ ಭೇಟಿ ಸಾಧ್ಯತೆ

ತಿಹಾರ್ ಜೈಲಿಗೆ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಭೇಟಿ ನೀಡುತ್ತಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

published on : 20th October 2019

ಸಮನ್ಸ್ ಹಿಂಪಡೆದ ಇಡಿ: ಡಿಕೆಶಿ ಪತ್ನಿ, ತಾಯಿಗೆ ತಾತ್ಕಾಲಿಕ ರಿಲೀಫ್

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕೆಂದು ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್ ಅವರಿಗೆ ನೀಡಿದ್ದ ಸಮನ್ಸ್ ಅನ್ನು ಸದ್ಯದ ಮಟ್ಟಿಗೆ ಹಿಂದಕ್ಕೆ...

published on : 17th October 2019

ಡಿಕೆಶಿ ವಿಚಾರಣೆಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್: ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮತ್ತಷ್ಟು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

published on : 2nd October 2019

ರಾಜಕೀಯದಲ್ಲಿ ಬೆಳೆಯಲು ಡಿಕೆ.ಶಿವಕುಮಾರ್ ಸಹಾಯ ಮಾಡಿದ್ದರು: ಇಡಿಗೆ ಲಕ್ಷ್ಮೀ ಹೆಬ್ಬಾಳ್ಕರ್ 

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ, ರಾಜ್ಯ ಮಹಿಳಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಮಧ್ಯಾಹ್ನ 12ರಿಂದ ಸಂಜೆ 7.30ರವರೆಗೆ ವಿಚಾರಣೆ ನಡೆಸಿತು. 

published on : 21st September 2019

ತೆರಿಗೆ ಕಟ್ಟಿದಾಕ್ಷಣ ಡಿಕೆಶಿ ಕಳಂಕಿತ ಆಸ್ತಿ ಕಳಂಕ ರಹಿತವಾಗುವುದಿಲ್ಲ: ನ್ಯಾಯಾಲಯದಲ್ಲಿ ಇಡಿ ವಾದ

ತೆರಿಗೆ ಕಟ್ಟಿದಾಕ್ಷಣ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಕಳಂಕಿತ ಆಸ್ತಿಯೇನು ಕಳಂಕ ರಹಿತವಾಗಿ ಮಾರ್ಪಾಡುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯ ಗುರುವಾರ ವಾದ ಮಂಡಿಸಿದೆ. 

published on : 20th September 2019

ಡಿಕೆಶಿ ಪರ ಒಕ್ಕಲಿಗರ ಶಕ್ತಿ ಪ್ರದರ್ಶನ: ಪ್ರತಿಭಟನೆಗೆ ಗೈರಾಗಿದ್ದ ಹೆಚ್'ಡಿಕೆ

ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಹಾಗೂ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಬುಧವಾರ ಬೀದಿಗಿಳಿದಿದ್ದ ಒಕ್ಕಲಿಗ ಸಮುದಾಯ ಪ್ರತಿಭಟನಾ ರ್ಯಾಲಿಗಳ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ...

published on : 12th September 2019

ಡಿಕೆಶಿ ಪರ ಪ್ರತಿಭಟನೆ: ನಗರದಲ್ಲಿ ಭಾರೀ ಭದ್ರತೆ, 5 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಮಾಜಿ ಸಚಿವ ಡಿಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಗೆ ಬುಧವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

published on : 11th September 2019

ರಾಜಕೀಯ ದ್ವೇಷಕ್ಕೆ ನಾನು ಗುರಿಯಾಗಿದ್ದೇನೆ: ಡಿ.ಕೆ.ಶಿವಕುಮಾರ್

ನಾನು ಯಾವುದೇ ತಪ್ಪನ್ನೂ ಮಾಡಿಲ್ಲ, ರಾಜಕೀಯ ದ್ವೇಷಕ್ಕೆ ಗುರಿಯಾಗಿದ್ದೇನೆಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

published on : 11th September 2019

ದೇಶದಲ್ಲಿ ಕಾನೂನಿಗಿಂತಲೂ ರಾಜಕೀಯ ದ್ವೇಷವೇ ಬಲಿಷ್ಟವಾಗಿದೆ: ವಿಡಿಯೋ ಸಂದೇಶದಲ್ಲಿ ಡಿ.ಕೆ.ಶಿವಕುಮಾರ್  

ದೇಶದಲ್ಲಿ ಕಾನೂನಿಗಿಂತಲೂ ರಾಜಕೀಯ ದ್ವೇಷವೇ ಬಲಿಷ್ಠವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ. 

published on : 5th September 2019

ಡಿ.ಕೆ.ಶಿವಕುಮಾರ್ ಪ್ರಕರಣ ರಾಜಕೀಯಗೊಳಿಸುವ ಅಗತ್ಯ ಬಿಜೆಪಿಗಿಲ್ಲ: ಸಚಿವ ಆರ್.ಅಶೋಕ  

ಡಿ.ಕೆ.ಶಿವಕುಮಾರ್ ಪ್ರಕರಣವನ್ನು ರಾಜಕೀಯಗೊಳಿಸುವ ಅಗತ್ಯ ಬಿಜೆಪಿಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಮಂಗಳವಾರ ಹೇಳಿದ್ದಾರೆ. 

published on : 3rd September 2019
1 2 >