ಮದ್ಯ ಉದ್ಯಮ

ಮದ್ಯ ಉದ್ಯಮಿಗಳಿಗೆ ಗುಡ್ ನ್ಯೂಸ್: ಪರವಾನಗಿ ಶುಲ್ಕದಲ್ಲಿ ಶೇ.10ರಷ್ಟು ಕಡಿತ ಮಾಡಲು ಸರ್ಕಾರ ಚಿಂತನೆ?
ಕರ್ನಾಟಕದ ಲಿಕ್ಕರ್ ಉದ್ಯಮಕ್ಕೆ ಇಲ್ಲಿದೆ ಶುಭಸುದ್ದಿ. ಕೊರೋನಾ ಲಾಕ್ ಡೌನ್ ನಿಂದಾಗಿ ಸುಮಾರು ಎರಡು ತಿಂಗಳು ಉದ್ಯಮವಿಲ್ಲದೆ ಕಷ್ಟವಾಗಿರುವಾಗ ಅದಕ್ಕೆ ಸಹಾಯ ಮಾಡಲು ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇಕಡಾ 10ರಷ್ಟು ಕಡಿತ ಮಾಡಲು ಮತ್ತು ಎರಡು ಕಂತುಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡುವುದನ್ನು ಸರ್ಕಾರ ಪರಿಶೀಲಿಸುತ್ತಿದೆ.

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಮದ್ಯ ಉದ್ಯಮ: ಆನ್ಲೈನ್ ಮಾರಾಟಕ್ಕೆ ಅವಕಾಶ ಕೋರಿ ಸಿಐಬಿಎಸಿ ಕೇಂದ್ರಕ್ಕೆ ಮನವಿ
ಲಾಕ್ಡೌನ್ನಿಂದಾಗಿ ಆರ್ಥಿಕ ಒತ್ತಡ ಮತ್ತು ಉದ್ಯೋಗ ನಷ್ಟವನ್ನು ಎದುರಿಸುತ್ತಿರುವ ಮದ್ಯ ಮಾರಾಟ ಹಾಗೂ ತಯಾರಿಕಾ ಸಂಸ್ಥೆಗಳ ಚೇತರಿಕೆಗಾಗಿ ಆಲ್ಕೋಹಾಲ್ ಯುಕ್ತಪಾನೀಯ ಉದ್ಯಮವನ್ನು ಹಂತಹಂತವಾಗಿ ತೆರೆಯಲು ಅನುಮತಿ ನೀಡುವಂತೆ ಮದ್ಯ ಉತ್ಪಾದನಾ ಸಂಘ ಸಿಐಬಿಎಸಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸಿದೆ.

