ಕೊರೋನಾ ಸೋಂಕು ಕಂಡುಬಂದ 9 ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ 'ಲಾಕ್ಡೌನ್' ತೀರ್ಮಾನಕ್ಕೆ ಜನರು ಅಸಡ್ಡೆ ತೋರಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.