ರಾಜ್ಯರಾಣೆಬೆನ್ನೂರು ಪೊಲೀಸರ ಕಾರ್ಯಾಚರಣೆ: ಬ್ಯಾಂಕ್ ಠೇವಣಿ ಯಂತ್ರಕ್ಕೆ ಖೋಟಾ ನೋಟು ಜಮೆ ಮಾಡಲು ಯತ್ನಿಸುತ್ತಿದ್ದವರ ಬಂಧನ!
ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ನಿವಾಸಿ ಸುರೇಶ್ ಬಿಲ್ಲಾಳ್ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ, ಆತನಿಂದ 500 ರೂಪಾಯಿ ಮುಖಬೆಲೆಯ 100 ನಕಲಿ ನೋಟುಗಳನ್ನು (ಒಟ್ಟು 50,000 ರೂಪಾಯಿ ಮೌಲ್ಯದ) ಪೊಲೀಸರು ವಶಪಡಿಸಿಕೊಂಡರು.