• Tag results for Committee

ಕೋವಿಡ್-19 ಪರಿಸ್ಥಿತಿ ಕೈ ಮೀರಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ: ತಾಂತ್ರಿಕ ಸಲಹಾ ಸಮಿತಿ ಅಸಮಾಧಾನ!

ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಎಚ್ಚರಿಕೆ ಮತ್ತು ಶಿಫಾರಸ್ಸುಗಳನ್ನು ಸರ್ಕಾರ ನಿರ್ಲಕ್ಷಿಸಿದ್ದರಿಂದಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ತಜ್ಞರು ಹೇಳಿದ್ದಾರೆ.

published on : 20th April 2021

ಬಿಜೆಪಿಯ ಮಹತ್ವದ ಸಭೆಗಳಿಗೆ ವೇದಿಕೆಯಾಗಲಿದೆ ಒಕ್ಕಲಿಗರ ಪ್ರಬಲ ಕ್ಷೇತ್ರ ಹಾಸನ!

ಬಿಜೆಪಿ ಕಾರ್ಯಕಾರಿ ಸಮಿತಿ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆಗಳು ಒಕ್ಕಲಿಗ ಸಮುದಾಯದ ಪ್ರಬಲ ಕ್ಷೇತ್ರವಾಗಿರುವ ಹಾಸನದಲ್ಲಿ ನಡೆಯಲಿವೆ.

published on : 10th April 2021

ಉಪ ಚುನಾವಣೆ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ? ಏಪ್ರಿಲ್ 18ರ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ

ಪಕ್ಷ ಮತ್ತು ಸರ್ಕಾರದ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಿಜೆಪಿ ಕೋರ್ ಕಮಿಟಿ ಏಪ್ರಿಲ್ 18 ರಂದು ಸಭೆ ಸೇರಲಿದೆ.

published on : 9th April 2021

ಕೋವಿಡ್ ನಿಯಂತ್ರಣಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸುಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ: ಡಾ ಕೆ. ಸುಧಾಕರ್ 

ಆರೋಗ್ಯ ಇಲಾಖೆ ಮತ್ತು ಕೋವಿಡ್ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

published on : 5th April 2021

ಎಂಜಿನಿಯರಿಂಗ್ ದೋಷಗಳೇ ಭೂಕುಸಿತಕ್ಕೆ ಕಾರಣ: ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

ಎಂಜಿನಿಯರಿಂಗ್ ದೋಷಗಳೇ ರಾಜ್ಯದಲ್ಲಿ ಎದುರಾದ ಭೂಕುಸಿತಕ್ಕೆ ಕಾರಣ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ತಜ್ಞರ ಸಮಿತಿ ಸರ್ಕಾರಕ್ಕೆ ತಿಳಿಸಿದೆ. 

published on : 2nd April 2021

ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆ: ಕಮಿಟಿಯಲ್ಲಿ ಶ್ರೀರಾಮುಲುಗೆ ಸ್ಥಾನ; ಹಲವು ಮಹತ್ವದ ಬದಲಾವಣೆ

 ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆಯಾಗಿದ್ದು, 13 ಸದಸ್ಯರ, 3 ವಿಶೇಷ ಆಹ್ವಾನಿತರ ಕಮಿಟಿ ಪುನಾರಚನೆ ಆಗಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 

published on : 26th March 2021

ಉಪಚುನಾವಣೆ ಕದನ: ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ

ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

published on : 21st March 2021

ಮೀಸಲಾತಿ ಬೇಡಿಕೆ: ತ್ರಿಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ

ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸಲು ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸುಭಾಷ್ ಆಡಿ ನೇತೃತ್ವದಲ್ಲಿ ತ್ರಿಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ಆದೇಶಿಸಿದೆ.

published on : 10th March 2021

ಮೀಸಲಾತಿ ಬೇಡಿಕೆ ಪರಿಶೀಲನೆಗೆ ಸಮಿತಿ ರಚಿಸಲು ಸಚಿವ ಸಂಪುಟ ತೀರ್ಮಾನ: ಬಸವರಾಜ್ ಬೊಮ್ಮಾಯಿ

ಪಂಚಮಸಾಲಿ, ಕುರುಬ ಹಾಗೂ ಇತರೆ ಸಮುದಾಯಗಳಿಂದ ಮೀಸಲಾತಿಗೆ ಒತ್ತಾಯ ಹೆಚ್ಚುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

published on : 3rd March 2021

ಚೆನ್ನೈ: ಹಿರಿಯ ಕಮ್ಯುನಿಸ್ಟ್ ನಾಯಕ ಡಿ.ಪಾಂಡಿಯಾನ್ ನಿಧನ 

ಹಿರಿಯ ಕಮ್ಯುನಿಸ್ಟ್ ನಾಯಕ, ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಡಿ ಪಾಂಡಿಯಾನ್ ಶುಕ್ರವಾರ ಬೆಳಗ್ಗೆ ಸುದೀರ್ಘ ಅನಾರೋಗ್ಯ ಬಳಿಕ ನಿಧನರಾಗಿದ್ದಾರೆ. 88 ವರ್ಷದ ಸಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ಪಾಂಡಿಯಾನ್ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಪಿ ಜವಾಹರ್ ನನ್ನು ಅಗಲಿದ್ದಾರೆ.

published on : 26th February 2021

ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಾಗಿದೆ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್

ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ.  

published on : 23rd February 2021

ಶಾಲಾ ಶುಲ್ಕ ವಿವಾದ: ರಾಜ್ಯ ಸರ್ಕಾರದಿಂದ ಪರಿಹಾರ ಸಮಿತಿ ರಚನೆ

2020-21ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರ ಮೇಲೆ ಹೇರಲಾಗುವ ಟ್ಯೂಶನ್ ಶುಲ್ಕದಲ್ಲಿ ಶೇಕಡಾ 30ರಷ್ಟು ಕಡಿತ ಮಾಡುವುದಾಗಿ ಹೇಳಿರುವ ಶಿಕ್ಷಣ ಇಲಾಖೆಯ ನಿರ್ಧಾರದ ಬಗ್ಗೆ ಉಂಟಾಗಿರುವ ವಿವಾದವನ್ನು ಬಗೆಹರಿಸಲು ವಿವಾದ ಬಗೆಹರಿಯುವಿಕೆ ಸಮಿತಿಗಳನ್ನು ರಚಿಸಲಾಗಿದೆ.

published on : 4th February 2021

ಪರಿಷತ್ ಗದ್ದಲಕ್ಕೆ, ಹೊರಟ್ಟಿ, ಬಿಜೆಪಿ ಸದಸ್ಯರೇ ಕಾರಣ: ಸದನ ಸಮಿತಿ ವರದಿ

ಡಿಸೆಂಬರ್ 15 ರಂದು ವಿಧಾನಪರಿಷತ್‌ನಲ್ಲಿ ನಡೆದ ಕೋಲಾಹಲದ ಕುರಿತಾಗಿ ಸದಸ್ಯ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ನೀಡಿದ ಮಧ್ಯಂತರ ವರದಿಯನ್ನು ಶುಕ್ರವಾರ ಸದನದಲ್ಲಿ ಮಂಡಿಸಲಾಗಿದೆ.

published on : 30th January 2021

ಕಾಂಗ್ರೆಸ್ ನಾಯಕರ ಒತ್ತಾಯವೇನು ಎಂಬುದು ತಿಳಿದಿಲ್ಲ, ಸಭೆಗೆ ಬಂದರೆ ಚರ್ಚೆ ಮಾಡಬಹುದು: ಕಾಗೇರಿ

ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ‌ ಸಭೆ‌ ನಡೆಯಿತು. ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಸಭೆಗೆ ಈ ಹಿಂದೆ ಮಾಹಿತಿ ನೀಡಿದಂತೆ ಕಾಂಗ್ರೆಸ್ ಪಕ್ಷ ಹಾಜರಾಗಲಿಲ್ಲ.

published on : 30th January 2021

ಸಾಲದ ತೀರಿಸಲಾಗದೆ ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

ಒಂದೇ ಕುಟುಂಬದ ನಾಲ್ವರು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ‌ ಹೃದಯ ವಿದ್ರಾವಕ ಘಟನೆ ಬುಧವಾರ ತಡ ರಾತ್ರಿ ಜಿಲ್ಲೆಯ ರಾಯಬಾಗ ಬಳಿ ನಡೆದಿದೆ.

published on : 28th January 2021
1 2 3 4 >