• Tag results for Cricket

ಐಸಿಸಿ ನೂತನ ಅಧ್ಯಕ್ಷರಾಗಿ ನ್ಯೂಜಿಲೆಂಡ್ ನ ಗ್ರೇಗ್ ಬಾರ್ಕ್ಲೇ ಆಯ್ಕೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನ ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಅವರು ಆಯ್ಕೆಗೊಂಡಿದ್ದಾರೆ. 

published on : 25th November 2020

ನನ್ನ ಅನುಭವವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ನೀಡಲು ಬಯಸುತ್ತೇನೆ: ಸುರೇಶ್ ರೈನಾ

ಜಮ್ಮು ಮತ್ತು ಕಾಶ್ಮೀರ ಕ್ರೀಡಾ ಸಮಿತಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು 15 ವರ್ಷಗಳ ಕಾಲ ಭಾರತ ಪರ ಆಡಿದ್ದರು ಮತ್ತು ಈಗ ಈ ಅನುಭವವನ್ನು ಜಮ್ಮು ಮತ್ತು ಕಾಶ್ಮೀರದ ಆಟಗಾರರಿಗೆ ತಿಳಿಸುತ್ತೇನೆ ಎಂದು ಹೇಳಿದರು.

published on : 25th November 2020

ರೆಟ್ರೋ ಲುಕ್: ಹೊಸ ಜೆರ್ಸಿಯೊಂದಿಗಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ ಶಿಖರ್ ಧವನ್

ಭಾರತ ಕ್ರಿಕೆಟ್ ತಂಡದ ಎಡಗೈ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮಂಗಳವಾರ ಟೀಮ್ ಇಂಡಿಯಾದ ಹೊಸ ಜೆರ್ಸಿಯೊಂದಿಗಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಧರಿಸಲಿದೆ.

published on : 24th November 2020

ನಾಯಕನ ಸಾಮರ್ಥ್ಯವನ್ನೇ ಪ್ರಶ್ನಿಸುತ್ತಿದ್ದೀರಿ ಎಷ್ಟು ಸರಿ: ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಪಾರ್ಥಿವ್‌

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಕ್ತಾಯವಾದ ಬೆನ್ನಲ್ಲೆ ವಿರಾಟ್‌ ಕೊಹ್ಲಿಗಿಂತ ಐದು ಬಾರಿ ಐಪಿಎಲ್‌ ವಿಜೇತ ರೋಹಿತ್‌ ಶರ್ಮಾ ನಾಯಕತ್ವ ಉತ್ತಮ ಎಂದು ಹಲವು ದಿಗ್ಗಜರು ಅಭಿಪ್ರಾಯವನ್ನು ಹೊರಹಾಕಿದ್ದರು. ಇದೀಗ ಆರ್‌ಸಿಬಿ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

published on : 24th November 2020

ಆಸ್ಟ್ರೇಲಿಯಾ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಆಘಾತ: ರೋಹಿತ್‌, ಇಶಾಂತ್‌ ಆಡುವುದು ಡೌಟ್‌

ಮುಂದಿನ ತಿಂಗಳು ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದ ಸ್ಟಾರ್ ಆಟಗಾರರಾದ ರೋಹಿತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಹೊರಗುಳಿಯುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆ ಮೂಲಕ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾಗೆ ಭಾರಿ ಆಘಾತ ಉಂಟಾಗಿದೆ.

published on : 24th November 2020

ಕೊಹ್ಲಿ ಅಬ್ಬರಿಸದಿದ್ದರೆ ಆಸಿಸ್ ಗೆ ಭಾರತದ ವಿರುದ್ಧ 4-0 ಅಂತರದ ಗೆಲುವು: ಮೈಕೆಲ್ ಕ್ಲಾರ್ಕ್

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಆಬ್ಬರಿಸದಿದ್ದರೆ ಆಸಿಸ್ ತಂಡಕ್ಕೆ 4-0 ಅಂತರದ ಗೆಲುವು ದೊರೆಯಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

published on : 24th November 2020

ಆಸಿಸ್ ಪ್ರವಾಸದಲ್ಲಿರುವ ಕ್ರಿಕೆಟಿಗ ಮಹಮದ್ ಸಿರಾಜ್ ಗೆ ಪಿತೃವಿಯೋಗ

ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ 53 ವರ್ಷದ ಮೊಹಮ್ಮದ್ ಗೌಸ್ ಅವರು ಹೈದರಾಬಾದಿನಲ್ಲಿ ವಿಧಿವಶರಾಗಿದ್ದಾರೆ.

published on : 21st November 2020

ವಿರಾಟ್ ಅವರಂತಹ ಆಟಗಾರರಿಂದಲೇ ಟೆಸ್ಟ್ ಕ್ರಿಕೆಟ್ ಜೀವಂತ: ಎಲ್ಲೆನ್ ಬಾರ್ಡರ್

ಭಾರತದ ನಾಯಕ ವಿರಾಟ್ ಕೊಹ್ಲಿಯಂತಹ ಕ್ರಿಕೆಟಿಗರಿಂದ ಟೆಸ್ಟ್ ಕ್ರಿಕೆಟ್ ಇಂದು ಜೀವಂತವಾಗಿದೆ ಎಂದು ಆಸ್ಟ್ರೇಲಿಯಾದ ಮೊದಲ ವಿಶ್ವಕಪ್ ವಿಜೇತ ನಾಯಕ ಎಲ್ಲೆನ್ ಬಾರ್ಡರ್ ಅಭಿಪ್ರಾಯಪಟ್ಟಿದ್ದಾರೆ.

published on : 20th November 2020

11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್‌ ದಂಪತಿ

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು.

published on : 20th November 2020

ಯುಜುವೇಂದ್ರ ಚಹಾಲ್ ವಿಡಿಯೋ ನೋಡಿ ಕಾಲೆಳೆದ ಡೇಲ್ ಸ್ಟೇನ್, ವಿಡಿಯೋ!

ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಹಾಗೂ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೇನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಸ್ಯಭರಿತ ವಿನೋದವನ್ನು ಹಂಚಿಕೊಂಡಿದ್ದಾರೆ.

published on : 20th November 2020

ಪ್ರೇಕ್ಷಕರಿಗೆ ಅವಕಾಶ ಬೆನ್ನಲ್ಲೇ ಭಾರತ-ಆಸೀಸ್ ನಡುವಿನ 3 ಟಿ20, 2 ಏಕದಿನ ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್!

ಕೊರೋನಾ ಮಹಾಮಾರಿ ಹಾವಳಿಯ ನಡುವೆಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಸರಣಿಗಳು ನಡೆಯಲಿದ್ದು ಮೊದಲ ದಿನವೇ ಮೂರು ಟಿ20 ಹಾಗೂ ಎರಡು ಏಕದಿನ ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

published on : 20th November 2020

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು: ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜಾರಿಗೆ ತಂದಿದೆ. ಈ ನಿಯಮದ ಅನ್ವಯ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. 

published on : 20th November 2020

ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್: ಪರಿಷ್ಕೃತ ಅಂಕಪಟ್ಟಿ ಬಿಡುಗಡೆ ಮಾಡಿದ ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಆರಂಭಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂತಿಮ ಹಂತಕ್ಕೆ ಬಂದು ನಿಂತಿರುವಂತೆಯೇ ಐಸಿಸಿ ತಂಡಗಳ ಪರಿಷ್ಕೃತ ಅಂಕ ಪಟ್ಟಿ ಬಿಡುಗಡೆ ಮಾಡಿದೆ.

published on : 19th November 2020

ರೋಹಿತ್‌ ಅನುಪಸ್ಥಿತಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತಕ್ಕೆ ದೊಡ್ಡ ನಷ್ಟ: ಪಾಕ್ ಮಾಜಿ ಆಟಗಾರ

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಎಂದರೆ ಎಲ್ಲಾ ತಂಡಗಳಿಗೂ ಭಯವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ರಮೀಝ್‌ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

published on : 19th November 2020

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಬೆ ಕುರುವಿಲ್ಲಾಗೆ ಒಲಿಯಲಿದೆ ರಾಷ್ಟ್ರೀಯ ಆಯ್ಕೆಗಾರ ಸ್ಥಾನ!

ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದನ್ನು ಭರ್ತಿ ಮಾಡಲು ಟೀಂ ಇಂಡಿಯಾ ಮಾಜಿ ಆಟಗಾರ, ಮುಂಬೈ ವೇಗಿ ಅಬೆ ಕುರುವಿಲ್ಲಾ ಕಣದಲ್ಲಿದ್ದಾರೆ.

published on : 19th November 2020
1 2 3 4 5 6 >