- Tag results for Deve Gowda
![]() | ಜೆಡಿಎಸ್ ಸಮಾವೇಶದಲ್ಲಿ ಮತ್ತೆ ಕಣ್ಣೀರಧಾರೆ: ಅಪ್ಪನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಣ್ತಮ್ಮಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ವ್ಯಾಪ್ತಿಯ ಸೋಮನಹಳ್ಳ ಅಮ್ಮನವರ ದೇಗುಲ ಆವರಣದಲ್ಲಿ ಇಂದು ಭಾನುವಾರ ಜೆಡಿಎಸ್ ಸಮಾವೇಶ ಆಯೋಜನೆಗೊಂಡಿತ್ತು. ಜ್ಯೋತಿ ಬೆಳಗುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ ಹೆಚ್ಡಿಕೆ ಭಾಷಣ ವೇಳೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. |
![]() | ರಾಷ್ಟ್ರಪತಿ ಚುನಾವಣೆ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ದ್ರೌಪದಿ ಮುರ್ಮುಕರ್ನಾಟಕ ಪ್ರವಾಸದಲ್ಲಿರುವ ರಾಷ್ಟ್ರಪತಿ ಹುದ್ದೆಯ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾನುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದರು. |
![]() | ಗೌಡರಿಗೆ ತುಂಬಾ ವಯಸ್ಸಾಗಿದೆ, ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಆರೋಗ್ಯ ಸಹಕರಿಸುತ್ತಿಲ್ಲ: ಹೊಸ ಪೀಳಿಗೆಯಿಂದ ವರ್ಚಸ್ಸಿಗೆ ಧಕ್ಕೆ!ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ತುಂಬಾ ವಯಸ್ಸಾಗಿದೆ. ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಆರೋಗ್ಯ ಸಹಕರಿಸುತ್ತಿಲ್ಲ ಎಂದು ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಹೇಳಿದ್ದಾರೆ |
![]() | ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಚಕ್ರತೀರ್ಥ ನೇಮಕ ಮಾಡಿದ್ದೇ ಸರ್ಕಾರ ಮಾಡಿದ ಮೊದಲ ತಪ್ಪು: ದೇವೇಗೌಡಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮುಖ್ಯಸ್ಥನಾಗಿ ರೋಹಿತ್ ಚಕ್ರತೀರ್ಥರನ್ನು ನೇಮಕ ಮಾಡಿದ್ದೇ ಸರ್ಕಾರ ಮಾಡಿದ ಮೊದಲ ತಪ್ಪು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ. |
![]() | ಪಠ್ಯ ಪುಸ್ತಕ ಪರಿಷ್ಕರಣೆ: ದೇವೇಗೌಡರ ಸಲಹೆ ಗಂಭೀರವಾಗಿ ಪರಿಗಣನೆ – ಸಿಎಂ ಬೊಮ್ಮಾಯಿಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ. |
![]() | ಜೆಡಿಎಸ್ ಜನತಾ ಜಲಧಾರೆ ಸಮಾರೋಪ: ಇಬ್ಬರು ಶಾಸಕರು ಗೈರುಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರ ತವರು ಕ್ಷೇತ್ರದಿಂದ ಇಬ್ಬರು ಶಾಸಕರು ಹಾಜರಾಗಿರುವುದು ಕಂಡು ಬಂದಿತ್ತು. |
![]() | ನೀರಿನ ಬಿಕ್ಕಟ್ಟಿನಲ್ಲಿ ಕರ್ನಾಟಕ: ಹೆಚ್.ಡಿ.ದೇವೇಗೌಡಜನರಿಗೆ ಕುಡಿಯುವ ನೀರೊದಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಜೆಡ್'ಎಸ್'ನ ಬದ್ಧತೆ ಪ್ರದರ್ಶಿಸಲು ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದ ಭಾಗವಾಗಿ ಪ್ರಮುಖ ನದಿಗಳಿಂದ ಜಲ ಸಂಗ್ರಹಿಸುವ 15 ಗಂಗಾರಥಗಳಿಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಮಂಗಳವಾರ ಹಸಿರು ನಿಶಾನೆ ತೋರಿದರು. |
![]() | ಬೆಂಗಳೂರಿಗರು ಕುಡಿಯುವ ನೀರಿಗೂ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ: ರಾಜ್ಯಸಭೆಯಲ್ಲಿ ದೇವೇಗೌಡ ಭಾವುಕ ಭಾಷಣರಾಜ್ಯಸಭೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ವಿಚಾರವನ್ನು ಪ್ರಸ್ತಾಪಿಸಿದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಭಾವುಕರಾಗಿ ಭಾಷಣೆ ಮಾಡಿದರು. |
![]() | ರಾಜ್ಯಸಭೆಯಲ್ಲಿ ರಾಗಿ, ಜೋಳ ವಿಷಯ ಪ್ರಸ್ತಾಪಿಸಿದ ದೇವೇಗೌಡ; ಯಾರು ಖರೀದಿಸುತ್ತಿಲ್ಲವೆಂದು ನೊಂದುಕೊಂಡ ಮಾಜಿ ಪ್ರಧಾನಿ!ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ರಾಜ್ಯಸಭೆಯಲ್ಲಿ ರಾಗಿ ಮತ್ತು ಮೆಕ್ಕೆ ಜೋಳದ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನ ಸೆಳೆದರು. |
![]() | ಮಾಜಿ ಪ್ರಧಾನಿ ದೇವೇಗೌಡರ ಪತ್ನಿಗೆ ಐಟಿ ನೋಟಿಸ್; ಎಚ್ ಡಿ ರೇವಣ್ಣ ಗರಂಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿದ್ದು, ನಮ್ಮ ತಾಯಿಗೆ ಐಟಿ ನೋಟಿಸ್ ನೀಡಿದ್ದಾರೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಐಟಿ ನೋಟಿಸ್ ನೀಡಿದ್ದಾರೆ... |
![]() | ಕರ್ನಾಟಕದಲ್ಲಿ ಭಾರತೀಯ ರೈಲ್ವೆ ಹೊಸ ಮಾರ್ಗಗಳನ್ನು ಆರಂಭಿಸುವ ಅಗತ್ಯವಿದೆ: ಎಚ್.ಡಿ ದೇವೇಗೌಡಪ್ರಯಾಣಿಕರಿಗೆ ಅನುಕೂಲವಾಗುವಂತೆ ಕರ್ನಾಟಕದಲ್ಲಿ ರೈಲ್ವೆ ಇಲಾಖೆಯು ಹೊಸ ಮಾರ್ಗಗಳನ್ನು ಪ್ರಾರಂಭಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ರಾಜ್ಯಸಭೆಯಲ್ಲಿ ಒತ್ತಾಯಿಸಿದರು. |
![]() | ರಾಗಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ, ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಬೇಕು: ಹೆಚ್.ಡಿ.ದೇವೇಗೌಡರಾಗಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಒತ್ತಾಯಿಸಿದ್ದಾರೆ. |
![]() | ಕರಾವಳಿ ಕರ್ನಾಟಕದಲ್ಲಿ ಕೆಲವು ಶಕ್ತಿಗಳು ಬಿರುಕು ಮೂಡಿಸುತ್ತಿವೆ: ದೇವೇಗೌಡಹಿಜಾಬ್ ವಿವಾದಕ್ಕೆ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಸಂಘಟನೆಯನ್ನು ದೂಷಿಸಲು ನಿರಾಕರಿಸಿರುವ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ರಾಜಕೀಯ ಲಾಭಕ್ಕಾಗಿ ಕೆಲವು ಶಕ್ತಿಗಳು ಕರಾವಳಿ ಭಾಗದಲ್ಲಿ ಬಿರುಕು ಮೂಡಿಸುತ್ತಿವೆ ಎಂದು ಶನಿವಾರ ಹೇಳಿದ್ದಾರೆ. |
![]() | ಹಿಜಾಬ್ ವಿವಾದ: 2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ- ಮಾಜಿ ಪ್ರಧಾನಿ ದೇವೇಗೌಡಕೆಲ ಶಕ್ತಿಗಳು ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ತಪ್ಪು ಹಾದಿಗೆಳೆಯುತ್ತಿದ್ದು, ಹಿಜಾಬ್ ವಿವಾದದಿಂದ 2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಹೇಳಿದ್ದಾರೆ. |
![]() | ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು, ಹಳೇಬೀಡು ನಾಮನಿರ್ದೇಶನ: ಪ್ರಧಾನಿಗೆ ದೇವೇಗೌಡ ಧನ್ಯವಾದಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳನ್ನು 2022-23ನೇ ಸಾಲಿನ ವಿಶ್ವ-ಸಂಸ್ಥೆಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ (ಯುನೆಸ್ಕೊ)ಗೆ ಸೇರಿಸಬೇಕು... |