• Tag results for Government

ಉದ್ಧವ್ ಠಾಕ್ರೆ ಸರ್ಕಾರ ಪತನದೊಂದಿಗೆ ಮತ್ತೊಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ 

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾದಿ ಸರ್ಕಾರ ಪತನದೊಂದಿಗೆ ಇದೀಗ ಮತ್ತೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ.  ರಾಜಸ್ಥಾನ, ಛತ್ತೀಸ್ ಗಢದಲ್ಲಿ ಮಾತ್ರ ತನ್ನ ಸ್ವಂತ ಸಾಮರ್ಥ್ಯದೊಂದಿಗೆ ಆಡಳಿತ ನಡೆಸುತ್ತಿದ್ದು, ಜಾರ್ಖಂಡ್ ನಲ್ಲಿ ಜೆಎಂಎಂ ಮತ್ತು ಆರ್ ಜೆಡಿಯೊಂದಿಗೆ ಮೈತ್ರಿ  ಮಾಡಿಕೊಂಡಿದೆ.

published on : 30th June 2022

ಪೋಷಣ್ ಯೋಜನೆ ಪ್ರಯೋಜನ ಪಡೆಯಲು ಮಕ್ಕಳ ಆಧಾರ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಪೋಷಣ್ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಮಕ್ಕಳ ಆಧಾರ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಗುರುವಾರ ಸ್ಪಷ್ಪಪಡಿಸಿದೆ. ತಾಯಿಯ ಬಯೋಮೆಟ್ರಿಕ್ ಕಾರ್ಡ್ ಬಳಸಿ ಪೋಷಣ್ ಆ್ಯಪ್ ನಲ್ಲಿ ನೋಂದಣಿಯಾಗಿ ಇದರ ಅನುಕೂಲ ಪಡೆಯಬಹುದಾಗಿದೆ.

published on : 30th June 2022

ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಉದ್ಧವ್: ಬಿಜೆಪಿ ಸಂಪರ್ಕದಲ್ಲಿದ್ದ ಮುಖ್ಯಮಂತ್ರಿ!

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಸಿಎಂ ಉದ್ಧವ್ ಠಾಕ್ರೆ ಜೂ.22 ರಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಈಗ ಬಹಿರಂಗವಾಗಿದೆ. 

published on : 28th June 2022

16 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸಂಜೀವ್ ಪಾಟೀಲ್ ಬೆಳಗಾವಿಗೆ ಎತ್ತಂಗಡಿ; ಬೆಂಗಳೂರಿನ 5 ವಿಭಾಗಕ್ಕೆ ಹೊಸ ಡಿಸಿಪಿಗಳ ನೇಮಕ!

 ರಾಜ್ಯ ಸರ್ಕಾರ 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಐದು ವಿಭಾಗಗಳಿಗೆ ಹೊಸ ಡಿಸಿಪಿಗಳನ್ನು ನೇಮಕ ಮಾಡಲಾಗಿದೆ.

published on : 28th June 2022

ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ: ಮಾರ್ಗಸೂಚಿ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಕಾಶಿ ಕಾರೀಡಾರ್‌ ಗೆ ರಾಜ್ಯದ ಜನರು ಭೇಟಿ ನೀಡುವುದನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ “ಕಾಶಿ...

published on : 27th June 2022

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ: ಸಿದ್ದರಾಮಯ್ಯ

ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಚಿಕ್ಕ ಮಕ್ಕಳ ಮನಸನ್ನು ವಿಷಪೂರಿತಗೊಳಿಸುವಲ್ಲಿ ಸಂಘ ಪರಿವಾರ ರಹಸ್ಯವಾಗಿ ವರ್ತಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ವಾಗ್ದಾಳಿ ನಡೆಸಿದರು.

published on : 26th June 2022

ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು: ರಾಜ್ಯಪಾಲ ಕೊಶ್ಯಾರಿ, ಸ್ಪೀಕರ್ ಪಾತ್ರವೇನು?

ಮಹಾರಾಷ್ಟ್ರ ಸರ್ಕಾರ ಈಗ ದೇಶದ ರಾಜಕೀಯದ ಕೇಂದ್ರಬಿಂದು. ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯವೆದ್ದು ತಮ್ಮ ಜೊತೆ 37 ಶಾಸಕರನ್ನು ಕರೆದುಕೊಂಡು ಗುವಾಹಟಿಯ ಹೊಟೇಲ್‌ನಲ್ಲಿ ಬೀಡುಬಿಟ್ಟಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರ ಬಿದ್ದುಹೋಗುವ ಲಕ್ಷಣಗಳು ಗೋಚರಿಸುತ್ತಿವೆ.

published on : 24th June 2022

ಎಂವಿಎ ಸರ್ಕಾರ ತೊರೆಯಲು ಸಿದ್ಧ, 24 ಗಂಟೆಯೊಳಗೆ ಮುಂಬೈಗೆ ಬನ್ನಿ: ಶಿವಸೇನಾ ಬಂಡಾಯ ಶಾಸಕರಿಗೆ ರಾವತ್ ಕರೆ

ಏಕನಾಥ್ ಶಿಂಧೆ ನೇತೃತ್ವದಲ್ಲಿನ ಬಂಡಾಯ ಶಾಸಕರು 24 ಗಂಟೆಯೊಳಗೆ ಅಸ್ಸಾಂನಿಂದ ಮುಂಬೈಗೆ ಮರಳಿದರೆ ಮಹಾ ವಿಕಾಸ್ ಆಘಾದಿ ಸರ್ಕಾರದಿಂದ ಹೊರಬರಲು  ಶಿವಸೇನೆ ಸಿದ್ಧವಾಗಿದೆ ಮತ್ತು ಸಮಸ್ಯೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.

published on : 23rd June 2022

'ವರ್ಷ ಬಂಗಲೆ ಬಾಗಿಲು ನಮಗೆ ಯಾವತ್ತೂ ತೆರೆಯಲೇ ಇಲ್ಲ, ನಮ್ಮನ್ನು ಅವಮಾನಿಸಲಾಗುತ್ತಿತ್ತು' ಬಂಡಾಯ ಶಾಸಕರಿಂದ ಸಿಎಂ ಉದ್ಧವ್ ಠಾಕ್ರೆಗೆ ಪತ್ರ

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಸಂಪುಟ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳೆಯಕ್ಕೆ ಸೇರಲು ಶಿವಸೇನೆಯ ಇನ್ನೂ ಮೂವರು ಶಾಸಕರು ಗುರುವಾರ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ.

published on : 23rd June 2022

ಪತನದತ್ತ 'ಮಹಾ' ಮೈತ್ರಿ ಸರ್ಕಾರ: ಕಂಗನಾ ರಾನಾವತ್ ಹಳೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್!

ಅದು 2020ರ ಸೆಪ್ಟೆಂಬರ್‌, ಅಕ್ರಮ ನಿರ್ಮಾಣದ ಆರೋಪದ ಮೇಲೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರ ಮುಂಬೈ ಕಚೇರಿಯನ್ನು ನೆಲಸಮಗೊಳಿಸಿತ್ತು. 

published on : 23rd June 2022

'ಅಗ್ನಿಫಥ್' ಯೋಜನೆಗೆ ವಿರೋಧ ಸಲ್ಲದು: ತಮ್ಮ ಸಹೋದರನ ಪುತ್ರನ ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ; ಎಸ್ ಎಂ ಕೃಷ್ಣ

ಸೇನೆಗೆ ಅಲ್ಪಾವಧಿಗೆ ಯುವಕರ ನೇಮಕಾತಿ ‘ಅಗ್ನಿಪಥ್’ ಯೋಜನೆಯನ್ನು ಶ್ಲಾಘಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಯೋಜನೆಗೆ ವಿರೋಧ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

published on : 23rd June 2022

10ನೇ ತರಗತಿ ಪೂರಕ ಪರೀಕ್ಷೆಗೆ ಶುಲ್ಕ ವಿನಾಯ್ತಿ, ಪಾವತಿಸಿದ ಶುಲ್ಕವನ್ನು ಮರುಪಾವತಿಸಲು ಆಂಧ್ರ ಸರ್ಕಾರ ನಿರ್ಧಾರ

ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಸುಧಾರಿತ ಪೂರಕ ಪರೀಕ್ಷೆಗಳಿಗೆ ಶುಲ್ಕ ಪಡೆಯದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಕಚೇರಿ ಅನುಮೋದನೆ ನೀಡಿದೆ. 

published on : 22nd June 2022

ಪೀಣ್ಯ ಅಭಿವೃದ್ಧಿಗೆ 100 ಕೋಟಿ ರೂ. ಯೋಜನೆಗೆ ಅನುಮೋದನೆ!

ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ಅವರ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಅನುಮೋದನೆ ನೀಡಿದೆ.

published on : 21st June 2022

ರೈತರಿಗೆ ಅನುಕೂಲವಾಗುವಂತೆ ಎನ್‌ಡಿಆರ್‌ಎಫ್ ನಿಯಮಗಳನ್ನು ಕೂಡಲೇ ತಿದ್ದುಪಡಿ ಮಾಡಿ: ಸಿದ್ದರಾಮಯ್ಯ

ಎನ್‌ಡಿಆರ್‌ಎಫ್ ನಿಯಮಗಳನ್ನು ಕೂಡಲೇ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

published on : 21st June 2022

ಅಕ್ರಮ ವಲಸಿಗರ ಚಲನವಲನ ಪತ್ತೆಗೆ ಎಲೆಕ್ಟ್ರಾನಿಕ್ ಟ್ಯಾಗ್; ಬ್ರಿಟನ್ ನೂತನ ಪ್ರಯೋಗ; ಶೀಘ್ರ ಆರಂಭ

ಅಕ್ರಮ ವಲಸಿಗರ ಚಲನವಲನ ಪತ್ತೆಗೆ ಬ್ರಿಟನ್ ಸರ್ಕಾರ ವಿಶೇಷ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು ಪ್ರವಾಸಿಗರ ಕೈಗೆ ಟ್ಯಾಗ್ ಹಾಕುವ ವಿಶೇಷ ಯೋಜನೆಯೊಂದನ್ನು ಆರಂಭಿಸಲಿದೆ.

published on : 18th June 2022
1 2 3 4 5 6 > 

ರಾಶಿ ಭವಿಷ್ಯ