• Tag results for Gujarat

ಗುಜರಾತ್ ಸಚಿವರ ಮಗನನ್ನು ಬಂಧಿಸಿದ್ದ ಗುಜರಾತ್ ಮಹಿಳಾ ಪೊಲೀಸ್ ರಾಜೀನಾಮೆ!

ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಗುಜರಾತ್ ಸಚಿವರ ಮಗನನ್ನು ಬಂಧಿಸಿದ್ದ ಗುಜರಾತ್ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿದ್ದಾರೆ.

published on : 16th July 2020

ಗುಜರಾತ್‌: ಭಾವನಗರದ ಸಿಹೋರ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ಅಪವಿತ್ರ

ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯ ಸಿಹೋರ್ ಪಟ್ಟಣದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 13th July 2020

ಗುಜರಾತ್: 'ಕ್ಯಾಚ್ ಮಿ ಇಫ್ ಯೂ ಕ್ಯಾನ್' ಚಿತ್ರದಿಂದ ಪ್ರಭಾವಿತನಾಗಿ 50 ಲಕ್ಷ ವಂಚನೆ; 23 ವರ್ಷದ ಯುವಕನ ಬಂಧನ

ಕಳೆದ ನಾಲ್ಕು ವರ್ಷಗಳಲ್ಲಿ 15 ವಿವಿಧ ಸಂಸ್ಥೆಗಳಿಗೆ ಫೋರ್ಜರಿ ಮೂಲಕ ಕನಿಷ್ಠ 50 ಲಕ್ಷ ರೂ.ಗಳ ಮೋಸ ಮಾಡಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಗುಜರಾತ್‌ ಪೊಲೀಸರು ಬಂಧಿಸಲಾಗಿದೆ.

published on : 30th June 2020

ಗುಜರಾತ್ ಮಾಜಿ ಸಿಎಂ ಶಂಕರ್ ಸಿಂಗ್ ವಘೇಲಾ ಗೆ ಕೊರೋನಾ ಸೋಂಕು

ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ ಎಂದು ತಿಳಿದುಬಂದಿದೆ.

published on : 28th June 2020

ರಾಜ್ಯಸಭೆ ಚುನಾವಣೆಗೆ ಮತ ಹಾಕಲು ಆಸ್ಪತ್ರೆಯಿಂದ ಮತಗಟ್ಟೆಗೆ ಬಂದ ಗುಜರಾತ್ ಶಾಸಕ!

ರಾಜ್ಯಸಭಾ ಚುನಾವಣೆಗೆ ಗುಜರಾತ್ ನ ಮಟರ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೇಸರಿಸಿಂಗ್ ಜೆಸಂಗ್‌ಭಾಯ್ ಸೋಲಂಕಿ ಆಂಬ್ಯುಲೆನ್ಸ್ ನಲ್ಲಿ ಬಂದು ಮತ ಚಲಾಯಿಸಿದ ಘಟನೆ ನಡೆದಿದೆ.

published on : 19th June 2020

ಕೋವಿಡ್ ಮರಣ ದರ ಹೆಚ್ಚಳ: ಗುಜರಾತ್ ಮಾದರಿ ಬಹಿರಂಗ, ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ದೇಶದಲ್ಲಿ ಅತಿ ಹೆಚ್ಚು ಎಂಬಂತೆ ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಸಾವಿನ ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

published on : 16th June 2020

ಗುಜರಾತ್ ನಲ್ಲಿ 5.5ರಷ್ಟು ತೀವ್ರತೆಯ ಭೂಕಂಪ, ಆವರಿಸಿದ ಭೀತಿ

ಕೊರೋನಾ ಸಂಕಷ್ಟ ಗುಜರಾತ್ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ ಮತ್ತೊಂದು ಕಡೆ, ಭಾನುವಾರ ಭೂಕಂಪನ ಸಂಭವಿಸಿದ್ದು, ಜನತೆಯಲ್ಲಿ ಭೀತಿಯ ವಾತವರಣ ನಿರ್ಮಾಣವಾಗಿದೆ.

published on : 14th June 2020

ರಾಜ್ಯಸಭೆ ಚುನಾವಣೆ: ಗುಜರಾತ್ ಕಾಂಗ್ರೆಸ್ ಶಾಸಕರು ರಾಜಸ್ಥಾನದ ರೆಸಾರ್ಟ್ ಗೆ ಶಿಫ್ಟ್

ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತಿನ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್, ಮುಂದೆ ಸಂಭಾವ್ಯ ರಾಜೀನಾಮೆಯನ್ನು ತಪ್ಪಿಸುವ ಉದ್ದೇಶದಿಂದ ಉಳಿದ ಶಾಸಕರನ್ನು ನೆರೆ ರಾಜ್ಯ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರಸ್ತೆಯಲ್ಲಿರುವ ರೆಸಾರ್ಟ್ ಗೆ ಶಿಫ್ಟ್ ಮಾಡಲು ಸೋಮವಾರ ನಿರ್ಧರಿಸಿದೆ.

published on : 8th June 2020

ಪಕ್ಷಾಂತರಿ ಶಾಸಕರನ್ನು ಚಪ್ಪಲಿಯಿಂದ ಹೊಡೆಯಿರಿ: ಹಾರ್ದಿಕ್ ಪಟೇಲ್

ಪಕ್ಷಾಂತರ ಮಾಡಿದ ಶಾಸಕರನ್ನು ಸಾರ್ವಜನಿಕರು ಚಪ್ಪಲಿಗಳಿಂದ ಹೊಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನಲ್ಲಿ ಕೆಲ ಶಾಸಕರು  ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಪಟೇಲ್ ಪ್ರತಿಕ್ರಯಿಸಿದ್ದಾರೆ.

published on : 7th June 2020

ಗುಜರಾತ್: ರಾಜ್ಯಸಭಾ ಚುನಾವಣೆ ಹಿನ್ನೆಲೆ, ರೆಸಾರ್ಟ್ ಗೆ ತೆರಳಿದ 65 ಕಾಂಗ್ರೆಸ್ ಶಾಸಕರು!

ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತಿನ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ , ಮುಂದೆ ಸಂಭಾವ್ಯ ರಾಜೀನಾಮೆಯನ್ನು ತಪ್ಪಿಸುವ ಉದ್ದೇಶದಿಂದ ಉಳಿದಿರುವ 65 ಶಾಸಕರನ್ನು ಮೂರು ವಿವಿಧ ರೆಸಾರ್ಟ್ ಗಳಿಗೆ ಸ್ಥಳಾಂತರಿಸಿದೆ.

published on : 7th June 2020

ಗುಜರಾತ್ ಕಾಂಗ್ರೆಸ್ ಗೆ ಮತ್ತೆ ಆಘಾತ: ಇನ್ನೊಬ್ಬ ಶಾಸಕ ರಾಜೀನಾಮೆ

ಜೂನ್ 19ರ ರಾಜ್ಯಸಭೆ ಚುನಾವಣೆಗೆ ಮುನ್ನ ಗುಜರಾತ್ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎದುರಾಗಿದೆ. ಬುದವಾರವಷ್ಟೇ  ಇಬ್ಬರು ಕೈ ಶಾಸಕರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಶಾಸಕ ಬ್ರಿಜೇಶ್ ಮೆರ್ಜಾ ಸಹ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

published on : 5th June 2020

ಗುಜರಾತ್: ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಇಬ್ಬರು ಕೈ ಶಾಸಕರ ರಾಜೀನಾಮೆ

ಜೂನ್ 19 ರ ರಾಜ್ಯಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗುಜರಾತ್ ಕಾಂಗ್ರೆಸ್ ನಲ್ಲಿ ಬೇಗುದಿ ಪ್ರಾರಂಬವಾಗಿದೆ. ಚುನಾವಣೆಗೆ ಮುನ್ನ ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. 

published on : 4th June 2020

'ಮುಂದಿನ ಸಲ ನಿಮಗೆ ಗುಜರಾತಿ ಕಿಚಿಡಿ ಮಾಡಿ ತಿನ್ನಿಸುತ್ತೇನೆ': ಮೋದಿ ಮುಂದೆ ಬಯಕೆ ಹೇಳಿಕೊಂಡ ಆಸ್ಟ್ರೇಲಿಯಾ ಪ್ರಧಾನಿ

ನಿಮ್ಮನ್ನು ಭೇಟಿ ಮಾಡಿ ಅಪ್ಪಿಕೊಳ್ಳಬೇಕು ಎನಿಸುತ್ತಿದೆ, ನಾನು ಮಾಡಿರುವ ಸಮೋಸವನ್ನು ನಿಮಗೆ ತಿನ್ನಿಸಬೇಕು, ಮುಂದಿನ ಬಾರಿ ನಿಮ್ಮನ್ನು ಭೇಟಿಯಾದಾಗ ನಿಮ್ಮಿಷ್ಟದ ಗುಜರಾತ್ ಕಿಚಿಡಿ ಮಾಡಿಕೊಡಬೇಕು ಇತ್ಯಾದಿಯಾಗಿ ವಿನೋದದ ಪ್ರೀತಿಯ ಮಾತುಗಳನ್ನಾಡಿದರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್.

published on : 4th June 2020

ಗುಜರಾತ್ ನ ರಾಸಾಯನಿಕ ಫ್ಯಾಕ್ಟರಿಯಲ್ಲಿ ಸ್ಫೋಟ: ಮೃತ ಕಾರ್ಮಿಕರ ಸಂಖ್ಯೆ 8ಕ್ಕೆ ಏರಿಕೆ, 50 ಮಂದಿಗೆ ಗಾಯ

ಆಂಧ್ರ ಪ್ರದೇಶದ ವಿಶಾಖಪಟ್ಣಂ ನ ಫ್ಯಾಕ್ಟರಿಯಲ್ಲಿ ಕೆಲ ದಿನಗಳ ಹಿಂದೆ ಅನಿಲ ಸೋರಿಕೆಯಾಗಿ ಹಲವರು ಮೃತಪಟ್ಟಂತಹ ಘಟನೆ ಗುಜರಾತ್ ರಾಜ್ಯದ ಬರೂಚ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

published on : 4th June 2020

ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿದುರಂತ: ಐವರ ಸಜೀವ ದಹನ

ಗುಜರಾತಿನ ದಹೇಜ್ನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ   ಐವರು ಜೀವಂತ ಸುಟ್ಟುಕರಕಲಾಗಿದ್ದು ಇತರೆ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

published on : 3rd June 2020
1 2 3 4 5 6 >