• Tag results for Gunned down

ಮಧ್ಯಪ್ರದೇಶ:  ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ, ಹತ್ಯೆಗೈದ ನಕ್ಸಲೀಯರು!

 ಪೊಲೀಸ್ ಮಾಹಿತಿದಾರರು ಎಂಬ ಅನುಮಾನದಿಂದ ಶಸ್ತ್ರ ಸಜ್ಜಿತ ನಕ್ಸಲೀಯರು ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ,  ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಾಲ್ಗಟ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಕಳೆದ ವರ್ಷ ಮಹಿಳಾ ನಕ್ಸಲ್ ಒಬ್ಬರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು. 

published on : 13th November 2021

ಅಸ್ಸಾಂ: ಗುಂಡು ಹಾರಿಸಿ ಮೂವರು ಡಕಾಯಿತರನ್ನು ಹತ್ಯೆ ಮಾಡಿದ ಪೊಲೀಸರು!

ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿರುವ ಅಸ್ಸಾಂ ಪೊಲೀಸರು ಭಾನುವಾರ ಮುಂಜಾನೆ ನಡೆಸಿದ ಎನ್ ಕೌಂಟರ್ ನಲ್ಲಿ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇತರ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. 

published on : 22nd August 2021

ಚತ್ತೀಸ್ ಗಢ: ಇಬ್ಬರು ಪ್ರಮುಖ, ಮೋಸ್ಟ್ ವಾಂಟೆಡ್ ಮಾವೋವಾದಿಗಳ ಹತ್ಯೆ 

ಚತ್ತೀಸ್ ಗಢದಲ್ಲಿ ಇಬ್ಬರು ಪ್ರಮುಖ, ಮೋಸ್ಟ್ ವಾಂಟೆಡ್ ಮಾವೋವಾದಿಗಳು ಭದ್ರತಾ ಪಡೆಗಳೊಂದಿಗೆ ದಾಂತೆವಾಡದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹತ್ಯೆಯಾಗಿದ್ದಾರೆ. 

published on : 20th March 2021

ಕಾಶ್ಮೀರ: ಬಾರಾಮುಲ್ಲಾದಲ್ಲಿ ಪಾಕ್‍ ನಿವಾಸಿ ಸೇರಿ ಇಬ್ಬರು ಉಗ್ರರ ಹತ್ಯೆ, ಮುಂದುವರೆದ ಕಾರ್ಯಾಚರಣೆ

ಉತ್ತರ ಕಾಶ್ಮೀರ ಜಿಲ್ಲೆಯಾದ ಬಾರಾಮುಲ್ಲಾದಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್‍ ವಕ್ತಾರರು ತಿಳಿಸಿದ್ದಾರೆ.

published on : 24th December 2020

ರಾಶಿ ಭವಿಷ್ಯ