ಛತ್ತೀಸ್ ಗಡ: ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ ಓರ್ವ ನಕ್ಸಲ್ ಹತ!

ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಓರ್ವ ನಕ್ಸಲ್ ನನ್ನು ಹೊಡೆದುರುಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಪುರ: ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆದ  ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು   ಓರ್ವ ನಕ್ಸಲ್ ನನ್ನು  ಹೊಡೆದುರುಳಿಸಿದ್ದಾರೆ.

ನಿನ್ನೆ ಸಂಜೆ  ಪುಸ್ನಾರ್  ಠಾಣೆ ವ್ಯಾಪ್ತಿಯಲ್ಲಿ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆ ಮುಗಿಸಿ ಡಿಆರ್ ಜಿ ತಂಡ  ವಾಪಾಸ್ಸಾಗುತ್ತಿದ್ದಾಗ  ಗುಂಡಿನ ಚಕಮಕಿ ನಡೆದಿದ್ದು, ಓರ್ವ ನಕ್ಸಲ್ ಹತನಾಗಿದ್ದಾನೆ  ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ.

ತುಳ್ಸಿ ಬೆಟ್ಟದಲ್ಲಿ  ಕಾಂಜಿರ್ ಕಣಿವೆ ಮಾವೋವಾದಿಗಳ ಸಮಿತಿ ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೃತ ನಕ್ಸಲ್ ನನ್ನು  ಚಾಂದಮೇಟ ಪ್ರದೇಶದ ನಕ್ಸಲ್   ಉಪ ಕಮಾಂಡರ್  ಕಾವಾಸಿ ದೇವಾ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಮೃತ ದೇಹ ದೊರೆತ ಸ್ಥಳದಿಂದ ಒಂದು  ಲೋಡೆದ್ ಗನ್ , ಸ್ಟೋಟಕ್ಕೆ ಸಂಬಂಧಿಸಿದ್ದ ಸಲಕರಣೆಗಳನ್ನು ತುಂಬಿದ್ದ ಬ್ಯಾಗ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೀನಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com