• Tag results for Infant

ಹಾಲುಣಿಸುವ ತಾಯಂದಿರೇ ಎಚ್ಚರ: ಎದೆಹಾಲಿನಲ್ಲಿ ಪೌಷ್ಟಿಕಾಂಶ ಕೊರತೆಯಿಂದ ನವಜಾತ ಶಿಶುಗಳಿಗೆ ಅಪಾಯ!

6 ತಿಂಗಳ ಒಳಗಿರುವ ಮಕ್ಕಳಿಗೆ ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಎದುರಾಗುವ ಪೌಷ್ಟಿಕಾಂಶ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. 

published on : 12th September 2020

ಪಾಲಿಶ್ ಅಕ್ಕಿಯಿಂದ ನವಜಾತ ಶಿಶುವಿಗೆ ಅಪಾಯ: ಜಯದೇವ ಹೃದ್ರೋಗ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢ

ಪಾಲಿಶ್‌ ಮಾಡಿದ ಅಕ್ಕಿಯನ್ನು ಸೇವಿಸುವ ತಾಯಂದಿರ ಎದೆಹಾಲಿನಲ್ಲಿ ಪೌಷ್ಟಿಕಾಂಶ ಕೊರತೆ ಎದುರಾಗಲಿದ್ದು, ಪರಿಣಾಮವಾಗಿ ಶಿಶುಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗಬಹುದು ಎಂಬ ಆತಂಕಕಾರಿ ವಿಷಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.

published on : 11th September 2020

ತಾಯಿಯ ಎದೆ ಹಾಲಿನ ಮೂಲಕ ಶಿಶುಗಳಿಗೆ ಕೋವಿಡ್ ಹರಡುವುದಿಲ್ಲ: ಅಧ್ಯಯನ ವರದಿ

ತಾಯಿಯ ಎದೆ ಹಾಲು ಕೋವಿಡ್ -19 ಸೋಂಕು ಹರಡಿಸುವ ಸಾಧ್ಯತೆ ಇಲ್ಲ  ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ, ಅಧ್ಯಯನದ ಪ್ರಕಾರ ಕೊರೋನಾವೈರಸ್  ಎದೆಹಾಲುಣಿಸಿದ ತಾಯಿಯಿಂದ ಶಿಶುಗಳಿಗೆ ಹರಡುವುದು ಸಾಧ್ಯವಿಲ್ಲ.

published on : 20th August 2020

ಜಮ್ಮು-ಕಾಶ್ಮೀರ: ಏಳು ತಿಂಗಳ ಹಸುಗೂಸು, 8 ವರ್ಷದ ಬಾಲಕನಿಗೆ ಕೊರೋನಾ ಪಾಸಿಟಿವ್! 

ಜಮ್ಮು- ಕಾಶ್ಮೀರದಲ್ಲಿ ಏಳು ತಿಂಗಳ ಹಸುಗೂಸು ಹಾಗೂ ಎಂಟು ವರ್ಷದ ಬಾಲಕನೋರ್ವನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 27th March 2020

ಶಾಹೀನ್ ಬಾಗ್: ಚಳಿಯಿಂದ ಹಸುಗೂಸು ಮೃತಪಟ್ಟರೂ ಮತ್ತೆ ಪ್ರತಿಭಟನೆಗೆ ಮರಳಿದ ತಾಯಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೊರೆಯುವ ಚಳಿಯ ನಡುವೆಯೂ ತಾಯಿಯೊಂದಿಗೆ  ತಲೆಗೆ ತ್ರಿವಣ ಧ್ವಜ ಹೊದ್ದು ಕುಳಿತುಕೊಳ್ಳುತ್ತಿದ್ದ ನಾಲ್ಕು ತಿಂಗಳ ಹಸುಗೂಸು ಮೊಹಮ್ಮದ್ ಜಹಾನ್ ಮೃತಪಟ್ಟಿದೆ

published on : 4th February 2020

ಜೆ ಕೆ ಲೊನಾ ಆಸ್ಪತ್ರೆಯ ಅವ್ಯವಸ್ಥೆಯೇ ನವಜಾತ ಶಿಶುಗಳ ಸಾವಿಗೆ ಕಾರಣ: ವರದಿ 

ರಾಜಸ್ತಾನದ ಕೊಟಾದ ಜೆ ಕೆ ಲೊನ್ ಆಸ್ಪತ್ರೆಯಲ್ಲಿ ಈ ವರ್ಷ ಒಟ್ಟಾರೆ 940 ಮಕ್ಕಳು ಮೃತಪಟ್ಟಿದ್ದು ಇದಕ್ಕೆ ಆಸ್ಪತ್ರೆಯ ಅವ್ಯವಸ್ಥೆಯೇ ಕಾರಣ ಎಂದು ಮಕ್ಕಳ ಹಕ್ಕುಗಳ ಕೇಂದ್ರ ಸಮಿತಿ ಎನ್ ಸಿಪಿಸಿಆರ್ ತಪಾಸಣೆ ನಡೆಸಿ ಹೇಳಿದೆ.

published on : 31st December 2019

ಶಿರಸಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ

ಮಾತೆಯೊಬ್ಬಳು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದ ವಿದ್ಯಮಾನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. ಆದರೆ ನಾಲ್ಕು ಶಿಶುಗಳಲ್ಲಿ ಒಂದು ಶಿಶು ಜನಿಸುವಾಗಲೇ ಮೃತಪಟ್ಟಿದೆ. ಇನ್ನೂ ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದ್ದು ಆಸ್ಪತ್ರೆ ಸಿಬ್ಬಂದಿಯ ಆರೈಕೆಯಲ್ಲಿವೆ.

published on : 30th November 2019

ಮೃತ ಶಿಶುವಿನ ಅಂತ್ಯಕ್ರಿಯೆ ಮಾಡುತ್ತಿದ್ದ ತಂದೆಗೆ ಕಾದಿತ್ತು ಅಚ್ಚರಿ, ಶಾಕ್!

ಮೃತಪಟ್ಟ ಹೆಣ್ಣುಮಗುವಿನ ಅಂತ್ಯಕ್ರಿಯೆ ಮಾಡಲು ತೆರಳಿದ್ದ ತಂದೆಗೆ ಅಚ್ಚರಿಯೊಂದು ಕಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

published on : 15th October 2019

ಸಿಲಿಕಾನ್ ಸಿಟಿ ಆಸ್ಪತ್ರೆಗಳ ಅವ್ಯವಸ್ಥೆ! ನವಜಾತ ಶಿಶುಗಳ ಆರೈಕೆಗಾಗಿ ತಾಯಂದಿರ ಪರದಾಟ

ರೀಟಾ-ರತನ್ ದಂಪತಿಗಳು ತಾವು ಮಗುವಿನ ತಾಯಿ-ತಂದೆಗಳಾಗುತ್ತಿರುವುದಕ್ಕೆ ಅತ್ಯಂತ ಸಂತಸದಿಂದಿದ್ದರು. ರೀಟಾ ಮಗುವಿಗೆ ಜನ್ಮ ನೀಡಿದ ವೇಳೆ ರತನ್ ಗೆ ಆಅ ಆನಂದದ ಪರಿವಿಲ್ಲ.  ಆದರೆ ಮಗು ಹುಟ್ಟಿದ ಒಂದು ದಿನದ ಬಳಿಕ ಅದರ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಮಾತ್ರ ದಂಪತಿಗಳು ನವಜಾತ ಶಿಶುವಿನ ತೀವ್ರ ನಿಗಾ ಘಟಕ (ಎನ್‌ಐಸಿಯು) ಘಟಕದಲ್ಲಿ ಹಾಸಿಗೆಯನ್ನು ಹುಡುಕುತ್ತಾ.....

published on : 1st September 2019

ಹೆಣ್ಣೆಂಬ ಕಾರಣಕ್ಕೆ ತಂದೆಯೇ 3 ತಿಂಗಳ ಮಗಳನ್ನು ನೆಲಕ್ಕಪ್ಪಳಿಸಿ ಕೊಂದ!

ಹೆಣ್ಣೆಂಬ ಕಾರಣಕ್ಕೆ ಮೂರೂವರೆ ತಿಂಗಳ ಎಳೆಯ ಮಗುವನ್ನು ಅದರ ತಂದೆಯೇ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಮಗುವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿದ್ದಲ್ಲದೆ....

published on : 21st June 2019

ತಾಯಿ ಕರಳು ಚಿರಋಣಿ: 21 ದಿನದ ನವಜಾತ ಶಿಶುವಿನ ಜೀವ ಉಳಿಸಿದ ಪೊಲೀಸರು, ವಿಡಿಯೋ ವೈರಲ್!

ಜನ ರಕ್ಷಕರಾಗಿರುವ ಪೊಲೀಸರು ತಾಯಿಯ ಎದೆಹಾಲು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ಕಷ್ಟಪಡುತ್ತಿದ್ದ 21 ದಿನದ ನಜಜಾತ ಶಿಶುವಿನ ಜೀವವನ್ನು ಉಳಿಸುವ ಮೂಲಕ ಇದೀಗ ಹೀರೋ ಆಗಿದ್ದಾರೆ.

published on : 18th April 2019

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕೆರೆಗೆ ಹಾಕಿದ ಕುಟುಂಬ!

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕುಟುಂಬ ಸದಸ್ಯರುಗಳೇ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.

published on : 22nd January 2019

ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!

ರಸ್ತೆ ಬದಿ ಬಿದ್ದಿದ್ದ ಒಂದು ದಿನದ ಹಸುಗೂಸಿಗೆ ಎದೆಹಾಲು ಉಣಿಸುವ ಮೂಲಕ ಬೆಂಗಳೂರಿನ ಮಹಿಳಾ ಪೋಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದ ಪ್ರಕರಣ ನಡೆದಿದೆ.

published on : 17th January 2019