• Tag results for Injured

ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: 2 ಸಾವು, ಇಬ್ಬರಿಗೆ ಗಾಯ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಕಮರ್ ಹಾಟಿ ಗೋಲಘಾಟ್ ಪ್ರದೇಶದ ಮನೆಯೊಂದರಲ್ಲಿ ಭಾನುವಾರ ರಾತ್ರಿ ಕಚ್ಚಾ ಬಾಂಬ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 

published on : 7th September 2020

ಸೇನಾಪಡೆಗಳ ಮೇಲೆ ಗ್ರೆನೇಡ್ ಎಸೆದ ಉಗ್ರರು: ಗುರಿ ತಪ್ಪಿ ರಸ್ತೆಯಲ್ಲೇ ಸ್ಫೋಟ, 6 ನಾಗರೀಕರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರತೀಯ ಸೇನಾಪಡೆಯ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್ ಒಂದು ಗುರಿತಪ್ಪಿ ರಸ್ತೆಯಲ್ಲಿಯೇ ಸ್ಫೋಟಗೊಂಡಿದ್ದು, ಪರಿಣಾಮ ಸ್ಥಳದಲ್ಲಿದ್ದ 6 ಮಂದಿ ನಾಗರೀಕರು ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ. 

published on : 31st August 2020

ಮಹಾರಾಷ್ಟ್ರದ ರಾಯಗಢದಲ್ಲಿ ಕಟ್ಟಡ ಕುಸಿತ: 16ಕ್ಕೇರಿದ ಸಾವಿನ ಸಂಖ್ಯೆ,ಎನ್ ಡಿಆರ್ ಎಫ್ ತೀವ್ರ ಕಾರ್ಯಾಚರಣೆ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹದ್ ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ. ಅವರಲ್ಲಿ 7 ಮಂದಿ ಪುರುಷರು ಮತ್ತು 9 ಮಂದಿ ಮಹಿಳೆಯರಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಮತ್ತಷ್ಟು ನಾಗರಿಕರ ದೇಹಗಳು ಸಿಲುಕಿರುವ ಶಂಕೆಯಿದೆ.

published on : 25th August 2020

ಮಹಾರಾಷ್ಟ್ರ; 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ; ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹದ್ ನಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದ ಪರಿಣಾಮ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಮಂಗಳವಾರ ತಿಳಿದುಬಂದಿದೆ. 

published on : 25th August 2020

ಆಗ್ರಾ-ಲಖನೌ ಎಕ್ಸ್'ಪ್ರೆಸ್'ವೇನಲ್ಲಿ ಮಗುಚಿ ಬಿದ್ದ ಬಸ್: 16 ಪ್ರಯಾಣಿಕರಿಗೆ ಗಾಯ

ಉತ್ತರಪ್ರದೇ್ಶದಲ್ಲಿ ಆಗ್ರಾ-ಲಖನೌ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ 16 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. 

published on : 20th August 2020

ಭಾರೀ ಸ್ಫೋಟಕ್ಕೆ ನಡುಗಿ ಹೋದ ಬೈರೂತ್: 70 ಮಂದಿ ಬಲಿ, ಸಾವಿರಾರು ಜನರಿಗೆ ಗಂಭೀರ ಗಾಯ

ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಮಂಗಳವಾರ ಭಾರೀ ಪ್ರಮಾಣದ ಅವಳಿ ಸ್ಫೋಟ ಸಂಭವಿಸಿದ್ದು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಸಾವಿರಾರು ಕಟ್ಟಡಗಳು ಭಾರೀ ಹಾನಿಗೊಳಗಾಗಿದೆ.

published on : 5th August 2020

ಕನೌಜ್'ನಲ್ಲಿ ಭೀಕರ ರಸ್ತೆ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ, 5 ಸಾವು, 18 ಮಂದಿ ಗಂಭೀರ ಗಾಯ

ಉತ್ತರಪ್ರದೇಶದ ಕನೌಜ್'ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಭವಿಸಿದೆ.

published on : 19th July 2020

ವಿಶಾಖಪಟ್ಟಣದಲ್ಲಿ ಮತ್ತೊಂದು ದುರಂತ: ಔಷಧಿ ತಯಾರಿಕಾ ಘಟಕದಲ್ಲಿ ಸ್ಫೋಟ; ಓರ್ವನಿಗೆ ಗಾಯ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪರವಾಡ ಬಳಿ ಇರುವ ಜೆ.ಎನ್‌ ಫಾರ್ಮಾ ಸಿಟಿಯಲ್ಲಿರುವ ಔಷಧ ತಯಾರಕ ಘಟಕದಲ್ಲಿ ಸೋಮವಾರ ಬೃಹತ್‌ ಸ್ಫೋಟ ಸಂಭವಿಸಿದ್ದು, ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.

published on : 14th July 2020

ವಾಲ್ಮಾರ್ಟ್ ವಿತರಣಾ ಕೇಂದ್ರದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 4 ಮಂದಿ ಗಾಯ

ಕ್ಯಾಲಿಫೋರ್ನಿಯಾದ ರೆಡ್ ಬ್ಲಫ್‌ನಲ್ಲಿರುವ ವಾಲ್‌ಮಾರ್ಟ್ ವಿತರಣಾ ಕೇಂದ್ರದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

published on : 28th June 2020

ಚಿಕ್ಕೋಡಿ: ತಂದೆ, ಮಗನನ್ನು ಥಳಿಸಿ ಬಾವಿಗೆಸೆದ ಕಳ್ಳರು; ತಂದೆ ಸಾವು, ಮಗ ಗಂಭೀರ ಗಾಯ

ಆರು ಜನ ಕಳ್ಳರು ಮನೆಯ ಮಾಲೀಕ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿ ಬಾವಿಗೆಸೆದ ಪರಿಣಾಮ ತಂದೆ ಸಾವನಪ್ಪಿದ್ದು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡದಲ್ಲಿ ನಡೆದಿದೆ. 

published on : 5th June 2020

ಪಾಕ್ ವಿಮಾನ ದುರಂತ: ಸಾವಿನ ಸಂಖ್ಯೆ 97ಕ್ಕೆ ಏರಿಕೆ, ಇಬ್ಬರು ಪ್ರಾಣಾಪಾಯದಿಂದ ಪಾರು

ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 97ಕ್ಕೆ ಏರಿಕೆಯಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಇಲಾಖೆಯ ವಕ್ತಾರ ಮೀರನ್ ಯೂಸುಫ್ ಶನಿವಾರ ಖಚಿತಪಡಿಸಿದ್ದಾರೆ.

published on : 23rd May 2020

ಸೀಜ್ ಆದ ಆಟೋ ಪಾರ್ಕಿಂಗ್ ವೇಳೆ ಅವಘಡ: ಪೇದೆಗೆ ಗಂಭೀರ ಗಾಯ; ಗೃಹ ಸಚಿವರಿಂದ ಆರೋಗ್ಯ ವಿಚಾರಣೆ

ಸೀಜ್ ಆದ ಆಟೋವನ್ನು ಪೊಲೀಸ್ ಠಾಣೆ ಬಳಿ ನಿಲ್ಲಿಸಲು ತೆಗೆದುಕೊಂಡು ಹೋಗುವಾಗ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಹೆಡ್​ ಕಾನ್ಸ್​ಟೆಬಲ್ ನಾಗೇಶ್ ಅವರ ತಲೆಗೆ ಗಂಭೀರ ಗಾಯವಾಗಿದೆ.

published on : 13th April 2020

ಲಾಕ್'ಡೌನ್ ನಡುವೆಯೂ ಜಾಲಿ ರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ; ವಾಹನ ವಶ, ನಟಿಗಾಗಿ ಶೋಧ

ಲಾಕ್‌ಡೌನ್‌ ಉಲ್ಲಂಘಿಸಿ ಜಾಲಿರೈಡ್‌ಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಇದ್ದ ಕಾರು ಅಪಘಾತಕ್ಕೀಡಾಗಿ ನಟಿ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

published on : 4th April 2020

ಕೊಪ್ಪಳ: ಹಾಲು ತರಲು ಬಂದವನಿಗೆ ಲಾಠಿ ಏಟು, ರೈತನ ಸ್ಥಿತಿ ಚಿಂತಾಜನಕ

ದೇಶಾದ್ಯಂತ ತೀವ್ರ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದ್ದು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಸುತ್ತಾಡಬೇಡಿ ಎಂದು ಕೊಪ್ಪಳ ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

published on : 3rd April 2020

ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ, 12 ಮಂದಿ ದುರ್ಮರಣ

ಬಿಹಾರ ರಾಜ್ಯದಲ್ಲಿ ಜವರಾಯ ಬೆಳ್ಳಂಬೆಳಿಗ್ಗೆ ಅಟ್ಟಹಾಸ ಮೆರೆದಿದ್ದು, ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಮುಜಾಫರ್ ಪರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-28ರಲ್ಲಿ ನಡೆದಿದೆ. 

published on : 7th March 2020
1 2 3 4 5 >