• Tag results for Karnataka

ಕರ್ನಾಟಕ ಪ್ರವೇಶಿಸಿದ 'ಭಾರತ್ ಜೋಡೋ' ಯಾತ್ರೆ: ಬಂಡೀಪುರದಲ್ಲಿ ಕೈ ನಾಯಕರಿಂದ ರಾಹುಲ್ ಗಾಂಧಿಗೆ ಸ್ವಾಗತ

ಭಾರತ್ ಜೋಡೋ ಯಾತ್ರೆ ಇನ್ನು ಕೆಲವೇ ಹೊತ್ತಿನಲ್ಲಿ ಕರ್ನಾಟಕದಲ್ಲಿ ಆರಂಭವಾಗಲಿದೆ. ಈ  ಹಿನ್ನೆಲೆಯಲ್ಲಿ ಇಂದು ಶುಕ್ರವಾರ ರಾಜ್ಯ ಪ್ರವೇಶಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು. 

published on : 30th September 2022

ರಾಜ್ಯದ ಹಲವು ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ:  ಕಡತಗಳ ಪರಿಶೀಲನೆ

ಏಕಕಾಲಕ್ಕೆ ರಾಜ್ಯದ 9 ಕಡೆಗಳಲ್ಲಿ ಲೋಕಾಯುಕ್ತ  ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂಭತ್ತು ಜಿಲ್ಲೆಗಳ ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಬೆಳಗ್ಗೆ 4 ಗಂಟೆಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

published on : 30th September 2022

ಪ್ರತ್ಯೇಕ ಅವಘಡ: ಕಣ್ವ ನದಿಗೆ ಬಿದ್ದು ದಂಪತಿ ದುರ್ಮರಣ; ನೀರಿನಲ್ಲಿ ಮುಳುಗಿ ಯುವಕ ಸಾವು!

ಹಸುವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಣ್ವ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.

published on : 30th September 2022

ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 171 ಸೇರಿ ರಾಜ್ಯದಲ್ಲಿ 266 ಮಂದಿಗೆ ಪಾಸಿಟಿವ್; ಒಬ್ಬರು ಸಾವು

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ266 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,64,612ಕ್ಕೆ ಏರಿಕೆಯಾಗಿದೆ.

published on : 29th September 2022

ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಸಚಿವಾಲಯದಲ್ಲಿ ನೌಕರಿ: ರಾಜ್ಯ ಸರ್ಕಾರದಿಂದ ಆದೇಶ

ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಗುತ್ತಿಗೆ ಆಧಾರಿತ ಹಿರಿಯ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ...

published on : 29th September 2022

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ' ನಾಳೆ ರಾಜ್ಯ ಪ್ರವೇಶ; ಗುಂಡ್ಲುಪೇಟೆಯಲ್ಲಿ ಅದ್ಧೂರಿ ಸಿದ್ಧತೆ

ಮುಂಬರುವ ಕೆಲ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಹುಮ್ಮಸ್ಸು ತುಂಬಲು ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ ನಾಳೆ ರಾಜ್ಯ ಪ್ರವೇಶಿಸಲಿದೆ. 

published on : 29th September 2022

ಒಂದು ಟಿಕೆಟ್ ನಲ್ಲಿ ಇಡೀ ಕರ್ನಾಟಕ ಸುತ್ತಿ ಬನ್ನಿ: ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಜಾರಿ

ಕರ್ನಾಟಕದಲ್ಲಿ ರಮ್ಯ ಮನೋಹರ ತಾಣಗಳನ್ನು ವೀಕ್ಷಿಸಲು ಬಯಸುವ ವಿದೇಶಿ ಮತ್ತು ದೇಶಿ ಪ್ರವಾಸಿಗರು ಇನ್ನು ಒಂದು ತಿಂಗಳು ತಮ್ಮ ತಮ್ಮ ಸ್ಥಳಗಳಿಂದ ಸಂಪೂರ್ಣ ಪ್ಯಾಕೇಜ್‌ಗಳನ್ನು ತಡೆರಹಿತ ರೀತಿಯಲ್ಲಿ ಬುಕ್ ಮಾಡಲು ಸಾಧ್ಯವಾಗುತ್ತದೆ.

published on : 29th September 2022

ಹುಬ್ಬಳ್ಳಿಯಲ್ಲಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಯುವಕನ ಮತಾಂತರ: ಪೊಲೀಸರಿಗೆ ರಾಜ್ಯಾದ್ಯಂತ ಬೃಹತ್ ಜಾಲದ ಶಂಕೆ

ಕೆಲ ತಿಂಗಳ ಹಿಂದೆ ಮಂಡ್ಯ ಮೂಲದ 26 ವರ್ಷದ ಯುವಕನೊಬ್ಬನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಪ್ರಕರಣದ ತನಿಖೆಯು ಕರ್ನಾಟಕದಲ್ಲಿ ಧಾರ್ಮಿಕ ಮತಾಂತರದಲ್ಲಿ ತೊಡಗಿಸಿಕೊಂಡಿರುವ ವಿವಿಧ ಗುಂಪುಗಳ ನಂಟು ಕುರಿತು ಹೊಸ ಒಳನೋಟಗಳನ್ನು ಹೊರತರುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

published on : 29th September 2022

ಜನರ ಅನುಕೂಲಕ್ಕೆ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ಕಟ್ಟಿಸಿರುವ ಲೀಲಾವತಿ ಅವರ ಮನಸ್ಸು ದೊಡ್ಡದು: ಸಿಎಂ ಬೊಮ್ಮಾಯಿ

ನಿಮ್ಮ ಮುಖದಲ್ಲಿನ ಕಳೆ ಅತ್ಯಂತ  ಸುಂದರ. ಇಷ್ಟೆಲ್ಲಾ ಅಂದ ಚಂದ ಇರುವ ನಿಮಗೆ ಅದಕ್ಕಿಂತಲೂ ಅಂದವಾಗಿರುವ ಮನಸ್ಸಿದೆ. ಇಲ್ಲಿ ಜನರಿಗೆ ಅನುಕೂಲವಾಗಲಿ ಎಂದು ಶಾಶ್ವತವಾಗಿ ಆಸ್ಪತ್ರೆ ಕಟ್ಟಿಸಿಕೊಟ್ಟಿರುವ ನಿಮ್ಮ ಮನಸ್ಸು ದೊಡ್ಡದು..

published on : 28th September 2022

ಗೋವಾ, ಕೇರಳ ಕಡಲ ಪ್ರವಾಸೋದ್ಯಮಕ್ಕೆ ಪೈಪೋಟಿ ನೀಡಲು ಹಲವು ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದು: ವಿವರ ಹೀಗಿದೆ...

ಬೀಚ್ ಟೂರಿಸಂ ಅಥವಾ ಕಡಲ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವು ಬದಲಾವಣೆಗಳಿಗೆ ಮುಂದಾಗಿದೆ.   

published on : 28th September 2022

ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 160 ಸೇರಿ ರಾಜ್ಯದಲ್ಲಿ 264 ಮಂದಿಗೆ ಪಾಸಿಟಿವ್; ಒಂದು ಸಾವು!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 264 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,64,346ಕ್ಕೆ ಏರಿಕೆಯಾಗಿದೆ.

published on : 28th September 2022

ಆರೋಗ್ಯ ರಕ್ಷಣೆ, ರೋಗಿಗಳ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಕರ್ನಾಟಕಕ್ಕೆ ಪ್ರಶಸ್ತಿಯ ಗರಿ

ಆಂಧ್ರಪ್ರದೇಶದ ನಂತರ, 1,68,254 ಆರೋಗ್ಯ ದಾಖಲೆಗಳನ್ನು ನೋಂದಣಿ ಮಾಡಿರುವ ಕರ್ನಾಟಕ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಧಾರವಾಡ ಜಿಲ್ಲಾಸ್ಪತ್ರೆಗೆ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಸೌಲಭ್ಯ ನೀಡುವ ಪ್ರಶಸ್ತಿ ಲಭಿಸಿದೆ.

published on : 28th September 2022

ಪ್ರವಾಸಿ ತಾಣಗಳ ಗೈಡ್‌ಗಳ ಪ್ರೋತ್ಸಾಹ ಧನ ಹೆಚ್ಚಳ: ಸಿಎಂ ಬೊಮ್ಮಾಯಿ

ಪ್ರವಾಸಿ ತಾಣಗಳ ಮಾರ್ಗದರ್ಶಿ (ಗೈಡ್) ಗಳಿಗೆ ಪ್ರೋತ್ಸಾಹ ಧನವನ್ನು 2 ಸಾವಿರದಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

published on : 28th September 2022

ಪಿಎಫ್ಐ ಸಂಘಟನೆ ನಿಷೇಧ; ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ: ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್

ಭಾರತ ಸರ್ಕಾರವು ಪಿಎಫ್​ಐ (PFI) ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನು ಬಾಹಿರ ಕಾಯ್ದೆಯಡಿ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಪೊಲೀಸರಿಗೆ ಸೂಚಿಸಿದ್ದಾರೆ.

published on : 28th September 2022

ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿ ಪರಿವರ್ತಿಸುವಲ್ಲಿ ಕರ್ನಾಟಕ ಪಾತ್ರ ಮುಖ್ಯವಾಗಿದೆ: ರಾಷ್ಟ್ರಪತಿ ಮುರ್ಮು

ಭಾರತ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

published on : 28th September 2022
1 2 3 4 5 6 > 

ರಾಶಿ ಭವಿಷ್ಯ