• Tag results for Koppal

ಕೊಪ್ಪಳ ಮೆಡಿಕಲ್ ಕಾಲೇಜಿಗೆ ಸಚಿವ ಕೆ. ಸುಧಾಕರ ಮೆಚ್ಚುಗೆ; ಕೊರತೆಗಳ ನಡುವೆಯೂ ನಿತ್ಯ ಸಾವಿರ ಕೋವಿಡ್ ಟೆಸ್ಟ್

ಸಾಕಷ್ಟು ಕುಂದುಕೊರತೆ, ಅಗತ್ಯ ಸೌಲಭ್ಯಗಳ ಕೊರತೆಗಳ ಹೊರತಾಗಿಯೂ ಇಡೀ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಈಗ ನಿತ್ಯ ಸಾವಿರ ಗಂಟಲು ಪರೀಕ್ಷೆ (ಕೋವಿಡ್ ಟೆಸ್ಟ್) ನಡೆಯುತ್ತಿವೆ. 

published on : 17th July 2020

ಕೊಪ್ಪಳ: ಕೊರೋನಾ ಸಂಕಷ್ಟದಲ್ಲೂ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಡಯಟ್!

ಎಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಶಾಲಾ-ಕಾಲೇಜುಗಳು,  ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕವೇ ಮಕ್ಕಳಿಗೆ ಪಾಠ ಮಾಡಬೇಕು ಎಂದು ಒಂದು ಕಡೆ ಹೇಳುತ್ತಿರುವ ಸರಕಾರ. ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರಿಗೆ ಆನ್ಲೈನ್ ಮೂಲಕ ತರಬೇತಿ ನೀಡುವ ಬದಲಾಗಿ, ನಿಗದಿತ ಸ್ಥಳ, ದಿನಗಳಲ್ಲಿ ಖುದ್ದು ತರಬೇತಿಗೆ ಹಾಜರಾಗುವಂತೆ ನಿರ್ದೇಶನ ನೀಡಿದ್ದು, ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಈಗ

published on : 15th July 2020

ಕೊಪ್ಪಳ ಮೆಡಿಕಲ್ ಕಾಲೇಜು ದಿನಕ್ಕೆ ಸಾವಿರ ಕೋವಿಡ್ ಪರೀಕ್ಷೆ ಮುೂಲಕ ಅನುಕರಣೀಯ ಸಾಧನೆ-ಡಾ.ಕೆ.ಸುಧಾಕರ್ 

ಕೊಪ್ಪಳ ಮೆಡಿಕಲ್ ಕಾಲೇಜು ಕೆಲ ಕುಂದು ಕೊರತೆಗಳ ಹೊರತಾಗಿಯೂ ದಿನಕ್ಕೆ 1000 ಕೋವಿಡ್ ಪರೀಕ್ಷೆಗಳನ್ನು  ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

published on : 12th July 2020

ನೇರ ಉದ್ಯೋಗ ಸಾಲದ‌ ಫಲಾನುಭವಿ ಪಟ್ಟಿಯಲ್ಲಿ ಕೊಪ್ಪಳಕ್ಕೆ ಪ್ರಥಮ ಸ್ಥಾನ

ನೇರ ಉದ್ಯೋಗ ಸಾಲದ ಫಲಾನುಭವಿಗಳ ಪಟ್ಟಿಯಲ್ಲಿ ಕೊಪ್ಪಳ ಅಗ್ರ ಸ್ಥಾನಕ್ಕೇರಿದೆ ಎಂದು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳಿದರು.

published on : 10th July 2020

ಕೊಪ್ಪಳ: ವಿವಾಹಕ್ಕೆ ವಿರೋಧ, ಪ್ರೇಮಿಗಳಿಬ್ಬರೂ ಆತ್ಮಹತ್ಯೆ  

ವಿವಾಹಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೆ.ರಾಂಪುರ ಗ್ರಾಮದಲ್ಲಿ ನಡೆದಿದೆ.

published on : 4th July 2020

ಕೊಪ್ಪಳ: ಸಾಮಾಜಿಕ ಅಂತರಕ್ಕಾಗಿ ಸಿಮೆಂಟ್ ರಿಂಗ್ ಇಟ್ಟು ಉಪನೋಂದಣಾಧಿಕಾರಿ ಎಡವಟ್ಟು!

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಏನೊ ಮಾಡಲು ಹೋಗಿ ಮತ್ತೇನೊ ಮಾಡಿಕೊಂಡಿದ್ದಾರೆ ಕೊಪ್ಪಳದ ಉಪನೋಂದಣಾಧಿಕಾರಿ ರುದ್ರಮೂರ್ತಿ!

published on : 3rd July 2020

ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂ. ಮೀಸಲು: ರಮೇಶ್ ಜಾರಕಿಹೊಳಿ

ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂ. ಮೀಸಲಿರಿಸಿದ್ದು,ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ

published on : 26th June 2020

ದುಬೈಗೆ ರಫ್ತಾಗಬೇಕಿದ್ದ ಆಸ್ಟ್ರೇಲಿಯನ್ ಗ್ರೀನ್ ಬೆರ್ರಿ ಲಾಕ್ಡೌನ್: ಬಡವರಿಗೆ ಉಚಿತವಾಗಿ ಹಂಚಿದ ಯುವಕ

ದೂರದ ದುಬೈ ದೇಶಕ್ಕೆ ರಫ್ತಾಗಬೇಕಿದ್ದ ನೂರಾರು ಕ್ವಿಂಟಲ್ ಆಸ್ಟ್ರೇಲಿಯನ್ ಗ್ರೀನ್ ಬೆರ್ರಿ ಎಂಬ ತಳಿಯ ಪಪ್ಪಾಯ ಹಣ್ಣು ಲಾಕ್ಡೌನ್ ಪರಿಣಾಮದಿಂದ ಸಕಾಲಕ್ಕೆ ರಫ್ತಾಗದೆ ಬೆಳಗಾರರು ಸಂಕಷ್ಟಕ್ಕೀಡಾದ ಘಟನೆ ತಾಲ್ಲೂಕಿನ ವೆಂಕಟಗಿರಿ ಕಂದಾಯ ಹೋಬಳಿಯಲ್ಲಿ ನಡೆದಿದೆ.

published on : 25th June 2020

ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತೆ 6 ಕೊರೊನಾ ಕೇಸ್ ದೃಢ

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿದೆ. ಬುಧವಾರ ಸೋಂಕಿತ ಮಹಿಳೆಯನ್ನು ಬಲಿ ಪಡೆದ ಕೊರೊನಾ ಇಂದು (ಶುಕ್ರವಾರ) ಮತ್ತೆ ಆರು ಜನರಿಗೆ ತಗುಲಿದೆ.

published on : 19th June 2020

ಕೊಪ್ಪಳ: ಕೊರೋನಾಗೆ‌ ಜಿಲ್ಲೆಯ‌ ಮೊದಲ ಬಲಿ ಗಂಗಾವತಿಯಲ್ಲಿ

ಗ್ರೀನ್ ಝೋನ್ ಪಟ್ಟಿಯಲ್ಲಿ ಇದ್ದ ಕೊಪ್ಪಳ ಜಿಲ್ಲೆಯಲ್ಲಿ ವಲಸಿಗರಿಂದಾಗಿ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳ ವಾಗಿದ್ದು, ಇದೀಗ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.

published on : 17th June 2020

ರಾಜ್ಯದ 10 ಪ್ರಮುಖ ದೇವಾಲಯಗಳ ಪಟ್ಟಿಗೆ ಹುಲಿಗಿ ಸೇರ್ಪಡೆ: ಅಧಿಕಾರಿ ಮುಂದುವರಿಕೆಗೆ ಡಿಸಿ ಒಲವು

ಭಕ್ತರು ಅತಿಹೆಚ್ಚು ಭೇಟಿ ನೀಡಿ ದರ್ಶನ ಪಡೆಯುವ ಹಾಗೂ ಅತಿ ಹೆಚ್ಚು ಆದಾಯ ಹೊಂದಿರುವ ರಾಜ್ಯದ ಹತ್ತು ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಕೊಪ್ಪಳ ತಾಲ್ಲೂಕಿನ ಹುಲಿಗಿಯೂ ಸ್ಥಾನ ಪಡೆದಿದೆ.

published on : 14th June 2020

ರಕ್ತದಾನಿಯ ಶತಕದ ಕನಸು,ಜೀವ ಉಳಿಸುವ ಮನಸು: 63ನೇ ಬಾರಿ ರಕ್ತದಾನ ಮಾಡಿ ಮಾದರಿಯಾದ ಲಕ್ಷ್ಮೀಕಾಂತ್!

ಇಂದು ವಿಶ್ವ ರಕ್ತದಾನಿಗಳ ದಿನ. ಕೊಪ್ಪಳ ಜಿಲ್ಲೆಯಲ್ಲಿ ಈ ದಿನದ ಸ್ಪೆಷಲ್ ಸೆಲೆಬ್ರಿಟಿ ಎಂದರೆ ಲಕ್ಷ್ಮಿಕಾಂತ್ ಗುಡಿ. ಜೀವ ಉಳಿಸುವ ತುಡಿತದಲ್ಲಿರುವ ಅವರು ಸದಾ ಸೆಲೆಬ್ರಿಟಿಯೇ. ಈ ದಿನ ಬಂತೆಂದರೆ ಸಾಕು,ಎಲ್ಲರ ಕಣ್ಮುಂದೆ ಅವರ ಚಿತ್ರ ಕಾಣುತ್ತದೆ. ಹಲವು ಬಾರಿ ಅವರು ರಕ್ತದಾನ ಮಾಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.

published on : 14th June 2020

ಕೊಪ್ಪಳ: ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ಕೊರೋನಾ ಪಾಸಿಟಿವ್!

ಗಂಗಾವತಿ ತಾಲೂಕಿನ 52 ವರ್ಷದ  5834ನೇ ರೋಗಿ ಸೇರಿದಂತೆ ಕೆಲವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯ ಇಲ್ಲದಿದ್ದರೂ ಕೊರೋನಾ ಸೋಂಕು ತಗುಲಿದೆ. ಮಾರಕ ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮುಂದಾಗಿರುವ ಕೊಪ್ಪಳ ಜಿಲ್ಲಾಡಳಿತ 45 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿದೆ.

published on : 13th June 2020

4 ಕುರಿಗಳ್ಳರು ಪೊಲೀಸ್ ವಶಕ್ಕೆ; 2.44 ಲಕ್ಷ ರೂ.ಮೌಲ್ಯದ ಕುರಿ, ಆಡು, ಟಗರು ವಶಕ್ಕೆ!

ಹಾಡಹಗಲೇ ಲಕ್ಷಾಂತರ ಮೌಲ್ಯದ ಕುರಿಗಳನ್ನು ಕಳ್ಳತನ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ ನಾಲ್ಕು ಮಂದಿ ಕುರಿಗಳ್ಳರನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

published on : 12th June 2020

ಏಪ್ರಿಲ್, ಮೇ ತಿಂಗಳಲ್ಲಿ ಲಾಕ್ ಡೌನ್ ಪೀಡಿತ ಜನರಿಗೆ ವರದಾನವಾದ ಜಾಬ್ ಕಾರ್ಡ್ ಗಳು!

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೋನಾವೈರಸ್ ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಣೆ ಕಷ್ಟವೆನ್ನುತ್ತಿದ್ದ ಜನರಿಗೆ ಜಾಬ್ ಕಾರ್ಡ್ ಗಳು ಮನ್ರೇಗಾ ಯೋಜನೆಯಡಿ ಕೆಲಸ ದೊರಕಿಸುವ ಮೂಲಕ ವರದಾನವಾಗಿ ಪರಿಣಮಿಸಿವೆ.

published on : 11th June 2020
1 2 3 4 5 6 >