• Tag results for Mysuru Dasara 2021

ದಸರಾ ಸಂಭ್ರಮ: ನಾಡಿನ ಜನತೆಗೆ ಸಿಎಂ ಬೊಮ್ಮಾಯಿ ಶುಭಾಶಯ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಗುರುವಾರದಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

published on : 7th October 2021

ಅ.7ರಿಂದ ನಾಡಹಬ್ಬ ದಸರಾ ಆಚರಣೆ: ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ 

ಅಕ್ಟೋಬರ್ 7ರಂದು  ಬೆಳಗ್ಗೆ ಉದ್ಘಾಟನೆಯಾದರೆ 15ರಂದು ವಿಜಯದಶಮಿಗೆ ಮುಕ್ತಾಯವಾಗಲಿದ್ದು ಕೋವಿಡ್-19 ಸೋಂಕಿನ ಮಧ್ಯೆ ಎಚ್ಚರಿಕೆಯಿಂದ ಆಚರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಹಬ್ಬ ಆಚರಣೆಗೆ ಮೈಸೂರು ಮತ್ತು ರಾಜ್ಯದ ಬೇರೆ ಕಡೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.

published on : 5th October 2021

ಮೈಸೂರು ನಗರ ಎಷ್ಟೊಂದು ಸುಂದರ: ಇತಿಹಾಸ, ಸಂಸ್ಕೃತಿ, ವೈಭವದ ಹಂದರ

ಇನ್ನು ಕೆಲವೇ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲಿದೆ. ಮೈಸೂರು ದಸರಾ ಎಂದರೆ ಕೇವಲ ನಮ್ಮ ರಾಜ್ಯದಿಂದ ಮಾತ್ರವಲ್ಲ ದೇಶ-ವಿದೇಶಗಳಿಂದ ಪ್ರವಾಸಿಗರು ಬಂದು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವ ನಾಡಹಬ್ಬ. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ.

published on : 1st October 2021

ಮೈಸೂರು ದಸರಾ 2021: ಗಜ ಪಯಣಕ್ಕೆ ಚಾಲನೆ, ಜಂಬೂಸವಾರಿ ಆನೆಗಳು ಮೈಸೂರಿನತ್ತ ಪ್ರಯಾಣ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ನಾಡಹಬ್ಬ‌ ದಸರೆಯ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಸೋಮವಾರ ಸಂಭ್ರಮದಿಂದ ಚಾಲನೆ ನೀಡಲಾಗಿದ್ದು, ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಸಾಂಸ್ಕೃತಿಕ ನಗರಿಯತ್ತ ಪ್ರಯಾಣ ಬೆಳೆಸಿವೆ. 

published on : 13th September 2021

ರಾಶಿ ಭವಿಷ್ಯ