• Tag results for Nirmala Sitharaman

ದೇಶದ ಆರ್ಥಿಕತೆ ಪುನಶ್ಚೇತನ ಕಾಣುತ್ತಿದೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 

ದೇಶದಲ್ಲಿ ಆರ್ಥಿಕ ಪುನಶ್ಚೇತನ ಕಾಣುವ ಲಕ್ಷಣ ಕಾಣುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

published on : 12th November 2020

ನಿರ್ಮಲಾ ಸೀತಾರಾಮನ್ ರಿಂದ 2.65 ಲಕ್ಷ ಕೋಟಿ ರೂ. ಗಳ ಹೊಸ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಣೆ

ಕೇಂದ್ರ ಸರ್ಕಾರ ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಸಂತೋಷದ ಸುದ್ದಿ ನೀಡಿದ್ದು, ಆತ್ಮನಿರ್ಭರ ಯೋಜನೆಯ ಭಾಗವಾಗಿ ಹಲವು ಪ್ರೋತ್ಸಾಹಕಗಳನ್ನು ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಕಟಿಸಿದರು. 

published on : 12th November 2020

ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ವಸ್ತು, ನಾಣ್ಯ ಹಸ್ತಾಂತರಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ಮತ್ತು ಮಧ್ಯಕಾಲೀನ ಅವಧಿಯ ಪ್ರಾಚೀನ ವಸ್ತುಗಳು/ನಾಣ್ಯಗಳನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ(ಸ್ವತಂತ್ರ ನಿರ್ವಹಣೆ) ಪ್ರಹ್ಲಾದ ಪಟೇಲ್ ಅವರಿಗೆ ನಾರ್ತ್ ಬ್ಲಾಕ್ ನಲ್ಲಿ ನಡೆದ ಸಮಾರಂಭದಲ್ಲಿಂದು ಹಸ್ತಾಂತರಿಸಿದರು.

published on : 11th November 2020

ಆ ವಿಷಯದಲ್ಲಿ ಅಣ್ಣ ತಂಗಿ ಮೌನವಾಗಿರುವುದು ಏಕೆ?: ರಾಹುಲ್ ಗಾಂಧಿ, ಪ್ರಿಯಾಂಕಾ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ

ಪಂಜಾಬ್ ನಲ್ಲಿ ಬಿಹಾರದ ದಲಿತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಘಟನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಅಣ್ಣ ತಂಗಿ ಏಕೆ ಮೌನ ವಹಿಸಿದ್ದಾರೆ ಎಂದು ಬಿಜೆಪಿ ನಾಯಕಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಶನಿವಾರ ಪ್ರಶ್ನಿಸಿದ್ದಾರೆ.

published on : 25th October 2020

ರಾಜ್ಯಗಳ ಜಿಎಸ್ಟಿ ಕೊರತೆ ಸರಿತೂಗಿಸಲು 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಸರ್ಕಾರ ಮುಂದು!

ರಾಜ್ಯಗಳ ಜಿಎಸ್ಟಿ ಆದಾಯದ ಕೊರತೆಯನ್ನು ನಿವಾರಿಸಲು ವಿಶೇಷ ಅವಕಾಶದಡಿ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

published on : 16th October 2020

ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ 68,825 ಕೋಟಿ ರೂ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಾಲದ ಮೂಲಕ  68,825 ಕೋಟಿ ರೂ ಪಡೆಯಲು ಅನುಮತಿ ನೀಡಿದೆ.

published on : 13th October 2020

ಜಿಎಸ್ ಟಿ ಸಭೆ: 'ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ' ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಜಿಎಸ್ ಟಿ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

published on : 13th October 2020

ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ: ನಿರ್ಮಲಾ ಸೀತಾರಾಮನ್‌

ಸಂಸತ್ತಿನಲ್ಲಿ ಜಾರಿಯಾದ ಮೂರು ಕೃಷಿ ಮಸೂದೆಗಳು ಕೃಷಿ ವಲಯದಲ್ಲಿ ಸುಧಾರಣೆ ತರಲಿದೆ ಎಂದಿರುವ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್  ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.

published on : 6th October 2020

ದಿವಾಳಿ ಸಂಹಿತೆ(2ನೇ ತಿದ್ದುಪಡಿ) ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ದಿವಾಳಿ ಸಂಹಿತೆಯಡಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆ(ಸಿಐಆರ್‌ಪಿ) ಆರಂಭವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮಸೂದೆಯನ್ನು ರಾಜ್ಯಸಭೆ ಶನಿವಾರ ಅಂಗೀಕರಿಸಿದೆ.

published on : 19th September 2020

ಪಕ್ಕದ ಮನೆ ಆಂಟಿಯಂತೆ ಕಾಣುವ ನಾನು 'ದೇವರ ಆಟ' ಎಂದು ಹೇಳಿದ್ದನ್ನು ವ್ಯಂಗ್ಯ ಮಾಡುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

ಒಬ್ಬ ಸರಳ ಹಣಕಾಸು ಸಚಿವೆ 'ಇದು ದೇವರ ಆಟ' ಎಂದು ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ 'ಫೋರ್ಸ್ ಮಜೂರ್' ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

published on : 19th September 2020

ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ: ಹಣಕಾಸು, ರಕ್ಷಣಾ ಸಚಿವರ ಭೇಟಿ, ಬಾಕಿ ಅನುದಾನ, ವಿವಿಧ ಯೋಜನೆಗಳಿಗೆ ಅನುಮತಿ ಕೋರಿದ ಬಿಎಸ್'ವೈ

ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಗುರುವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ನೆನೆಗುದಿಗೆ ಬಿದ್ದ ಯೋಜನೆಗಳಿಗೆ ಅನುದಾನ ಹಾಗೂ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

published on : 18th September 2020

ಜಮ್ಮು ಕಾಶ್ಮೀರಕ್ಕಾಗಿ ನೀತಿಗಳ ರಚನೆಗೆ ನೈಜ ಪರಿಸ್ಥಿತಿ ಅರಿಯುವ ಪ್ರಯತ್ನ ಸಾಗಿದೆ; ನಿರ್ಮಲಾ ಸೀತಾರಾಮನ್

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಪಟ್ಟ ನೀತಿಗಳನ್ನು ರಚಿಸುವ ಸಲುವಾಗಿ ಅಲ್ಲಿನ ನೈಜ ಪರಿಸ್ಥಿತಿಯನ್ನು ಅರಿಯಲು ಕೇಂದ್ರ ಸರ್ಕಾರ ಉತ್ಸುಕವಾಗಿವೆ ಎಂದು ಉನ್ನತ ಕೈಗಾರಿಕಾ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರ

published on : 2nd September 2020

ಇದ್ಯಾವ ಸೀಮೆ ಆರ್ಥಿಕ ನೀತಿ- ದಿನೇಶ್ ಗುಂಡೂರಾವ್

ಸಾಲ ಮಾಡಿ ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ ನಿರ್ಮಲಾ ಸೀತಾರಾಮನ್ ಅವರದ್ದು ಯಾವ ಸೀಮೆಯ ಆರ್ಥಿಕ ನೀತಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

published on : 29th August 2020

ಕೊರೋನಾ ಪೂರ್ವ ಅಸಮರ್ಪಕ ಆರ್ಥಿಕತೆಯನ್ನು ದೇವರ ಸಂದೇಶವಾಹಕಿಯಾಗಿ ಹೇಗೆ ವಿವರಿಸುವಿರಿ: ನಿರ್ಮಲಾ ಸೀತಾರಾಮನ್ ಗೆ ಪಿ ಚಿದಂಬರಂ ಪ್ರಶ್ನೆ

ಕೊರೋನಾ ಲಾಕ್ಡೌನ್ ಮತ್ತು ದೇಶದ ಆರ್ಥಿಕತೆ ಕುಸಿಯುತ್ತಿರುವುದು ದೇವರ ಆಟ ಎಂದು ಹೇಳಿಕೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ವ್ಯಂಗ ಮಾಡಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ದೇವರ ಸಂದೇಶಗಾರ್ತಿಯಾಗಿ ನಿರ್ಮಲಾ ಸೀತಾರಾಮನ್ ಅವರು ಕೊರೋನಾಕ್ಕಿಂತ ಮೊದಲು ಆರ್ಥಿಕತೆಯ ಅಸಮರ್ಪಕ ನಿರ್ವಹಣೆ ಹೇಗಾಯಿತು ಎಂದು ಹೇಳಬಹುದೇ ಎಂದು ಕೇಳಿದ್ದಾರೆ.

published on : 29th August 2020

ಕೊವಿಡ್ 'ದೇವರ ಆಟ', ಜಿಎಸ್‌ಟಿ ಸಂಗ್ರಹ ಕುಸಿತಕ್ಕೆ ಕೊರೋನಾ ಕಾರಣ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೊವಿಡ್-19 ಸಾಂಕ್ರಾಮಿಕ ದೇವರ ಆಟ...  ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಕುಸಿತಕ್ಕೆ ಕೊರೋನಾ ಲಾಕ್ ಡೌನ್ ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

published on : 27th August 2020
1 2 3 4 5 6 >