• Tag results for Notice

ಕಬ್ಬನ್​ ಪಾರ್ಕ್​​ನಲ್ಲಿ ನಿಯಮಬಾಹಿರ ನಿರ್ಮಾಣ: ರಾಜ್ಯ ಸರ್ಕಾರಕ್ಕೆ 'ಹೈ' ನೋಟಿಸ್

ಕಬ್ಬನ್ ಪಾರ್ಕ್‌ ವ್ಯಾಪ್ತಿಯೊಳಗೆ ಕಾನೂನು ಬಾಹಿರವಾಗಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.

published on : 22nd January 2021

ಮಿರ್ಜಾಪುರ' ವೆಬ್ ಸಿರೀಸ್ ವಿರುದ್ಧ ಅರ್ಜಿ: ಕೇಂದ್ರ ಸರ್ಕಾರ, ಮತ್ತಿತರರಿಗೆ ಸುಪ್ರೀಂ ನೋಟಿಸ್ 

 ವೆಬ್ ಸಿರೀಸ್ ಮಿರ್ಜಾಪುರದಲ್ಲಿ ಗೂಂಡಾಗಳ ನಗರದಂತೆ ತೋರಿಸುವ ಮೂಲಕ  ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರದ ವರ್ಚಸ್ಸಿಗೆ ಸಂಪೂರ್ಣವಾಗಿ ಧಕ್ಕೆ ತರಲಾಗಿದೆ  ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ಕೇಂದ್ರ ಸರ್ಕಾರ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಎಕ್ಸೆಲ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮೆಟೆಡ್ ನಿಂದ ಪ್ರತಿಕ್ರಿಯೆ ಬಯಸಿ ನ

published on : 21st January 2021

ದೆಹಲಿ ಪ್ರತಿಭಟನಾನಿರತ ರೈತರಿಗೆ ಎನ್ಐಎ ನೋಟಿಸ್: ಬ್ರಿಟಿಷ್ ಸಂಸದ ತನ್ಮಂಜೀತ್ ಸಿಂಗ್ ದೇಸಿ ಕಳವಳ

ನವದೆಹಲಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ  ಹಲವಾರು ಜನರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೋಟಿಸ್ ಕಳುಹಿಸಿರುವ ವಿಷಯವನ್ನು ಬ್ರಿಟಿಷ್ ಲೇಬರ್ ಪಕ್ಷದ ಸಂಸದ ತನ್ಮಂಜೀತ್ ಸಿಂಗ್ ದೇಸಿ ಪ್ರಶ್ನಿಸಿದ್ದಾರೆ.

published on : 20th January 2021

ಮುಖ್ಯಮಂತ್ರಿಗೆ ಸಲಹೆಗಾರರ ನೇಮಕ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು 8 ಮಂದಿಯನ್ನು ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ. 

published on : 19th January 2021

ಕೆಜಿಎಫ್-2: ಬಂದೂಕಿನಿಂದ ಸಿಗರೇಟ್ ಹಚ್ಚಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್'ಗೆ ಆರೋಗ್ಯ ಇಲಾಖೆ ನೋಟಿಸ್

ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ನಟ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚಿಕೊಂಡ ದೃಶ್ಯಗಳು ಕಂಡು ಬಂದ ಹಿನ್ನೆಲೆಯಲ್ಲಿ ನಟ ಯಶ್ ಅವರಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. 

published on : 13th January 2021

ಸಾರಿಗೆ ಸಚಿವ ಲಕ್ಷ್ಮಣ ಸವದಿ ಖಾಸಗಿ ವಾಹನಕ್ಕೆ ಡೀಸೇಲ್: ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ನೊಟೀಸ್

ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಇಲ್ಲಿನ ಎನ್‌ಡಬ್ಲ್ಯುಕೆಆರ್‌ಟಿಸಿ 3ನೇ ಘಟಕದ ಡಿಪೊದಲ್ಲಿ ಡೀಸೆಲ್ ತುಂಬಿಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ, ಇಂಧನ ಶಾಖೆಯಲ್ಲಿ ಕಿರಿಯ ಸಹಾಯಕ ಕಿಶೋರ ಬಿ.ಎಸ್. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.

published on : 10th January 2021

ಹಣ ವಂಚನೆ ಪ್ರಕರಣ: ಸಿಸಿಬಿ ಅಧಿಕಾರಿಗಳಿಂದ ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ

ಯುವರಾಜ್ ಸ್ವಾಮಿ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಶುಕ್ರವಾರ ಸಿಸಿಬಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ. 

published on : 8th January 2021

ಟೆಲಿಕಾಂ ಟವರ್ ಹಾನಿ: ಪಂಜಾಬ್, ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ 

ಟೆಲಿಕಾಂ ಮೂಲಸೌಕರ್ಯ ಹಾನಿಗೊಳಿಸಿ, ಬಲವಂತದಿಂದ ಮಳಿಗೆ ಮುಚ್ಚಿಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೇಂದ್ರ ಮತ್ತು ಪಂಜಾಬ್ ಸರ್ಕಾರಕ್ಕೆ ನೋಟಿಸ್ ನೀಡಿದೆ.

published on : 5th January 2021

ಹೊಸ ರೂಪಾಂತರದ ಕೋವಿಡ್‌: ಮರುಕಳಿಸಿದ ಮನೆ ಮುಂದೆ ನೋಟಿಸ್‌ ಲಗತ್ತಿಸುವ ಪದ್ಧತಿ

ಬ್ರಿಟನ್‌ನಿಂದ ಮರಳಿದ ಹೊಸ ರೂಪಾಂತರದ ಕೊರೋನಾ ಸೋಂಕು ಪತ್ತೆಯಾದ ಜನರ ಮನೆ ಮುಂದೆ ನೋಟಿಸ್‌ ಅಂಟಿಸುವ ಪದ್ದತಿಯನ್ನು ಬಿಬಿಎಂಪಿ ಅಧಿಕಾರಿಗಳು ಮತ್ತೊಮ್ಮೆ ಜಾರಿಗೆ ತಂದಿದ್ದಾರೆ.

published on : 31st December 2020

ಮತಪತ್ರದಲ್ಲಿ ತಪ್ಪು ಚಿಹ್ನೆ: ಕಲಬುರಗಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಮತ ಪತ್ರದಲ್ಲಿ ಅಭ್ಯರ್ಥಿ ಚಿಹ್ನೆ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಕಮಲಾಪುರ ತಹಶೀಲ್ದಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

published on : 24th December 2020

ಬಿಡಿಎ ಹಗರಣ: 11 ಅಧಿಕಾರಿಗಳಿಗೆ ನೋಟಿಸ್ ಜಾರಿ

ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಗ್ರಾಮದಲ್ಲಿ ಫಲಾನುಭವಿಗಳಲ್ಲದವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ ಕೋಟ್ಯಾಂತರ ರುಪಾಯಿ ವಂಚಿಸಿದ ಆರೋಪದಡಿ 11 ಮಂದಿ ಅಧಿಕಾರಿ, ಸಿಬ್ಬಂದಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಮಹದೇವ ನೋಟಿಸ್ ಜಾರಿಗೊಳಿಸಿದ್ದಾರೆ.

published on : 23rd December 2020

ಮೇಲ್ಮನೆಯಲ್ಲಿ ಗದ್ದಲ: ಸಭಾಪತಿ ನೋಟಿಸ್ ಗೆ ಸ್ಪಷ್ಟೀಕರಣ ನೀಡಿದ ಕಾರ್ಯದರ್ಶಿ

ಡಿಸೆಂಬರ್ 15 ರಂದು ವಿಧಾನ ಪರಿಷತ್ತಿನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ನೋಟಿಸ್ ನೀಡಿದ್ದ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಪತ್ರದ ಮೂಲಕ ಉತ್ತರ ನೀಡಿದ್ದಾರೆ.

published on : 23rd December 2020

ಕರ್ತವ್ಯನಿರತ ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್

ಕರ್ತವ್ಯನಿರತ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಲು ನಿರ್ದೇಶಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ

published on : 19th December 2020

ಮೇಲ್ಮನೆ ಗದ್ದಲ: ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟೀಸ್; ಸಮಗ್ರ ವರದಿ ಸಲ್ಲಿಸುವಂತೆ ಸಭಾಪತಿ ಸೂಚನೆ

ಸದನ ಕಾರ್ಯಕಲಾಪ ದಾರಿ ತಪ್ಪಲು ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಅತೀವ ನಿರ್ಲಕ್ಷ್ಯ ತೋರಿರುವ ವಿಧಾನಪರಿಷತ್ ಕಾರ್ಯದರ್ಶಿಯವರಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

published on : 18th December 2020

'ಫ್ರೀ ಕಾಶ್ಮೀರ' ಫಲಕ ಪ್ರದರ್ಶನ ಪ್ರಕರಣ: ಮೈಸೂರು ವಕೀಲರ ಸಂಘಕ್ಕೆ 'ಹೈ' ನೋಟಿಸ್

ಸಿಎಎ, ಎನ್ಆರ್'ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಎಂದು ಭಿತ್ತಿಪತ್ರ ಪ್ರದರ್ಶಿಸಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಂಡ ಮೈಸೂರು ವಕೀಲರ ಸಂಘಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

published on : 16th December 2020
1 2 3 4 5 >