• Tag results for Omicron variant

407 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚು; ಫೆ.28ರವರೆಗೆ ಕೋವಿಡ್ ನಿರ್ಬಂಧ ಮುಂದುವರಿಕೆ

ಒಮಿಕ್ರಾನ್ ರೂಪಾಂತರದಿಂದ ಚಾಲಿತವಾಗಿರುವ ಕೋವಿಡ್ ಸೋಂಕಿನ 3ನೇ ಅಲೆ, ಇನ್ನೂ ಉಲ್ಬಣಗೊಳ್ಳುತ್ತಿದ್ದು, ದೇಶದ 407 ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ವರದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಗುರುವಾರ ಅಸ್ತಿತ್ವದಲ್ಲಿರುವ  COVID-19 ನಿರ್ಬಂಧ ಕ್ರಮಗಳನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಿದೆ.

published on : 27th January 2022

ಓಮಿಕ್ರಾನ್ ಪತ್ತೆ ಮಾಡುವ ಟಾಟಾ ಸಿದ್ಧಪಡಿಸಿದ ಮೊದಲ ಕಿಟ್‌ಗೆ ಐಸಿಎಂಆರ್‌ನಿಂದ ಅನುಮೋದನೆ!

ಐಸಿಎಂಆರ್ ಮೊದಲ ಓಮಿಕ್ರಾನ್ ಪತ್ತೆ ಕಿಟ್ ಅನ್ನು ಅನುಮೋದಿಸಿದೆ. ಇದನ್ನು ಟಾಟಾ ಮೆಡಿಕಲ್ ಸಿದ್ಧಪಡಿಸಿದ್ದು, ಇದರ ಹೆಸರು 'ಓಮೈಸ್ಯೂರ್'(Omisure) ಎಂದಾಗಿದೆ.

published on : 4th January 2022

ಕೋವಿಡ್-19: ತಮಿಳುನಾಡಿನಲ್ಲಿ ಒಂದೇ ದಿನ 33 ಮಂದಿಗೆ ಓಮೈಕ್ರಾನ್ ಪಾಸಿಟಿವ್

ತಮಿಳುನಾಡಿನಲ್ಲಿ ಗುರುವಾರ ಒಂದೇ ದಿನ 33 ಮಂದಿಗೆ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

published on : 23rd December 2021

ದೇಶದಲ್ಲಿ ಇಲ್ಲಿಯವರೆಗೂ 49 ಓಮಿಕ್ರಾನ್ ರೂಪಾಂತರ ಪ್ರಕರಣ ಪತ್ತೆ 

ದೇಶದಲ್ಲಿ ಇಲ್ಲಿಯವರೆಗೂ ಕೊರೋನಾ ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದ ನಾಲ್ವರಿಗೆ ಓಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ. 

published on : 14th December 2021

ಬ್ರಿಟನ್ ನಲ್ಲಿ ಒಮೈಕ್ರಾನ್‍ನಿಂದ ಓರ್ವ ವ್ಯಕ್ತಿ ಸಾವು

ಇಡೀ ಜಗತ್ತನ್ನು ಆತಂಕಕ್ಕೆ ತಳ್ಳುತ್ತಿರುವ ಕೋವಿಡ್-19 ಹೊಸ ರೂಪಾಂತರ ತಳಿ ಒಮೈಕ್ರಾನ್‍ನಿಂದಾಗಿ ಲಂಡನ್ನಿನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

published on : 13th December 2021

ಗುಜರಾತ್ ನಲ್ಲಿ ಮತ್ತೆ ಇಬ್ಬರಿಗೆ ಓಮಿಕ್ರಾನ್: ಸೋಂಕಿತ ವ್ಯಕ್ತಿಯ ಪತ್ನಿ, ಸೋದರ ಮಾವನಿಗೆ ಪಾಸಿಟಿವ್

ಗುಜರಾತ್‌ನಲ್ಲಿ ವಾರದ ಹಿಂದೆ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಎನ್‌ಆರ್‌ಐ ವ್ಯಕ್ತಿಯ ಪತ್ನಿ ಮತ್ತು ಸೋದರ ಮಾವನಿಗೂ ಕೋವಿಡ್-19 ಹೊಸ ರೂಪಾಂತರಿ ದೃಢಪಟ್ಟಿದೆ ಎಂದು ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್

published on : 10th December 2021

ಹೆಚ್ಚುತ್ತಿರುವ ಓಮಿಕ್ರಾನ್ ಆತಂಕ: ರಾಜ್ಯ ಸರ್ಕಾರಕ್ಕೆ ಐವರ ಜಿನೋಮಿಕ್ ಸೀಕ್ವೆನ್ಸ್ ವರದಿಯದ್ದೇ ಚಿಂತೆ!

ಸಾರ್ಸ್ ಕೋವಿಡ್ 2 ವೈರಸ್(SARS-CoV-2)A ಓಮಿಕ್ರಾನ್ ರೂಪಾಂತರಿ ಎರಡು ಕೊರೋನಾ ಪ್ರಕರಣಗಳು ರಾಜ್ಯದ ಬೆಂಗಳೂರಿನಲ್ಲಿ ಪತ್ತೆಯಾದ ನಂತರ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಅವರ ಜಿಮೋಮ್ ಸೀಕ್ವೆನ್ಸ್ ವರದಿಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

published on : 6th December 2021

ಓಮ್ರಿಕಾನ್ ಭೀತಿ: ಭಾರತದಲ್ಲಿ ಪ್ರತೀ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಗೆ ಓಡಾಡುತ್ತಿದ್ದಾರೆ: ಅಧ್ಯಯನದ ಆಘಾತಕಾರಿ ವರದಿ

ಇಡೀ ಜಗತ್ತನ್ನಿಲ್ಲಿ ಭೀತಿ ಮೂಡಿಸಿರುವ ಕೋರೋನಾ ವೈರಸ್ ಹೊಸ ರೂಪಾಂತರ ಸೋಂಕು ಓಮ್ರಿಕಾನ್ ವ್ಯಾಪಕವಾಗಿ ಹರಡುತ್ತಿರುವಂತೆಯೇ ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಆರಂಭವಾಗಿದ್ದು, ಇದಕ್ಕೆ ಸಾರ್ವಜನಿಕರ ನಿರ್ಲಕ್ಷ್ಯದ ಧೋರಣೆಯೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

published on : 5th December 2021

ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಮಹಾರಾಷ್ಟ್ರ ವ್ಯಕ್ತಿಗೆ ಓಮಿಕ್ರಾನ್ ದೃಢ, ದೇಶದಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

ದಕ್ಷಿಣ ಆಫ್ರಿಕಾದಿಂದ ದುಬೈ ಹಾಗೂ ದೆಹಲಿ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ಆಗಮಿಸಿದ ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಪ್ರದೇಶದ ವ್ಯಕ್ತಿಯೊಬ್ಬರಿಗೆ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ದೃಢಪಟ್ಟಿದೆ ಎಂದು ಅಧಿಕಾರಿಗಳು...

published on : 4th December 2021

ಗುಜರಾತ್ ನಲ್ಲಿ ಮೊದಲ, ಭಾರತದಲ್ಲಿ ಮೂರನೇ ಓಮಿಕ್ರಾನ್ ಪ್ರಕರಣ ಪತ್ತೆ!

ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕು ಕರ್ನಾಟಕದ ಬೆನ್ನಲ್ಲೇ ಇದೀಗ ಗುಜರಾತ್ ನಲ್ಲೂ ಪತ್ತೆಯಾಗಿದೆ.

published on : 4th December 2021

ಓಮಿಕ್ರಾನ್ ರೂಪಾಂತರಿಯಿಂದ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ: ಡಬ್ಲ್ಯೂಹೆಚ್ ಒ

ಕೋವಿಡ್-19 ರೂಪಾಂತರಿ ಓಮಿಕ್ರಾನ್ ಹೊಸ ತಳಿಯಿಂದ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.

published on : 3rd December 2021

ಓಮಿಕ್ರಾನ್ ಭೀತಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ 10 ಮಂದಿ ದಕ್ಷಿಣ ಆಫ್ರಿಕಾ ಪ್ರಯಾಣಿಕರು ನಾಪತ್ತೆ!

ಬೆಂಗಳೂರಿನ ಮೂಲಕ ಭಾರತಕ್ಕೂ ಒಕ್ಕರಿಸಿರುವ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ವ್ಯಾಪಕವಾಗಿರುವಂತೆಯೇ ಇತ್ತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ 10 ಮಂದಿ ದಕ್ಷಿಣ ಆಫ್ರಿಕಾ ಪ್ರಯಾಣಿಕರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದೆ.

published on : 3rd December 2021

ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಓಮಿಕ್ರಾನ್ ರೂಪಾಂತರ ಪತ್ತೆ

ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಕೋವಿಡ್-19 ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪತ್ತೆಯಾಗಿದೆ. ಶ್ರೀಲಂಕಾದಲ್ಲಿ ಶುಕ್ರವಾರ ಓಮಿಕ್ರಾನ್ ರೂಪಾಂತರಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸೇವೆಗಳ ಉಪ ಮಹಾನಿರ್ದೇಶಕ ಹೇಮಂತ ಹೆರತ್ ಹೇಳಿದ್ದಾರೆ.

published on : 3rd December 2021

ಓಮಿಕ್ರಾನ್ ಭೀತಿ: 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆಗೆ ಭಾರತೀಯ ವಿಜ್ಞಾನಿಗಳ ಶಿಫಾರಸು

ಕೊರೋನಾದ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಪತ್ತೆಯಾಗಿದ್ದು, ಈ ಹೊಸ ಸೋಂಕು ಹರಡುತ್ತಿರುವ ಭೀತಿ ಎದುರಾಗಿತ್ತುದ್ದಂತೆಯೇ 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಭಾರತೀಯ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.

published on : 3rd December 2021

ಕೋವಿಡ್ ರೂಪಾಂತರ ಓಮಿಕ್ರಾನ್ ನಿಂದ ಡೆಲ್ಟಾಗಿಂತ 3 ಪಟ್ಟು ಹೆಚ್ಚು ಮರುಸೋಂಕು ಸಾಧ್ಯತೆ: ಅಧ್ಯಯನ

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೋರೋನಾ ವೈರಸ್ ನ ನೂತನ ರೂಪಾಂತರ ಓಮಿಕ್ರಾನ್, ಈ ಹಿಂದಿನ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಮರು ಸೋಂಕು ಉಂಟುಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.

published on : 3rd December 2021
1 2 > 

ರಾಶಿ ಭವಿಷ್ಯ