• Tag results for PM Narendra Modi

ಯುಗಾದಿ: ನಾಡಿನ ಜನತೆಗೆ ಪ್ರಧಾನಿ ಮೋದಿ, ಸಿಎಂ ಸೇರಿ ಗಣ್ಯರ ಶುಭಾಶಯ

ಪ್ಲವನಾಮ ಸಂವತ್ಸರ ಪ್ರಾರಂಭವಾಗಿರುವ ಇಂದಿನ ಯುಗಾದಿ ಹಬ್ಬವನ್ನು ದೇಶಾದ್ಯಂತ ಜನತೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಿಎಂ ಬಿ,ಎಸ್, ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.

published on : 13th April 2021

ದೇಶದ ಜನತೆ 4 ವಿಷಯಗಳಿಗೆ ಬದ್ಧರಾಗಿ, ಕೊರೋನಾ ಲಸಿಕೆ ಉತ್ಸವದಲ್ಲಿ ಭಾಗಿಯಾಗಿ: ಪ್ರಧಾನಿ ಮೋದಿ ಕರೆ 

ದೇಶಾದ್ಯಂತ ಭಾನುವಾರದಿಂದ ಕೊರೋನಾ ಲಸಿಕೆ ಉತ್ಸವ ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ  ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೋನಾ ೨ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 4 ದಿನಗಳ ಈ ಲಸಿಕಾ ಉತ್ಸವ ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಅವರು ಕರೆ ಕೊಟ್ಟಿದ್ದಾರೆ.

published on : 11th April 2021

ಬಂಗಾಳದಲ್ಲಿ ನಿಜವಾದ ಬದಲಾವಣೆಯ ಮಹಾಯಾಗ ಮೇ 2 ರಿಂದ ಆರಂಭ: ಪ್ರಧಾನಿ ಮೋದಿ

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದಿಂದ ಪಶ್ಚಿಮ ಬಂಗಾಳದಲ್ಲಿ ಮೇ 2ರಿಂದ ನಿಜವಾದ ಬದಲಾವಣೆಯ ಮಹಾಯಾಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. 

published on : 10th April 2021

ಜೀವನದಲ್ಲಿ ಪರೀಕ್ಷೆಗಳೇ ಕೊನೆಯಲ್ಲ, ಅದು ಸವಾಲನ್ನು ಎದುರಿಸಲು ಅವಕಾಶ: 'ಪರೀಕ್ಷಾ ಪೇ ಚರ್ಚಾ'ದಲ್ಲಿ ಪಿಎಂ ಮೋದಿ

ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಒತ್ತಡ ಮುಕ್ತ ಪರೀಕ್ಷೆಗಳಿಗೆ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

published on : 7th April 2021

 ಇಂದು ಸಂಜೆ 7 ಗಂಟೆಗೆ 'ಪರೀಕ್ಷಾ ಪೆ ಚರ್ಚಾ-2021' ಕಾರ್ಯಕ್ರಮ ನೇರ ಪ್ರಸಾರ: ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಾದ 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲೊಂದು ಪರೀಕ್ಷಾ ಪೆ ಚರ್ಚಾ. ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಹೇಗೆ ಸಿದ್ದವಾಗಬೇಕು, ಏನು ಮಾಡಬೇಕು ಎಂದು ಸಲಹೆ ನೀಡುತ್ತಾ ಸಂವಾದ ನಡೆಸುತ್ತಾರೆ.

published on : 7th April 2021

ನಾಳೆ ಬಿಜೆಪಿ ಸ್ಥಾಪನಾ ದಿನ: ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ 

ಪಂಚರಾಜ್ಯಗಳ ಚುನಾವಣಾ ರ್ಯಾಲಿಗಳಿಂದ ಕೊಂಚ ವಿರಾಮ ಪಡೆದುಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

published on : 5th April 2021

ಗೀತಾ ಪ್ರೆಸ್ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ನಿಧನ, ಪ್ರಧಾನಿ ಮೋದಿ ಸಂತಾಪ

ಗೀತಾ ಪ್ರೆಸ್‌ನ ಅಧ್ಯಕ್ಷ ರಾಧೇಶ್ಯಾಮ್ ಖೇಮ್ಕಾ ಅಲ್ಪಾವಧಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

published on : 5th April 2021

ದೇಶದಲ್ಲಿ ಕೊರೋನಾ ಸ್ಫೋಟ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ, ಪರಿಸ್ಥಿತಿ ಪರಾಮರ್ಶೆ 

ದೇಶದಲ್ಲಿ ಕೊರೋನಾದ ಎರಡನೇ ಅಲೆ ಎದ್ದು ಹೆಚ್ಚಾಗುತ್ತಿರುವ ಸೋಂಕಿನ ಮಧ್ಯೆ ಕೋವಿಡ್-19 ಪರಿಸ್ಥಿತಿ ಮತ್ತು ಲಸಿಕೆ ಅಭಿಯಾನದ ಕುರಿತು ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ದೆಹಲಿಯಲ್ಲಿ ನಡೆಯುತ್ತಿದೆ.

published on : 4th April 2021

ಜಾತ್ಯತೀತತೆ, ಕೋಮುವಾದದ ಆಟಗಳು ದೇಶಕ್ಕೆ ದೊಡ್ಡ ಹಾನಿ ಉಂಟುಮಾಡಿವೆ: ಪ್ರಧಾನಿ ಮೋದಿ

ಯಾವುದೇ ತಾರತಮ್ಯ ತೋರದೆ ನಾವು ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುತ್ತೇವೆ, ಆದರೆ ಕೆಲವರು ದೇಶವನ್ನು ವೋಟ್ ಬ್ಯಾಂಕ್ ಗಾಗಿ ವಿಭಜಿಸುತ್ತಿದ್ದಾರೆ. ಅದನ್ನು ದುರದೃಷ್ಟವಾಗಿ ಜಾತ್ಯತೀತತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

published on : 3rd April 2021

ಸಾಂಪ್ರದಾಯಿಕ ದಿರಿಸು ಧೋತಿ-ಶರ್ಟ್ ನಲ್ಲಿ ಮದುರೈ ಮೀನಾಕ್ಷಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ!

ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಧಿರಿಸಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳು ನಾಡಿನ ಖ್ಯಾತ ಮದುರೈ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಿರುವ ಫೋಟೋ ಎಲ್ಲೆಲ್ಲೂ ಹರಿದಾಡುತ್ತಿದೆ.

published on : 2nd April 2021

ಮಾತುಕತೆಗೆ ಪೂರಕ ವಾತಾವರಣ ನಿರ್ಮಿಸುವುದು ಮುಖ್ಯವಾಗಿದೆ: ಪ್ರಧಾನಿ ಮೋದಿ ಪತ್ರಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ

ಪಾಕಿಸ್ತಾನ ದಿನಕ್ಕೆ ಪತ್ರ ಬರೆದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿವಾದ ಸೇರಿದಂತೆ ಎರಡೂ ದೇಶಗಳ ನಡುವಿನ ಎಲ್ಲಾ ವಿವಾದಗಳನ್ನು ಮಾತುಕತೆ ಮೂಲಕವೇ ಪರಿಹರಿಸಲು ಸಾಧ್ಯ ಎಂದು ಹೇಳಿದ್ದಾರೆ.

published on : 31st March 2021

ಕೃಷಿ ಕ್ಷೇತ್ರದಲ್ಲಿ ಆಧುನೀಕರಣ ಇಂದು ಅತ್ಯಗತ್ಯವಾಗಿದೆ: ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ 

ಕೃಷಿ ವಲಯದಲ್ಲಿ ಆಧುನೀಕರಣ ಇಂದಿನ ಅನಿವಾರ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಕೃಷಿ ವಲಯದಲ್ಲಿ ಆಧುನಿಕ ಪದ್ಧತಿಗಳ ಅಳವಡಿಕೆ ಇಂದಿನ ಅಗತ್ಯತೆಯಾಗಿದ್ದು ಜೀವನದ ಪ್ರತಿ ಗಳಿಗೆಯಲ್ಲಿ ಹೊಸತನ, ಆಧುನೀಕರಣ ಮುಖ್ಯವಾಗಿದೆ ಎಂದರು.

published on : 28th March 2021

ಹವಾಮಾನ ಬದಲಾವಣೆ ಶೃಂಗಸಭೆ, ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರ ಆಹ್ವಾನ, ಪಟ್ಟಿಯಲ್ಲಿಲ್ಲ ಇಮ್ರಾನ್ ಖಾನ್ ಹೆಸರು! 

ಏಪ್ರಿಲ್ 22 ಮತ್ತು 23ರಂದು ವರ್ಚುವಲ್ ಆಗಿ ನಡೆಯುವ ಹವಾಮಾನ ಬದಲಾವಣೆ ಶೃಂಗಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ 40 ನಾಯಕರನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಸ್ವಾಗತಿಸಿದ್ದಾರೆ.

published on : 28th March 2021

ಭಾರತ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಫಲಪ್ರದವಾಗಲಿದೆ: ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ 

ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದವರಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಕೂಡ ಒಬ್ಬರು.

published on : 27th March 2021

ಕೋವಿಡ್-19ನಿಂದ ಮನುಕುಲವನ್ನು ಕಾಪಾಡಲು ಕಾಳಿ ಮಾತೆಯನ್ನು ಬೇಡಿಕೊಂಡೆ; ಸಮುದಾಯ ಭವನ ನಿರ್ಮಾಣ: ಪ್ರಧಾನಿ ಮೋದಿ 

ತಮ್ಮ ಎರಡನೇ ದಿನದ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆಯೇ ಸತ್ಕಿರ ಜಿಲ್ಲೆಯ ಈಶ್ವರಿಪುರದಲ್ಲಿರುವ ಜೆಶೊರೇಶ್ವರಿ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

published on : 27th March 2021
1 2 3 4 5 6 >