• Tag results for Plane

ದೆಹಲಿ-ಬೆಂಗಳೂರು ಇಂಡಿಗೋ ವಿಮಾನದ ಇಂಜಿನ್ ನಲ್ಲಿ ಬೆಂಕಿ

ದೆಹಲಿ-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೆಹಲಿ ವಿಮಾನದಲ್ಲಿ ಈ ಘಟನೆ ನಡೆದಿದೆ.

published on : 29th October 2022

ದೀಪಾವಳಿ ಹಬ್ಬದಂದು ಸೂರ್ಯಗ್ರಹಣ; ಬೆಂಗಳೂರಿನಲ್ಲಿ ಶೇ.10ರಷ್ಟು ಮಾತ್ರ ಗೋಚರ

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗದಿದ್ದಲ್ಲಿ ಅಕ್ಟೋಬರ್ 25ರಂದು ನಗರದಲ್ಲಿ ಶೇ 10ರಷ್ಟು ಮಾತ್ರ ಸೂರ್ಯಗ್ರಹಣ ಗೋಚರಿಸಲಿದೆ.

published on : 23rd October 2022

ಗೋವಾದಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ, ತನಿಖೆಗೆ ಆದೇಶ

ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಬುಧವಾರ ರಾತ್ರಿ ಗೋವಾದಿಂದ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನಯಾನ ನಿಯಂತ್ರಕ ಡಿಜಿಸಿಎ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 13th October 2022

ನಮೀಬಿಯಾದಿಂದ ಚೀತಾಗಳನ್ನು ಕರೆತರುವ ವಿಮಾನ, ಜೈಪುರ ಬದಲಿಗೆ ಗ್ವಾಲಿಯರ್ ನಲ್ಲಿ ಲ್ಯಾಂಡ್

ನಮೀಬಿಯಾದಿಂದ 8 ಚೀತಾಗಳನ್ನು ಕರೆತರುತ್ತಿರುವ ವಿಶೇಷ ಕಾರ್ಗೋ ವಿಮಾನ ಈ ಹಿಂದೆ ಯೋಜಿಸಿದ್ದಂತೆ ರಾಜಸ್ಥಾನದ ಜೈಪುರದ ಬದಲಿಗೆ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಲ್ಯಾಂಡ್ ಆಗಲಿದೆ. ನಂತರ ಈ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

published on : 16th September 2022

ಅಮೆರಿಕ: ವಿಮಾನ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಬಂಧನ

ಅಮೆರಿಕದ ಈಶಾನ್ಯ ಮಿಸ್ಸಿಸ್ಸಿಪ್ಪಿ ನಗರದ ಟುಪೆಲೋದಲ್ಲಿ ಉದ್ದೇಶಪೂರ್ವಕವಾಗಿ ವಾಲ್‌ಮಾರ್ಟ್‌ಗೆ ವಿಮಾನ ಅಪ್ಪಳಿಸಿ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು,...

published on : 3rd September 2022

ಲಾಕ್‌ಡೌನ್ ಸಮಯದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ ರೈತನ ಮೃತದೇಹ ಪತ್ತೆ!

2020ರ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ಅಣಬೆ ಕೃಷಿ ಮಾಡುತ್ತಿದ್ದ ರೈತರೊಬ್ಬರು ದೆಹಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.

published on : 24th August 2022

ವಿಮಾನದೊಳಗೆ ಧೂಮಪಾನ: ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ವಿರುದ್ಧ ಪ್ರಕರಣ ದಾಖಲು

ಸ್ಪೈಸ್‌ಜೆಟ್‌ ವಿಮಾನದಲ್ಲಿ ಸಿಗರೇಟ್‌ ಹಚ್ಚುತ್ತಿರುವ ವಿಡಿಯೋ ವೈರಲ್ ಬೆನ್ನಲ್ಲೇ ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 16th August 2022

ಅಹ್ಮದಾಬಾದ್-ಚಂಡೀಗಢ ಮಾರ್ಗದ ವಿಮಾನಕ್ಕೆ ಹಕ್ಕಿ ಢಿಕ್ಕಿ; ಮಾರ್ಗ ಬದಲಾವಣೆ

ಅಹ್ಮದಾಬಾದ್ ನಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಗೋ ಫಸ್ಟ್ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮಾರ್ಗವನ್ನು ಬದಲಾವಣೆ ಮಾಡಲಾಯಿತು.

published on : 4th August 2022

ಪೆಲೋಸಿ ನಿರ್ಗಮನದ ನಂತರ ತೈವಾನ್‌ ವಾಯು ರಕ್ಷಣಾ ವಲಯಕ್ಕೆ ಚೀನಾದ 27 ಯುದ್ಧ ವಿಮಾನಗಳ ಪ್ರವೇಶ

ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ ಗೆ ಭೇಟಿ ನೀಡಿ ವಾಪಸ್ ಆದ ಬೆನ್ನಲ್ಲೇ ಚೀನಾದ ಇಪ್ಪತ್ತೇಳು ಯುದ್ಧ ವಿಮಾನಗಳು ಬುಧವಾರ ತೈವಾನ್‌ನ ವಾಯು ರಕ್ಷಣಾ ವಲಯ ಪ್ರವೇಶಿಸಿವೆ ಎಂದು ತೈವಾನ್ ದೃಢಪಡಿಸಿದೆ.

published on : 3rd August 2022

ಮತ್ತೊಂದು ಸ್ಪೈಸ್‌ಜೆಟ್ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

ಗುಜರಾತಿನ ಕಾಂಡ್ಲಾದಿಂದ ಮಂಗಳವಾರ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನದ ಹೊರಭಾಗದ ವಿಂಡ್‌ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

published on : 5th July 2022

ನೇಪಾಳ ವಿಮಾನ ಪತನ: 21 ಮೃತದೇಹಗಳು ಪತ್ತೆ, ಶೋಧ ಕಾರ್ಯಾಚರಣೆ ಮುಂದುವರಿಕೆ

ವಾರಾಂತ್ಯದಲ್ಲಿ ಹಿಮಾಲಯ ಕಣಿವೆ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ 22 ಪ್ರಯಾಣಿಕರ ಮೃತದೇಹವನ್ನು ನೇಪಾಳದ ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದಿರುವುದಾಗಿ ಸೇನೆ ಸೋಮವಾರ ತಿಳಿಸಿದೆ.

published on : 30th May 2022

ನೇಪಾಳದಲ್ಲಿ ನಾಗರಿಕ ವಿಮಾನ ಅಪಘಾತ: 14 ಶವಗಳ ಪತ್ತೆ; ಉಳಿದವರಿಗಾಗಿ ಶೋಧ ಮುಂದುವರಿಕೆ

ಹಿಮಾಲಯದಲ್ಲಿ 22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ಪ್ರಯಾಣಿಕ ವಿಮಾನದ ಅವಶೇಷಗಳಿಂದ 14 ಮೃತದೇಹಗಳನ್ನು ನೇಪಾಳ ಸೇನಾ ಸಿಬ್ಬಂದಿ ಸೋಮವಾರ ಹೊರತೆಗೆದಿದ್ದಾರೆ.

published on : 30th May 2022

ನೇಪಾಳದಲ್ಲಿ ವಿಮಾನ ಅಪಘಾತ: ಅವಶೇಷಗಳನ್ನು ಪತ್ತೆಹಚ್ಚಿದ ಸೇನಾಪಡೆ

22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನ ಸೋಮವಾರ ಪತ್ತೆಯಾಗಿದೆ ಎಂದು ನೇಪಾಳ ಸೇನೆ ತಿಳಿಸಿದೆ. ವಿಮಾನದ ಅವಶೇಷಗಳನ್ನು ಶೋಧನಾ ತಂಡ ಪತ್ತೆಹಚ್ಚಿ ಫೋಟೋ ಹಂಚಿಕೊಂಡಿದೆ. ಹೆಚ್ಚುವರಿ ತಂಡಗಳು ಅವಶೇಷಗಳು ಸಿಕ್ಕಿರುವ ಸ್ಥಳಕ್ಕೆ ದೌಡಾಯಿಸುತ್ತಿದ್ದು ನಂತರ ಸಂಪೂರ್ಣ ವಿವರ ಸಿಗಲಿದೆ ಎಂದು ನೇಪಾಳ ಸೇನೆ ವಕ್ತಾರ ನಾರಾಯಣ ಸಿಲ್ವಲ್ ತಿಳಿಸಿದ್ದಾರೆ.

published on : 30th May 2022

ಚೀನಾ: ರನ್ ವೇನಲ್ಲಿ ಧಗಧಗನೆ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್ ವಿಮಾನ, ಹಲವು ಪ್ರಯಾಣಿಕರಿಗೆ ಗಾಯ- ವಿಡಿಯೋ ವೈರಲ್

ಚೀನಾದ ಚಾಂಗ್ ಕಿಂಗ್ ನಲ್ಲಿ ಇಂದು ಬೆಳಗ್ಗೆ ಭಾರೀ ಅವಘಡವೊಂದು ತಪ್ಪಿದೆ. ಟಿಬೆಟ್ ಏರ್ ಲೈನ್ಸ್ ನ ವಿಮಾನವೊಂದು ಟೇಕ್ ಆಫ್ ಆಗುವ ವೇಳೆ ರನ್ ವೇನಲ್ಲಿ ಹೊತ್ತಿ ಉರಿದಿದೆ. ಚೀನಾಕ್ಕೆ ಸೇರಿದ ಜೋಂಗ್ ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಈ ಅವಘಡ ನಡೆದಿದೆ.

published on : 12th May 2022

ತುರ್ತು ಭೂಸ್ಪರ್ಶದ ವೇಳೆ ಅಪಘಾತ, ಎರಡು ತುಂಡಾದ ಕಾರ್ಗೊ ವಿಮಾನ

ತುರ್ತು ಭೂಸ್ಪರ್ಶದ ಸಮಯದಲ್ಲಿ ಸರಕು ವಿಮಾನವೊಂದು ಪೈಲಟ್ ನಿಯಂತ್ರಣ ತಪ್ಪಿ ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

published on : 8th April 2022
1 2 > 

ರಾಶಿ ಭವಿಷ್ಯ