• Tag results for Politics

ಶಾಸಕ ಜಮೀರ್ ಅಹ್ಮದ್‌ಗೆ ಲಘು ಹೃದಯಾಘಾತ, ಶಸ್ತ್ರ ಚಿಕಿತ್ಸೆ ಯಶಸ್ವಿ

ಲಘು ಹೃದಯಾಘಾತವಾಗಿ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

published on : 20th October 2019

ಸಾವರ್ಕರ್ ವಿಚಾರದಲ್ಲಿ ಬಿಜೆಪಿ ಮತ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ: ಎಂ.ಪಿ.ರೇಣುಕಾಚಾರ್ಯ

ದುಷ್ಟರಿಗೆ ಪ್ರಶಸ್ತಿ ಕೊಟ್ಟರೆ ಟೀಕೆ ಮಾಡಿ. ಅಪ್ರತಿಮ ದೇಶ ಭಕ್ತನ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಮುಖ್ಯ ಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

published on : 19th October 2019

ದೇವರ ಉತ್ಸವದಲ್ಲಿ ರಾಜಕೀಯ ಬೆರೆಸಬಾರದು: ಪ್ರಜ್ವಲ್ ರೇವಣ್ಣ

ಹಾಸನಾಂಭೆಯ ಉತ್ಸವ ಸರ್ಕಾರಿ ಕಾರ್ಯಕ್ರಮ. ಆದರೇ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ನಮೂದಿಸಿಲ್ಲ. ಇಲ್ಲಿ ರಾಜಕೀಯ ಮಾಡಬಾರದು, ದೇವರ ಉತ್ಸವವನ್ನು ಮಾತ್ರ ಮಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

published on : 18th October 2019

ಮಹಾರಾಷ್ಟ್ರದ 3, ಉ.ಕರ್ನಾಟಕದ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ: ಮತ್ತೆ ಉಮೇಶ ಕತ್ತಿ ವಿವಾದ

ಬಿಜೆಪಿ ಶಾಸಕ ಉಮೇಶ್ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ್ದು, ಮಹಾರಾಷ್ಟ್ರದ 3 ಜಿಲ್ಲೆ, ಉ.ಕರ್ನಾಟಕದ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ ಮಾಡುವ ಕುರಿತು ಸಲಹೆ ನೀಡಿದ್ದಾರೆ.

published on : 18th October 2019

ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ- ಎಚ್. ಡಿ. ಕುಮಾರಸ್ವಾಮಿ

ಸಾ.ರಾ ಮಹೇಶ್ ಹಾಗೂ ಎಚ್.ವಿಶ್ವನಾಥ್ ಇಬ್ಬರೂ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.  ಕುಮಾರಸ್ವಾಮಿ ಹೇಳಿದ್ದಾರೆ.

published on : 17th October 2019

ರಾಜ್ಯದಲ್ಲಿ 32 ಜಿಲ್ಲೆಗಳಾ? ಕನಿಷ್ಠ ಜ್ಞಾನವೂ ಇಲ್ಲದ ಕಟೀಲ್- ಕಾಂಗ್ರೆಸ್ 

ಬಿಜೆಪಿ ಪಾದಯಾತ್ರೆಗೆ ವೇಗ ನೀಡಲು  32ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

published on : 17th October 2019

ಚಾಮುಂಡಿಯ ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸಬೇಡಿ, ನಿಮ್ಮ ಯೋಗ್ಯತೆ ಸಾಬೀತುಪಡಿಸಿ: ದಿನೇಶ್ ಗುಂಡೂರಾವ್

ಜೆಡಿಎಸ್ ಅನರ್ಹ ಶಾಸಕ ಎಚ್ . ವಿಶ್ವನಾಥ್ ಹಾಗೂ  ಶಾಸಕ ಸಾರಾ ಮಹೇಶ್ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿರುವಂತೆ  ನಾಡ  ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಬಳಿ ಆಣೆ ಪ್ರಮಾಣ ಮಾಡುವಂತೆ ಪರಸ್ಪರ ಸವಾಲ್ ಹಾಕಿದ್ದಾರೆ.

published on : 17th October 2019

ಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!

ಭಾರತ ಮಾತ್ರ ಹಿಂದೆ ಅಮೆರಿಕಾ ಹೇಗೆ ರಾಜಕೀಯ ಮಾಡುತ್ತಿತ್ತು ಅದೇ ರಸ್ತೆಯನ್ನ ಅನುಸರಿಸುತ್ತಿದೆ. ಅದೇ ಡಬಲ್ ಸ್ಟ್ಯಾಂಡರ್ಡ್!!. ಗಮನಿಸಿ ಮೋದಿಯವರು ಅಮೆರಿಕಾಗೆ ಹೋಗುತ್ತಾರೆ "ಹೌಡಿ ಮೋದಿ" ಅಂತ ಕಾರ್ಯಕ್ರಮ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ನ ಪರಮ ಮಿತ್ರ ಎನ್ನುವಂತೆ ಫೋಟೋ ತೆಗೆಸಿಕೊಂಡು ಬರುತ್ತಾರೆ. ಬಂದವರು ಸುಮ್ಮನಿರುವುದಿಲ್ಲ... 

published on : 17th October 2019

ವರ್ಚಸ್ಸು ಕಾಪಾಡಿಕೊಳ್ಳಲು 'ಹೊಸ ಜಿಲ್ಲೆ' ಪ್ರಸ್ತಾಪ ಮುಂದಿಟ್ಟಿದ್ದಾರಾ ವಿಶ್ವನಾಥ್?

ಉಪ ಚುನಾವಣೆ ಹತ್ತಿರ ಬರುತ್ತಿರುವಾಗಲೇ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಕಂಡುಬರತೊಡಗಿವೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹುಣಸೂರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕರಾಗಿರುವ...

published on : 16th October 2019

ಸಿದ್ದರಾಮಯ್ಯ ಹೆಗಲೇರಿದ ಉಪ ಚುನಾವಣೆ ಹೊಣೆ: ವೀಕ್ಷಕರ ಸಭೆಗೆ ಹಿರಿಯ ನಾಯಕರ ಗೈರು 

ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆದಿದ್ದ ವೀಕ್ಷಕರ ಹಾಗೂ ನಾಯಕರ ಸಭೆಗೆ ಗೈರಾಗುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ.

published on : 15th October 2019

ಹೊಸ ಜಿಲ್ಲೆಗಳಿಗೆ ನೇತಾರರ ಬೇಡಿಕೆ: ಅಭಿವೃದ್ಧಿಯ ಗುರಿಯೋ ಅಥವಾ ರಾಜಕೀಯ ಮಹತ್ವಾಕಾಂಕ್ಷೆಯೋ?

ರಾಜ್ಯದ  15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬಳಿಕ ಕಳೆದ ತಿಂಗಳು, ಸುಮಾರು 9 ಹೊಸ ಜಿಲ್ಲೆಗಳಿಗೆ ಬೇಡಿಕೆ  ಇಡಲಾಗಿದೆ. ಪ್ರತಿಯೊಬ್ಬ ರಾಜಕೀಯ ನೇತರರಿಗೂ ತಾವು ಪ್ರತಿನಿಧಿಸುವ ಕ್ಷೇತ್ರವೇ ಜಿಲ್ಲಾ ಪ್ರಧಾನ ಕಚೇರಿಯಾಗಬೇಕೆಂದು ಬಯಸುತ್ತಿದ್ದಾರೆ.

published on : 15th October 2019

ಹುಣಸೂರು  ಜಿಲ್ಲಾ ರಚನೆ ವಿಶ್ವನಾಥರ ಎಲೆಕ್ಷನ್ ಗಿಮಿಕ್- ದಿನೇಶ್ ಗುಂಡೂರಾವ್ 

ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಬೇಕು ಎಂಬ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಟುವಾಗಿ ವಿರೋಧಿಸಿದ್ದಾರೆ.

published on : 14th October 2019

ನನಗೆ ರಾಜಕಾರಣದ  ಅವಶ್ಯಕತೆಯಿಲ್ಲ- ಎಚ್. ಡಿ. ಕುಮಾರಸ್ವಾಮಿ  

ಮಾಜಿ ಮುಖ್ಯಮಂತ್ರಿ ಎಚ್. ಡಿ.  ಕುಮಾರಸ್ವಾಮಿ ಮತ್ತೆ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನನಗೆ ರಾಜಕಾರಣದ ಅವಶ್ಯಕತೆಯಿಲ್ಲ ಎಂದಿದ್ದಾರೆ.

published on : 14th October 2019

ಶ್ರೀರಾಮುಲು ಉಪ ಮುಖ್ಯಮಂತ್ರಿ ಆಗಬೇಕು: ಸೋಮಶೇಖರ ರೆಡ್ಡಿ

ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ  ಒತ್ತಾಯಿಸಿದ್ದಾರೆ. 

published on : 13th October 2019

ಕಾಗೇರಿ ಅವರಂತಹ ವಿಧಾನಸಭಾಧ್ಯಕ್ಷರನ್ನು ಹಿಂದೆಂದೂ ನೋಡಿಲ್ಲ- ಸಿದ್ದರಾಮಯ್ಯ

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂತಹ ವಿಧಾನಸಭಾದ್ಯಕ್ಷರನ್ನು ಹಿಂದೆಂದೂ ನೋಡಿಲ್ಲ. ಪ್ರತಿಪಕ್ಷ ಸದಸ್ಯರು ಮಾತನಾಡುವುದನ್ನು ತಡೆಯುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದೇ ಆದಲ್ಲಿ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

published on : 13th October 2019
1 2 3 4 5 6 >