ಸಿನಿಮಾ ಸುದ್ದಿನಟಿ ಸಮಂತಾಗೆ 37ನೇ ಹುಟ್ಟುಹಬ್ಬದ ಸಂಭ್ರಮ; ಹೊಸ ಚಿತ್ರ 'ಬಂಗಾರಂ' ಘೋಷಣೆ
ನಟಿ ಸಮಂತಾ ರುತ್ ಪ್ರಭು ಅವರು ಭಾನುವಾರ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಸಮಂತಾ ಹುಟ್ಟುಹಬ್ಬಕ್ಕೆ ಹಲವಾರು ಸೆಲೆಬ್ರಿಟಿಗಳು ಶುಭ ಕೋರಿದ್ದು, ಖುಷಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ವಿಜಯ್ ದೇವರಕೊಂಡ ಕೂಡ ಶುಭಾಶಯಗಳನ್ನು ತಿಳಿಸಿದ್ದಾರೆ.