Centre

ಆಯುರ್ವೇದ ಆಧಾರಿತ ಕೋವಿಡ್-19 ಚಿಕಿತ್ಸೆಯ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ
ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದರ ಮಧ್ಯೆ ಕಡಿಮೆ ಮತ್ತು ರೋಗಲಕ್ಷಣರಹಿತ ಕೋವಿಡ್-19 ವೈರಸ್ ಸೋಂಕಿತರಿಗೆ ಗುಡುಚಿ, ಅಶ್ವಗಂಧ ಮತ್ತು ಆಯುಷ್ -64ನಂತಹ ಆಯುರ್ವೇದ ವಸ್ತುಗಳನ್ನು ಬಳಸಬಹುದು ಎಂದು ಕೇಂದ್ರ ಆಯುಷ್ ಇಲಾಖೆ ಜನರಿಗೆ ಶಿಫಾರಸು ಮಾಡಿದೆ.

ಕೋವಿಡ್-19 ತಡೆಗೆ ಗುಡುಚಿ, ಅಶ್ವಗಂಧ ಆಯುಷ್-64 ಬಳಸಲು ಕೇಂದ್ರ ಸರ್ಕಾರ ಶಿಫಾರಸು
ಕೋವಿಡ್-19 ಲಸಿಕೆಯ ಪ್ರಯೋಗದ ಹಂತಗಳು ಇನ್ನೂ ಮುಂದುವರೆದಿದ್ದು, ಲಘು ಮತ್ತು ಲಕ್ಷಣ ರಹಿತ ಕೋವಿಡ್-19 ರೋಗಿಗಳಿಗೆ ಸಾಮಾನ್ಯ ಆಯುರ್ವೇದಿಕ್ ಮೂಲಿಕೆಗಳಾಗಿರುವ ಗುಡುಚಿ, ಅಶ್ವಗಂಧ ಆಯುಷ್-64ನ್ನು ಬಳಸಲು ಕೇಂದ್ರ ಸರ್ಕಾರ ಮಂಗಳವಾರ ಶಿಫಾರಸು ಮಾಡಿದೆ.

ಅಕ್ಟೋಬರ್ 15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಆರಂಭ, ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ: ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಕೇಂದ್ರ ಸರ್ಕಾರದ ಆದೇಶದಂತೆ ಅ.15ರಿಂದ ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್'ಗಳು ಪುನರಾರಂಭಗೊಳ್ಳಲು ತುದಿಗಾಲಲ್ಲಿ ನಿಂತಿರುವ ನಡುವಲ್ಲೇ ಈ ಕುರಿತ ಮಾರ್ಗಸೂಚಿಯೊಂದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.

ಸಾಲಪಾವತಿ ವಿನಾಯಿತಿ ಅವಧಿಯಲ್ಲಿ 2 ಕೋಟಿ ರೂ. ವರೆಗಿನ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಮಾಡಲು ಸಿದ್ಧ: 'ಸುಪ್ರೀಂ'ಗೆ ಕೇಂದ್ರ
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ 6 ತಿಂಗಳವರೆಗೆ ಸಾಲ ಪಾವತಿ ಅವಧಿ ಮೇಲಿನ ವಿನಾಯಿತಿ ಸಮಯದಲ್ಲಿ 2 ಕೋಟಿ ರೂಪಾಯಿಯವರೆಗಿನ ಸಾಲಗಳ ಬಡ್ಡಿಯ ಮೇಲಿನ ಬಡ್ಡಿಯನ್ನು(ಚಕ್ರಬಡ್ಡಿ) ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ.

ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಹಸ್ತಾಂತರದಿಂದ ಸಣ್ಣ ರೈತರನ್ನು ರಕ್ಷಿಸುವವರು ಯಾರು? ಸೋನಿಯಾ ಗಾಂಧಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳಿಂದ ರೈತರ ಭೂಮಿಯನ್ನು ಕೃಷಿಗಾಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲಾಗುತ್ತದೆ. ಆಗ ಕೋಟ್ಯಂತರ ಸಣ್ಣ ರೈತರನ್ನು ಯಾರು ರಕ್ಷಿಸುತ್ತಾರೆ? ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ಕರ್ನಾಟಕ ಸೇರಿ ಐದು ರಾಜ್ಯಗಳಿಂದ ಬೇಳೆಕಾಳು, ಎಣ್ಣೆ ಬೀಜಗಳ ಖರೀದಿಗೆ ಕೇಂದ್ರದ ಅನುಮೋದನೆ
ತೊಗರಿ ಕಣಜ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಿಸಿ ಬೇಳೆ ಕಾಳು ಖರೀದಿ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ರೈತರ ಸಮಾಧಾನಪಡಿಸಲು ಹರಿಯಾಣ, ಪಂಜಾಬ್ನಲ್ಲಿ ತಕ್ಷಣ ಭತ್ತ ಖರೀದಿಗೆ ಕೇಂದ್ರ ಆದೇಶ
ಪ್ರತಿಭಟನಾ ನಿರತ ರೈತರನ್ನು ಸಮಾಧಾನಗೊಳಿಸುವ ಯತ್ನಿಸಿರುವ ಕೇಂದ್ರ ಸರ್ಕಾರ ಶನಿವಾರದಿಂದ ಪಂಜಾಬ್ ಮತ್ತು ಹರಿಯಾಣದಲ್ಲಿ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ಪಿ) ಭತ್ತ ಖರೀದಿಸಲು ಅನುಮತಿ ನೀಡಿದೆ.

ಐಜಿಎಸ್ ಟಿಯನ್ನು ತಪ್ಪಾಗಿ ಲೆಕ್ಕಹಾಕಿದ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಭಾರೀ ನಷ್ಟ: ಸಿಎಜಿ ವರದಿಯಲ್ಲಿ ಬಹಿರಂಗ
ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಪರಿಹಾರವನ್ನು ನೀಡದಿರುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿರುವಾಗ, ಕೇಂದ್ರ ಸರ್ಕಾರ ಆಂತರಿಕ ಸರಕು ಮತ್ತು ಸೇವಾ ತೆರಿಗೆ(ಐಜಿಎಸ್ ಟಿ)ಯನ್ನು ತಪ್ಪಾಗಿ ಲೆಕ್ಕಹಾಕಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ(ಸಿಎಜಿ) ಹೇಳಿದೆ.

ನಾಗರಿಕ ಸೇವೆಗಳ ಪರೀಕ್ಷೆ ಮುಂದೂಡುವ ವಿಚಾರ: ಕೇಂದ್ರ, ಯುಪಿಎಸ್ ಸಿಗೆ ಸುಪ್ರೀಂ ನೋಟಿಸ್
ಕೋವಿಡ್ -19 ಸಾಂಕ್ರಾಮಿಕ ಮತ್ತು ಭೀಕರ ಪ್ರವಾಹದ ಹಿನ್ನೆಲೆಯಲ್ಲಿ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ನೋಟಿಸ್ ನೀಡಿದೆ.

