Corona Virus

ಸದ್ಯಕ್ಕೆ ಕೊರೋನಾ ನಿರ್ಮೂಲನೆ ಅಸಾಧ್ಯ; ಅದರೊಂದಿಗೆ ಬದುಕುವುದನ್ನು ಕಲಿಯಬೇಕು: ಡಾ. ಕೆ.ಸುಧಾಕರ್
ಕಳೆದ ಕೆಲ ದಿನಗಳಿಂದ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಸೋಂಕು ಸುಲಭದಲ್ಲಿ ನಿರ್ಮೂಲನೆ ಆಗಲಾರದು ಎಂದು ನಿನ್ನೆ ವಿಶ್ವಸಂಸ್ಥೆ ಸಹ ಖಚಿತ ಪಡಿಸಿದೆ. ಹೀಗಾಗಿ ನಾವು ಇದರ ಜೊತೆಗೆ ಬದುಕುವುದನ್ನು ಕಲಿಯಬೇಕು ಸಚಿವ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಹೇಳಿದ್ದಾರೆ.

ಗ್ರಾಮೀಣ ಭಾರತಕ್ಕೂ ಅಂಟಿದ ಕೊರೋನಾ ಸೋಂಕು?, ನಿಯಂತ್ರಣ ಕಳೆದುಕೊಂಡಿತೇ ಭಾರತ?
ದೇಶಾದ್ಯಂತ ತನ್ನ ಕದಂಬ ಬಾಹುಗಳನ್ನು ಚಾಚುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ಇದೀಗ ಗ್ರಾಮೀಣ ಭಾರತವನ್ನೂ ಆಕ್ರಮಿಸಿತೇ ಎಂಬ ಆತಂಕ ಇದೀಗ ವ್ಯಕ್ತವಾಗುತ್ತಿದೆ.

10.9 ರಿಂದ 12.2ಕ್ಕೆ; ಕೊರೋನಾ ವೈರಸ್ ದ್ವಿಗುಣ ಪ್ರಮಾಣ ಮತ್ತಷ್ಟು ಇಳಿಕೆ!
ಮಾರಕ ಕೊರೋನಾ ವೈರಸ್ ಪ್ರಸರಣ ಪ್ರಮಾಣ ಭಾರತದಲ್ಲಿ ಮತ್ತಷ್ಟು ನಿಧಾನಗತಿಯಾಗಿದ್ದು, ದೇಶದಲ್ಲಿ ವೈರಸ್ ಸೋಂಕಿತರ ದ್ವಿಗುಣ ಪ್ರಮಾಣ ಮತ್ತಷ್ಟು ಕುಸಿತವಾಗಿದೆ.

ಗ್ರೀನ್ ಜೋನ್ ಯಾದಗಿರಿಗೂ ಕಾಲಿಟ್ಟ ಡೆಡ್ಲಿ ವೈರಸ್: ಇಬ್ಬರಲ್ಲಿ ಸೋಂಕು ಪತ್ತೆ
ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆಗೂ ಡೆಡ್ಲಿ ವೈರಸ್ ಕೊರೋನಾ ಕಾಲಿಟ್ಟಿದ್ದು, ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಅಹಮದಾಬಾದ್ ನಿಂದ ಸುರಪುರಕ್ಕೆ ಮೂವರು ಬಂದಿದ್ದರು, ಇದರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.

2,90,000 ಗಡಿ ದಾಟಿದ ಜಾಗತಿಕ ಕೊರೋನಾ ವೈರಸ್ ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ 4,238,703ಕ್ಕೆ ಏರಿಕೆ
ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ಸಾವಿನ ಸಂಖ್ಯೆ 290,000 ಗಡಿ ದಾಟಿದ್ದು, 290,269ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ನೀಡಿದೆ.

ಕೊರೋನಾ ಸೋಂಕು ಗೆದ್ದು ಬಂದ ಸ್ಪೈನ್ ನ 113 ವರ್ಷದ ಅಜ್ಜಿ ಮರಿಯಾ ಬ್ರನ್ಯಾಸ್
ಈ ಅಜ್ಜಿ ಎರಡೂ ವಿಶ್ವಯುದ್ಧ ಮತ್ತು ಸ್ಪೈನ್ ನ ನಾಗರಿಕ ಯುದ್ಧಗಳನ್ನು ನೋಡಿದ್ದರು. ಇಂದು ಇಡೀ ವಿಶ್ವ ಕೊರೊನಾ ವೈರಸ್ ಸೋಂಕಿನಲ್ಲಿ ನಲುಗಿ ಹೋಗಿದೆ. ಅದರಲ್ಲೂ ಸ್ಪೈನ್ ಸೇರಿದಂತೆ ಯುರೋಪ್ನಲ್ಲಿ ಅತಿ ಹೆಚ್ಚು ಸಂಕಷ್ಟವನ್ನು ಬೀರಿದೆ. ಇಂದು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಸ್ಪೈನ್ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.

ಕೊರೋನಾ ವೈರಸ್: ಭಾರತದಲ್ಲಿ 24 ಗಂಟೆಗಳಲ್ಲಿ 3,604 ಹೊಸ ಪಾಸಿಟಿವ್ ಪ್ರಕರಣಗಳು ದಾಖಲು, ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆ
ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಮತ್ತೆ 3,604 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ.

ಐಐಟಿ ದೆಹಲಿಯ ಕಡಿಮೆ ವೆಚ್ಚದ ಕೋವಿಡ್-19 ಟೆಸ್ಟ್ ಕಿಟ್ ಗೆ ಬೆಂಗಳೂರು ಮೂಲದ ಸಂಸ್ಥೆಯ ಸಹಭಾಗಿತ್ವ, ಜೂನ್ ವೇಳೆಗೆ ಕಿಟ್ ಲಭ್ಯ!
ಐಐಟಿ ದೆಹಲಿ ತಯಾರಿಸುತ್ತಿರುವ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷೆ ಕಿಟ್ ತಯಾರಿಕೆಗೆ ಬೆಂಗಳೂರು ಮೂಲದ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಈ ವಿಶೇಷ ಕಿಟ್ ಗಳು ಜೂನ್ ಮೊದಲ ವಾರದಲ್ಲಿ ಲಭ್ಯವಾಗುವ ಸಾಧ್ಯತೆ ಎಂದು ಹೇಳಲಾಗಿದೆ.

ಕೊರೋನಾ ವೈರಸ್ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷ, ಇಡೀ ನಗರದ ಜನರ ಪರೀಕ್ಷೆಗೆ ಮುಂದಾದ ಚೀನಾ ಸರ್ಕಾರ!
ವಿಶ್ವದ 190ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನ ತವರು ವುಹಾನ್ ನಲ್ಲಿ ಮತ್ತೆ ಸೋಂಕು ಪ್ರತ್ಯಕ್ಷವಾಗಿದ್ದು, ಇದೇ ಕಾರಣಕ್ಕೆ ಚೀನಾ ಸರ್ಕಾರ ಇಡೀ ವುಹಾನ್ ನಗರದ ಜನತೆಗೆ ಕೊರೋನಾ ಪರೀಕ್ಷೆ ನಡೆಸಲು ಮುಂದಾಗಿದೆ.

