Corona Virus

ಮದುವೆ ತಂದಿದ್ದ ಆತಂಕ, ಕೊರೊನಾ ಭೀತಿಯಿಂದ ಕೊಪ್ಪಳ ನಿರಾಳ!
ಕಳೆದೆರಡು ದಿನಗಳಿಂದ ಕೊಪ್ಪಳ ಜಿಲ್ಲೆಯ ಜನರ ನಿದ್ದೆ ಕೆಡಿಸಿದ್ದ ನಿಲೋಗಲ್ ಗ್ರಾಮದ 18 ಜನರ ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ನಿರಾಳರಾಗಿದ್ದಾರೆ.

ಅಮೆರಿಕ: ಡೊನಾಲ್ಡ್ ಟ್ರಂಪ್ ಕೊರೋನಾ ಸಂಕಷ್ಟವನ್ನು ಸರಿಯಾಗಿ ನಿರ್ವಹಿಸಿಲ್ಲ: ಬರಾಕ್ ಒಬಾಮಾ ಆಡಿಯೋ ಲೀಕ್!
ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸಂಕಷ್ಟವನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಚೀನಾಗೆ ಸರಕು ಸಾಗಣೆ ವಿಮಾನ ಚಲಾಯಿಸಿದ್ದ ಏರ್ ಇಂಡಿಯಾದ 5 ಪೈಲಟ್ ಗಳಿಗೆ ಕೊರೋನಾ ಸೋಂಕು!
ಮಾರಕ ಕೊರೋನಾ ವೈರಸ್ ತವರು ಚೀನಾಗೆ ಸರಕು ಸಾಗಣಿಕಾ ವಿಮಾನಗಳನ್ನು ಚಲಾಯಿಸಿದ್ದ ಏರ್ ಇಂಡಿಯಾದ ಐದು ಪೈಲಟ್ ಗಳಿಗೆ ಕೋವಿಡ್-19 ವೈರಸ್ ವಕ್ಕರಿಸಿದೆ ಎಂದು ತಿಳಿದುಬಂದಿದೆ.

ಆಪರೇಷನ್ ಸಮುದ್ರ ಸೇತು: ಮಾಲ್ಡೀವ್ಸ್ ನಿಂದ 698 ಭಾರತೀಯರ ಕರೆತಂದ 'ಐಎನ್ಎಸ್ ಜಲಾಶ್ವ'
ಮಾಲ್ಡೀವ್ಸ್ ನಲ್ಲಿ ನಿರಾಶ್ರಿತರಾಗಿದ್ದ 698 ಮಂದಿ ಭಾರತೀಯರನ್ನು ಭಾರತೀಯ ನೌಕಾದಳದ ಯುದ್ಧ ನೌಕೆ 'ಐಎನ್ಎಸ್ ಜಲಾಶ್ವ' ಯಶಸ್ವಿಯಾಗಿ ಕರೆತಂದಿದ್ದು, ಇಂದು ಕೊಚ್ಚಿ ಬಂದರಿಗೆ ಬಂದು ಲಂಗರು ಹಾಕಿದೆ.

9 ತಿಂಗಳ ತುಂಬು ಗರ್ಭಿಣಿ ಕೊರೋನಾ ವಾರಿಯರ್ಗೆ ಸಿಎಂ ಬಿಎಸ್ ವೈ ಕರೆ ಮಾಡಿ ಅಭಿನಂದನೆ!
ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಕೊರೋನಾ ವಿರುದ್ಧದ ಸಮರದಲ್ಲಿ ಕಾರ್ಯಪೌರುತ್ತರಾಗಿದ್ದರೆ. ಇದರ ಮಧ್ಯೆ ನರ್ಸ್ ಆಗಿರುವ 9 ತಿಂಗಳ ತುಂಬು ಗರ್ಭಿಣಿ ಸಹ ಕರ್ತವ್ಯ ನಿಭಾಯಿಸುತ್ತಿದ್ದು ಅದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ ಶ್ಲಾಘಿಸಿದ್ದಾರೆ.

ಮಹಾರಾಷ್ಟ್ರ: 20 ಸಾವಿರ ದಾಟಿದ ಸೋಂಕಿತರ ಸಂಖ್ಯೆ, 24 ಗಂಟೆಗಳಲ್ಲಿ 48 ಮಂದಿ ಬಲಿ
ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ನಿನ್ನೆ ಒಂದೇ ದಿನ 1,165 ಹೊಸ ಸೋಂಕು ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 20,228ಕ್ಕೆ ಏರಿಕೆಯಾಗಿದೆ.

#ವಂದೇ ಭಾರತ್ ಮಿಷನ್: ಇಂಗ್ಲೆಂಡ್ನಿಂದ ಬೆಂಗಳೂರಿಗೆ 250 ಕನ್ನಡಿಗರು ವಾಪಸ್!
ಭಾರತ ಸರ್ಕಾರದ ಅತೀ ದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ನಡಿಯಲ್ಲಿ ಲಂಡನ್ ನಲ್ಲಿ ನಿರಾಶ್ರಿತರಾಗಿರುವ ಸುಮಾರು 250 ಕನ್ನಡಿಗರು ಮಂಗಳವಾರ ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ.

ಮಿಜೋರಾಂ ಕೊರೋನಾ ಮುಕ್ತ; ವೈರಸ್ ನಿಂದ ಮುಕ್ತಿ ಪಡೆದ ದೇಶದ ಐದನೇ ರಾಜ್ಯ
ದೇಶದಲ್ಲಿ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಐದನೇ ರಾಜ್ಯ ಎಂಬ ಕೀರ್ತಿಗೆ ಇದೀಗ ಈಶಾನ್ಯ ಭಾರತದ ಮಿಜೋರಾಂ ಪಾತ್ರವಾಗಿದೆ.

ಕೊರೋನಾ ವೈರಸ್: ವಿಶ್ವಾದ್ಯಂತ 40,24,140ಕ್ಕೇರಿದ ಸೋಂಕಿತರ ಸಂಖ್ಯೆ, 2,79,319 ಕ್ಕೇರಿದ ಸಾವಿನ ಸಂಖ್ಯೆ
ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 40,24,140ಕ್ಕೇರಿದ್ದು, ಅಂತೆಯೇ ಸಾವಿನ ಸಂಖ್ಯೆ ಕೂಡ 2,79,319 ಕ್ಕೇರಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

