coronavirus

ಇಂದು 6 ಹೊಸ ಪ್ರಕರಣ ಪತ್ತೆ: ಕೊರೋನಾ ಭೀತಿಗೆ ಮಾ.31ರವರೆಗೆ ರಾಜ್ಯ ಪೂರ್ಣ ಸ್ತಬ್ದ, ಯುಗಾದಿ ಸಡಗರಕ್ಕೂ ತಣ್ಣೀರು!
ಕೊರೋನಾ ತಡೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ವಿನಿಂದಾಗಿ ರಾಜ್ಯದಲ್ಲಿ ಜನಜೀವನ ಸಂಪೂರ್ಣ ಸ್ತಬ್ದವಾಗಿದ್ದು ಕರೋನ ವಿರುದ್ಧದ ಹೋರಾಟಕ್ಕೆ ರಾಜ್ಯದ ಜನತೆ ಸ್ವಯಂ ಇಚ್ಚೆಯಿಂದಲೇ ಸಾಥ್ ನೀಡಿದ್ದಾರೆ.

ಕರ್ನಾಟಕದಲ್ಲಿ ಇಂದು ಹೊಸದಾಗಿ 6 ಪ್ರಕರಣ ಪತ್ತೆ, ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ!
ಜನತಾ ಕರ್ಫ್ಯೂ ನಡುವೆಯೂ ರಾಜ್ಯದಲ್ಲಿ ಇಂದು ಹೊಸದಾಗಿ 6 ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿದೆ.

ಮಂಗಳೂರಿಗೂ ವ್ಯಾಪಿಸಿದ ಕೋವಿಡ್-19: ಭಟ್ಕಳದ ವ್ಯಕ್ತಿಯಲ್ಲಿ ಸೋಂಕು ಪತ್ತೆ
ಕಡಲತಡಿ ಮಂಗಳೂರಿಗೆ ಕೊರೋನಾ ವೈರಸ್ ವ್ಯಾಪಿಸಿದೆ. ದುಬೈನಿಂದ ನಗರಕ್ಕೆ ಬಂದಿದ್ದ ಭಟ್ಕಳದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ -ಎಸ್ . ಸುರೇಶ್ ಕುಮಾರ್
ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಕೊನೇ ಪರೀಕ್ಷೆ (ಇಂಗ್ಲಿಷ್) ಮೂಂದೂಡಿರುವ ಕುರಿತು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊರೋನಾದಿಂದ 7 ಸಾವು: ಸೋಂಕು ಪೀಡಿತ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಕೇಂದ್ರ ಸಲಹೆ
ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ನಿಂದಾಗಿ ದೇಶದಲ್ಲಿ ಏಳು ಜನರು ಮೃತಪಟ್ಟಿರುವುದು ದೃಢಪಟ್ಟಿದೆ

ಕೊರೋನಾ: ಖಾಸಗಿ ಲ್ಯಾಬ್ ಪರೀಕ್ಷೆಗೆ ದರ ಎಷ್ಟು ಗೊತ್ತಾ?
ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಪರೀಕ್ಷೆ ನಡೆಸುವ ಅನುಮತಿಯನ್ನು ಖಾಸಗಿ ಪ್ರಯೋಗಾಲಯಕ್ಕೂ ನೀಡಲಾಗಿದೆ

ಕೊರೋನಾ: ಲಸಿಕೆ ಸಂಶೋಧನೆ ಯಶಸ್ವಿ ಹಂತ ತಲುಪಿದೆ,ಶುಭ ಸುದ್ದಿ ಪ್ರಕಟಿಸಿದ ಡೊನಾಲ್ಡ್ ಟ್ರಂಪ್
ಕೊರೊನಾ ವೈರಸ್ ಗೆ ಪ್ರತಿರೋಧ ಒಡ್ಡುವಂತಹ ಲಸಿಕೆಯೊಂದರ ಸಂಶೋಧನಾ ಪ್ರಕ್ರಿಯೆ ಬಹುತೇಕ ಯಶಸ್ವಿ ಹಂತ ತಲುಪಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ

ಕೊರೋನಾ ವೈರಸ್ ಭೀತಿ: ಮಾ. 31ರ ವರೆಗೆ ಪಂಜಾಬ್ ಸಂಪೂರ್ಣ ಸ್ಥಬ್ಧ
ಕೊರೋನಾ ವೈರಸ್ ಸೋಂಕಿಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಪಂಜಾಬ್ ಸರ್ಕಾರ ಮಾ. 31ರ ವರೆಗೆ ತನ್ನ ರಾಜ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ ಮುಂದುವರೆದ ಕೊರೋನಾ ಮರಣಮೃದಂಗ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 341ಕ್ಕೇರಿದ ಸೋಂಕಿತರ ಸಂಖ್ಯೆ
ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬಿಹಾರದಲ್ಲಿ ವ್ಯಕ್ತಿಯೊರ್ವ ವೈರಸ್ ನಿಂದ ಸಾವನ್ನಪ್ಪಿದ್ದು, ಇದರಂತೆ ದೇಶದಲ್ಲಿ ಕೊರೋನಾ ವೈರಸ್'ಗೆ ಈ ವರೆಗೂ 6 ಮಂದಿ ಬಲಿಯಾಗಿದ್ದಾರಂದು ವರದಿಗಳಿಂದ ತಿಳಿದುಬಂದಿದೆ.

