• Tag results for crop loss

ಅತಿವೃಷ್ಟಿ ಹಾನಿ: ರೈತರಿಗೆ ಹೆಚ್ಚುವರಿ ಬೆಳೆ ಪರಿಹಾರ, ಶೀಘ್ರ ಬಾಕಿ ಹಣ ಜಮೆ- ಮುಖ್ಯಮಂತ್ರಿ ಬೊಮ್ಮಾಯಿ

ರಾಜ್ಯದಲ್ಲಿ ಅತಿವೃಷ್ಟಿಯಿಂದಾದ ರೈತರ ಬೆಳೆ ಹಾನಿಗೆ ಹೆಚ್ಚುವರಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈಗಾಗಲೇ ಪರಿಹಾರ ಪಡೆದಿರುವ ರೈತರ ಖಾತೆಗೆ ಶೀಘ್ರವಾಗಿ ಬಾಕಿ ಹಣವನ್ನು ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ತಿಳಿಸಿದ್ದಾರೆ.

published on : 21st December 2021

ಬೆಳಗಾವಿ ಅಧಿವೇಶನ: ರೈತರ ಸಂಕಷ್ಟವನ್ನು ಸಭೆಯ ಮುಂದಿಟ್ಟ ಸಿದ್ದರಾಮಯ್ಯ, ಬೆಳೆ ಹಾನಿಗೆ ಮೂರು ಪಟ್ಟು ಪರಿಹಾರಕ್ಕೆ ಆಗ್ರಹ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದು ಅತಿವೃಷ್ಟಿಯಿಂದಾದ ಬೆಳೆ ಹಾನಿ ಕುರಿತಂತೆ ನಿಲುವಳಿ ಸೂಚನೆ 69ರಡಿ ವಿಧಾನಸಭೆಯಲ್ಲಿಂದು ಮಾತನಾಡಿದರು. ನಿನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಇಂದು ಅತಿವೃಷ್ಟಿ ಕುರಿತಂತೆ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಸಭೆಯ ಮುಂದಿಟ್ಟರು.

published on : 14th December 2021

ಭಾರಿ ಮಳೆ: ರಸ್ತೆ ದುರಸ್ತಿಗೆ 500 ಕೋಟಿ ರೂ., ಸಂಪೂರ್ಣ ಮನೆ ಹಾನಿಗೆ 1 ಲಕ್ಷ ರೂ. ಪರಿಹಾರ- ಸಿಎಂ ಬೊಮ್ಮಾಯಿ

ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದ್ದು, ರಸ್ತೆ ದುರಸ್ತಿಗೆ 500 ಕೋಟಿ ರೂ ಹಾಗೂ ಸಂಪೂರ್ಣ ಮನೆ ಹಾನಿಗೆ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

published on : 22nd November 2021

ಕೋಲಾರದಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿ; ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

ಭಾರಿ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಸಂಭವಿಸಿದ ಬೆಳೆ ಹಾನಿ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

published on : 22nd November 2021

ಬೆಳೆ ನಷ್ಟ ಸಮೀಕ್ಷೆ ನಡೆಸಿ, ಪರಿಹಾರ ಪಾವತಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಕಳೆದ ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಭಾರೀ ಪ್ರಮಾಣದ ಬೆಳೆ ನಷ್ಟವಾಗಿದ್ದು, ಕೂಡಲೇ ಈ ಕುರಿತುಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕೆಂದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

published on : 12th November 2021

ಕಲಬುರಗಿಯಲ್ಲಿ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ರು ಹಣ ಖರ್ಚು ಮಾಡಲಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ಎಲ್ಲಾ ಬೆಳೆಯೂ ನಷ್ಟವಾಗಿದೆ ಎಂದು ಕಲಬರುಗಿ ರೈತ ಬಾಬೂರಾವ್ ಎಂಬುವರು ಹೇಳಿದ್ದಾರೆ

published on : 1st October 2021

ರಾಶಿ ಭವಿಷ್ಯ