ರಾಜ್ಯಮದ್ಯ ಉದ್ಯಮಿಗಳಿಗೆ ಗುಡ್ ನ್ಯೂಸ್: ಪರವಾನಗಿ ಶುಲ್ಕದಲ್ಲಿ ಶೇ.10ರಷ್ಟು ಕಡಿತ ಮಾಡಲು ಸರ್ಕಾರ ಚಿಂತನೆ?
ಕರ್ನಾಟಕದ ಲಿಕ್ಕರ್ ಉದ್ಯಮಕ್ಕೆ ಇಲ್ಲಿದೆ ಶುಭಸುದ್ದಿ. ಕೊರೋನಾ ಲಾಕ್ ಡೌನ್ ನಿಂದಾಗಿ ಸುಮಾರು ಎರಡು ತಿಂಗಳು ಉದ್ಯಮವಿಲ್ಲದೆ ಕಷ್ಟವಾಗಿರುವಾಗ ಅದಕ್ಕೆ ಸಹಾಯ ಮಾಡಲು ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇಕಡಾ 10ರಷ್ಟು ಕಡಿತ ಮಾಡಲು ಮತ್ತು ಎರಡು ಕಂತುಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡುವುದನ್ನು ಸರ್ಕಾರ ಪರಿಶೀಲಿಸುತ್ತಿದೆ.