ದೇಶಸಮೋಸಾ, ಗುಟ್ಕಾ, ಪಾನ್, ರಸಗುಲ್ಲ, ಕೋವಿಡ್–19 ಸಹಾಯವಾಣಿಗೆ ಕರೆ; ಯೋಗಿ ಸರ್ಕಾರಕ್ಕೆ ಲಾಕ್ ಡೌನ್ ತಲೆನೋವು!
ಕೊರೋನಾ ವೈರಸ್ ನಿಂದಾಗಿ ತತ್ತರಿಸಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದ್ದು, ಅಗತ್ಯ ವಸ್ತುಗಳು ಮತ್ತು ತುರ್ತು ಸೇವೆಗಳಿಗಾಗಿ ತೆರೆಯಲಾಗಿರುವ ಸಹಾಯವಾಣಿಗೆ ಜನರು ಸಮೋಸಾ, ಗುಟ್ಕಾ, ಪಾನ್ಬೀಡಾ, ರಸಗುಲ್ಲ ಕೇಳಿಕೊಂಡು ಕರೆ ಮಾಡುತ್ತಿದ್ದಾರೆ.