MLC polls

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ: ಸಿಎಂ ಸಿದ್ದರಾಮಯ್ಯ-ಎನ್ ಡಿಎ ಮೈತ್ರಿ ಕೂಟಕ್ಕೆ ಪ್ರತಿಷ್ಠೆಯ ಕದನ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಅಧಿಸೂಚನೆ ಹೊರಡಿಸಿರುವುದು ಈ ಭಾಗದ ಮತದಾರರು ಮತ್ತು ಜನನಾಯಕರು ಮತ್ತೆ ಚುನಾವಣಾ ಮೂಡ್ಗೆ ಜಾರುವಂತೆ ಮಾಡಿದೆ.

Graduate Constituency Polls: ಒಂದು ತಿಂಗಳಲ್ಲಿ ಕೇವಲ 15 ಸಾವಿರ ಹೊಸ ಮತದಾರರ ನೋಂದಣಿ- BBMP
ಪ್ರತಿ ವರ್ಷ ಲಕ್ಷಾಂತರ ಪದವೀಧರರನ್ನು ಉತ್ಪಾದಿಸುವ ರಾಜ್ಯ ರಾಜಧಾನಿ ಬೆಂಗಳೂರು, ಸೆಪ್ಟೆಂಬರ್ 30 ರಂದು ಹೊಸ ಮತದಾರರ ನೋಂದಣಿಗೆ ಭಾರತೀಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದಾಗಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯಲ್ಲಿ ಕೇವಲ 15,000 ಹೊಸ ಪದವೀಧರ ಮತದಾರರನ್ನು ಮಾತ್ರ ನೊಂದಾಯಿಸಿದೆ.

ವಿಧಾನಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ರಾಜ್ಯ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್ ನ ಖಾಲಿ ಇರುವ ಮೂರು ಸ್ಥಾನಗಳಿಗೆ ಜೂನ್ 30 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು.

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಟಿಕೆಟ್ ಗಾಗಿ ನಾಸೀರ್ ಅಹ್ಮದ್ ತೀವ್ರ ಲಾಬಿ!
ಮುಂದಿನ ತಿಂಗಳು ವಿಧಾನ ಪರಿಷತ್ ನ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ದಾವಣಗೆರೆಯಿಂದ ಡಾ. ಸಿ. ಆರ್. ನಾಸೀರ್ ಅಹಮದ್ ಟಿಕೆಟ್ ಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಎಂಎಲ್ ಸಿ ಟಿಕೆಟ್ ಗೆ ಬಿಜೆಪಿಯಲ್ಲಿ ಲಾಬಿ ಶುರು: ಆರ್ ಎಸ್ ಎಸ್ ನಿಷ್ಠರಿಗೆ ಹೈಕಮಾಂಡ್ ಮಣೆ?
ಕಾಂಗ್ರೆಸ್ನ ಮಾಜಿ ಎಂಎಲ್ಸಿ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಅಧಿಸೂಚನೆ ಹೊರಬಿದ್ದಿದ್ದು, ಆ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಈಗಾಗಲೇ ಲಾಬಿ ಆರಂಭವಾಗಿದೆ.

ಮಹಾರಾಷ್ಟ್ರ: ವಿಧಾನಪರಿಷತ್ ಚುನಾವಣೆ ಬಳಿಕ ಶಿವಸೇನೆ ಶಾಸಕರೊಂದಿಗೆ ಏಕನಾಥ್ ಶಿಂಧೆ ನಾಪತ್ತೆ, ತುರ್ತು ಸಭೆ ಕರೆದ ಉದ್ಧವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯ ಹಾದಿ ಹಿಡಿಯುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇದೀಗ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್ ಶಿಂಧೆ ಅವರು ಕೆಲ ಶಾಸಕರೊಂದಿಗೆ...

ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆ: ಹನುಮಂತ ಆರ್.ನಿರಾಣಿ ಗೆಲುವು
ವಿಧಾನ ಪರಿಷತ್ ಚುನಾವಣೆ ವಾಯುವ್ಯ ಪದವೀಧರ ಕ್ಷೇತ್ರ ದಾಖಲೆ ಗೆಲುವಿಗೆ ಸಾಕ್ಷಿಯಾಗಿದೆ. ಸಚಿವ ಮುರುಗೇಶ್ ನಿರಾಣಿ ಅವರ ಸಹೋದರ ಹಣಮಂತ ನಿರಾಣಿ ದಾಖಲೆಯ 34,693 ಮತಗಳ ಅಂತರದಿಂದ ಗೆದ್ದಿದ್ದಾರೆ.

ಹಿರಿ ತಲೆಗಳ ನಿರ್ಗಮನ, ಎಚ್ ಡಿಕೆ ಒರಟು ಮಾತು, ಹೋದಲೆಲ್ಲಾ ಸೋಲು: ಹಳೇ ಮೈಸೂರು ಭಾಗದಲ್ಲಿ ಕುಗ್ಗುತಿದೆ ಜೆಡಿಎಸ್ ಪ್ರಾಬಲ್ಯ!
ಜೆಡಿಎಸ್ನ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸೋಲಿನ ಸರಮಾಲೆ ಮುಂದುವರಿದಿದೆ, ಸ್ಪರ್ಧಿಸಿದ ಆರು ವಿಧಾನ ಪರಿಷತ್ ಸ್ಥಾನಗಳಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದೆ.

ಸಾವಿರ 'ಕೋಟಿ'ಗಳಿದ್ದರೂ ಅದೃಷ್ಟ ಖೋತಾ: ಪರಿಷತ್ ಚುನಾವಣೆಯಲ್ಲಿ 'ಕೆಜಿಎಫ್ ಬಾಬು' ಗೆ ಹೀನಾಯ ಸೋಲು!
ಬೆಂಗಳೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಎಸ್. ಗೋಪಿನಾಥ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ, ಸಾವಿರಾರು ಕೋಟಿಯ ಒಡೆಯ ಯೂಸೂಫ್ ಶರೀಫ್ ಸೋಲನುಭವಿಸಿದ್ದಾರೆ.

