Mysuru,

ಕೋವಿಡ್-19: ಅನುಭವ, ಸುಧಾರಿತ ಮೂಲಸೌಕರ್ಯದ ಮೂಲಕ ಎರಡನೇ ಅಲೆಗೆ ಮೈಸೂರು ಸಿದ್ಧತೆ
ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಅತೀ ಹೆಚ್ಚು ತುತ್ತಾಗಿರುವ ಜಿಲ್ಲೆಗಳಲ್ಲಿ ಒಂದಾಗಿದ್ದ ಮೈಸೂರು ಕ್ರಮೇಣ ಕೊರೋನಾ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ಅನುಭವ ಮತ್ತು ಸುಧಾರಿತ ಮೂಲಸೌಕರ್ಯಗಳೊಂದಿಗೆ ಸೋಂಕಿನ 2ನೇ ಅಲೆ ವಿರುದ್ಧ ಹೋರಾಡಲು ಸಿದ್ಧತೆ ನಡೆಸಿದೆ.

ಕೋವಾಕ್ಸಿನ್: ಮೂರನೇ ಹಂತದ ಪ್ರಯೋಗದಲ್ಲಿ ಭರವಸೆಯ ಫಲಿತಾಂಶ
ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ ಹೈದರಾಬಾದಿನ ಭರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವಾಕ್ಸಿನ್ ನ ಮೂರನೇ ಹಂತದ ಪ್ರಯೋಗದಲ್ಲಿ ಭರವಸೆಯ ಫಲಿತಾಂಶಗಳು ಕಂಡುಬಂದಿದೆ.

ಕೊರೋನಾ ಲಸಿಕೆ: ಮೈಸೂರಿನಲ್ಲಿ 30 ಸಾವಿರ ಕೊರೋನಾ ವಾರಿಯರ್ಸ್ ಗೆ ಆದ್ಯತೆ
ವೈದ್ಯರು, ನರ್ಸ್,ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳು ಸೇರಿದಂತೆ ಒಟ್ಟು 30 ಸಾವಿರ ಕೊರೋನಾ ವಾರಿಯರ್ಸ್ ಮೈಸೂರಿನಲ್ಲಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

ಮೈಸೂರು: ಕೊರೋನಾ ಸೋಂಕಿನಿಂದ ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯ ಸಾವು
ಕೋವಿಡ್19 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 47 ವರ್ಷದ ವೈದ್ಯರೊಬ್ಬರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ.

ಆಕ್ಷೇಪಾರ್ಹ ವಿಡಿಯೊ ಇದ್ದ ಮೊಬೈಲ್ ಎಸ್ ಡಿ ಕಾರ್ಡು ಕಳೆದುಕೊಂಡು ಪಡಬಾರದ ಪಾಡು ಪಟ್ಟ ಮೈಸೂರಿನ ವೈದ್ಯ!
ತಾನು ಕಳೆದುಕೊಂಡ ಮೊಬೈಲ್ ಫೋನ್ ನ ಎಸ್ ಡಿ ಕಾರ್ಡ್ ನಿಂದ ಸುಲಿಗೆಕೋರರ ಕೈಗೆ ಸಿಕ್ಕಿ ಪಡಬಾರದ ಕಷ್ಟವನ್ನು ಮೈಸೂರಿನ ವೈದ್ಯರೊಬ್ಬರು ಪಟ್ಟಿದ್ದಾರೆ.

ಮೈಸೂರು: ಹಿಂದುಳಿದ ವರ್ಗದವರ ಹೇರ್ ಕಟ್ಟಿಂಗ್ ಮಾಡಿದ್ದಕ್ಕೆ ಕ್ಷೌರಿಕನ ಕುಟುಂಬಕ್ಕೆ ಬಹಿಷ್ಕಾರ, 50 ಸಾವಿರ ರೂ. ದಂಡ!
ಹಿಂದುಳಿದ ವರ್ಗಕ್ಕೆ ಸೇರಿದವರ ತಲೆಕೂದಲು ಕತ್ತರಿಸಿದ್ದಕ್ಕೆ ಸಲೂನ್ ನ ಮಾಲಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಗ್ರಾಮದ ಮುಖ್ಯಸ್ಥರು 50 ಸಾವಿರ ರೂಪಾಯಿ ದಂಡ ಕಟ್ಟುವಂತೆ ಒತ್ತಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿ ನಡೆದಿದೆ.

ಕೊರೋನಾ ಎಫೆಕ್ಟ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜಿಮ್'ಗಳು, ಪರಿಸ್ಥಿತಿ ನಿಭಾಯಿಸಲು ಆ್ಯಪ್'ಗಳ ಬಳಕೆ
ಮಹಾಮಾರಿ ಕೊರೋನಾ ವೈರಸ್ ದೇಶದ ವಿವಿಧ ಕ್ಷೇತ್ರಗಳ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಪ್ರಮುಖವಾಗಿ ಜಿಮ್'ಗಳನ್ನು ನಡೆಸಿ ಜೀವನ ನಡೆಸುತ್ತಿದ್ದವರ ಮೇಲಂತೂ ಗಂಭೀರ ಪರಿಣಾಮ ಬೀರಿದೆ. ಕೊರೋನಾಗೆ ಹೆದರಿ ಸಾಕಷ್ಟು ಜನರು ಜಿಮ್'ಗಳತ್ತ ಮುಖ ಮಾಡುತ್ತಿಲ್ಲ...

ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿ ಚಾಕು ಇರಿತ
ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿಯೋರ್ವ ಚಾಕು ಇರಿದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಮೈಸೂರು: ದೀಪಾವಳಿಯ ದಿನವೇ ಪತ್ನಿಯನ್ನು ಕೊಂದು ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಪತಿರಾಯ!
ದೀಪಾವಳಿ ಹಬ್ಬದಂದೇ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಮೈಸೂರಿನ ಟಿ. ನರಸೀಪುರದಲ್ಲಿ ನಡೆದಿದೆ.

