ಸಿನಿಮಾ ಸುದ್ದಿ'ಪದವಿ ಪೂರ್ವ'ವನ್ನು ಮೊದಲಿಗೆ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಸಲ್ಲಿಸಲು ಬರೆಯಲಾಗಿತ್ತು: ನಿರ್ದೇಶಕ ಹರಿಪ್ರಸಾದ್
ಟೆಕ್ಕಿಯಾಗಿದ್ದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರು ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಹತ್ತು ವರ್ಷಗಳ ಹಿಂದೆ ಅಮೆರಿಕದಲ್ಲಿನ ಉದ್ಯೋಗವನ್ನು ತೊರೆದು ಬಂದರು. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಒಂದು ವರ್ಷದ ಕೋರ್ಸ್ ಮಾಡಿದ ನಂತರ, ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಮುಂದಾದರು.