Newdelhi

ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಮುಖಂಡರ ಪ್ರತಿಭಟನೆ
ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ದೇಶದ ವಿವಿಧೆಡೆ ಪೆಟ್ರೋಲ್ ಬಂಕ್ ಗಳ ಬಳಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಗೆ ಮೇಜರ್ ಸರ್ಜರಿಯ ಅಗತ್ಯವಿದೆ: ಜಿತಿನ್ ಪ್ರಸಾದ ನಿರ್ಗಮನ ಬೆನ್ನಲ್ಲೇ ವೀರಪ್ಪ ಮೊಯ್ಲಿ ಹೇಳಿಕೆ
ಕಾಂಗ್ರೆಸ್ ಗೆ ಮೇಜರ್ ಸರ್ಜರಿಯ ಅಗತ್ಯವಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಜಿತಿನ್ ಪ್ರಸಾದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ, ವೀರಪ್ಪ ಮೊಯ್ಲಿ ಈ ಹೇಳಿಕೆ ನೀಡಿದ್ದಾರೆ.

ಜುಲೈನಲ್ಲಿ ನಿಗದಿತ ಸಮಯಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ: ಪ್ರಹ್ಲಾದ್ ಜೋಶಿ ವಿಶ್ವಾಸ
ಕೋವಿಡ್-19 ಎರಡನೇ ಅಲೆ ನಡುವೆಯೂ ಜುಲೈನಲ್ಲಿ ನಿಗದಿತ ಸಮಯಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುವ ವಿಶ್ವಾಸವನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ ಆರಂಭ: ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಅಪ್ಡೇಟ್ ಗೆ ಸೂಚನೆ
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ 2.0, ಪೋರ್ಟಲ್ ಸೋಮವಾರದಿಂದ ಆರಂಭವಾಗಿದೆ. ಇದು ಆನ್ಲೈನ್ ರಿಟರ್ನ್ಸ್ ಮತ್ತು ತೆರಿಗೆ ಪಾವತಿಯನ್ನು ಸುಲಭಗೊಳಿಸುತ್ತದೆ. ಹಿಂದೆ ಇದ್ದ 'http://incometaxindiaefiling.gov.in' ಬದಲು www.incometax.gov.in ಸೈಟ್ ಆರಂಭವಾಗಿದ್ದು, ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

ಈವರೆಗೆ ಸುಮಾರು 24.65 ಕೋಟಿ ಡೋಸ್ ಕೋವಿಡ್ ಲಸಿಕೆ ರಾಜ್ಯಗಳಿಗೆ ಪೂರೈಕೆ: ಕೇಂದ್ರ ಸರ್ಕಾರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ ಸುಮಾರು 24 ಕೋಟಿ ಗೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆಯನ್ನು ಕೇಂದ್ರ ಸರ್ಕಾರ ಪೂರೈಸಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೇಳಿದೆ.

ಜನರಿಂದ ಅಪಪ್ರಚಾರ, ವೈದ್ಯರ ಮೇಲೆ ಹಲ್ಲೆ: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಐಎಂಎ ಮನವಿ
ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಅಪ ಪ್ರಚಾರ ಮಾಡುತ್ತಿರುವ ಜನರ ವಿರುದ್ಧ ಸೂಕ್ತ ಕ್ರಮ ಮತ್ತು ವೈದ್ಯರು ಭೀತಿಯಿಲ್ಲದೆ ಕೆಲಸ ಮಾಡುವಂತಾಗಲು ತಾವು ಮಧ್ಯ ಪ್ರವೇಶಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಸುಮಾರು ಮೂರು ವಾರಗಳ ನಂತರ ದೆಹಲಿ ಮೆಟ್ರೋ ರೈಲು ಸೇವೆ ಪುನಾರಾರಂಭ!
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆ ಹಿನ್ನೆಲೆಯಲ್ಲಿ ಸುಮಾರು ಮೂರು ವಾರಗಳ ನಂತರ ಮೆಟ್ರೋ ರೈಲು ಸೇವೆ ಇಂದಿನಿಂದ ಪುನರಾರಂಭವಾಗಿದೆ.

'ನಾವು ಕ್ರೀಡಾ ವಿಭಾಗವನ್ನು ನಿರ್ಲಕ್ಷಿಸಲಾಗದು': ಆಥ್ಲೀಟ್ ಗಳಿಗೆ ಲಸಿಕೆ ನೀಡುವಂತೆ ಕೇರಳ ಸಿಎಂಗೆ ಪಿಟಿ ಉಷಾ ಮನವಿ
ಒಲಿಂಪಿಕ್ ಅರ್ಹತೆಗಾಗಿ ಇದೇ ತಿಂಗಳ 25 ರಿಂದ 29 ರವರೆಗೆ ನಡೆಯಲಿರುವ ರಾಷ್ಟ್ರೀಯ, ಅಂತರ್ ರಾಜ್ಯ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುವ ರಾಜ್ಯದ ಆಥ್ಲೀಟ್ ಗಳಿಗೆ ಲಸಿಕೆ ನೀಡಿಕೆಗೆ ವ್ಯವಸ್ಥೆ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಬಳಿ ಓಟದ ರಾಣಿ ಪಿ.ಟಿ.ಉಷಾ ಮನವಿ ಮಾಡಿದ್ದಾರೆ.

ಬ್ಲೂ ಟಿಕ್ ಗಾಗಿ ಮೋದಿ ಸರ್ಕಾರ ಹೋರಾಟ: ಟ್ವಿಟರ್ ವಿವಾದ ಕುರಿತು ರಾಹುಲ್ ಹೇಳಿಕೆ!
ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿ ಸರ್ಕಾರ ಬ್ಲೂ ಟಿಕ್ ವೊಂದಕ್ಕಾಗಿ ಹೋರಾಟ ಮಾಡುತ್ತಿದೆ. ಕೋವಿಡ್ ಲಸಿಕೆ ಪಡೆಯಲು ಬಯಸುವ ಜನರು ಸ್ವಾವಲಂಬಿಯಾಗಬೇಕಾದ ಅಗತ್ಯವಿದೆ ಎಂದಿದ್ದಾರೆ.

