ರಾಜ್ಯವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಪುಲಕೇಶಿನಗರದಲ್ಲಿ ನೀರಿನ ಸಮಸ್ಯೆ: BWSSB 22 ಕೋಟಿ ರೂ. ವೆಚ್ಚದ ಕಾಮಗಾರಿ: ಪುರಾತನ ಪೈಪ್ ಲೈನ್ ಗೆ ಮುಕ್ತಿ!
ಇದೀಗ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವಲ್ ಬೈರಸಂದ್ರದಲ್ಲಿ 6 ಮಿಲಿಯನ್ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಾಶಯವನ್ನು ನಿರ್ಮಿಸಲು ಹಾಗೂ ಹಳೆಯ, ತುಕ್ಕು ಹಿಡಿದ ಪೈಪ್ಗಳನ್ನು ಬದಲಾಯಿಸಲು ಸಜ್ಜಾಗಿದೆ.