ರಾಜ್ಯಸರ್ಕಾರಕ್ಕೆ ಮೃದು ಭಾಷೆ ಅರ್ಥವಾಗಲ್ಲ, ಕಠಿಣ ಆದೇಶ ಬರೆಯಬೇಕು, 5 ಲಕ್ಷ ರೂ ಠೇವಣಿ ಇಡಿ: ಹೈಕೋರ್ಟ್ ಕೆಂಡಾಮಂಡಲ
ನಿವೃತ್ತ ಗ್ರಂಥಾಲಯ ಸಹಾಯಕಿಯೊಬ್ಬರ ವೇತನ ಮತ್ತು ಹಿಂಬಾಕಿ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿರುವ ಕರ್ನಾಟಕ ಹೈಕೋರ್ಟ್, 'ಸರ್ಕಾರಕ್ಕೆ ಮೃದು ಭಾಷೆ ಅರ್ಥವಾಗಲ್ಲ, ಕಠಿಣ ಆದೇಶ ಬರೆಯಬೇಕು ಎಂದು ಹೇಳಿ 5 ಲಕ್ಷ ರೂ ಠೇವಣಿ ಇಡುವಂತೆ ಸೂಚಿಸಿದೆ.