ರಾಜ್ಯಪ್ರಚಾರ ಪಡೆಯುವ ಪ್ರಹಸನ ಬೇಡ: ಮಾರಕ ಕೊರೋನಾ ತಡೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ
ಮಾರಕ ಕೊರೋನಾ ದೇಶಾದ್ಯಂತ ವ್ಯಾಪಿಸಿದ್ದು ಜನರು ಭಯಭೀತರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಆರು ಮಂದಿಯಲ್ಲಿ ಕೊರೋನಾವೈರಸ್ ದೃಢಪಟ್ಟಿದ್ದು ಕಲಬುರಗಿಯಲ್ಲಿ ಓರ್ವ ಮೃತಪಟ್ಟಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೊರೋನಾ ನಿಯತ್ರಣಕ್ಕಾಗಿ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಕೊರೋನಾವನ್ನು ಪ್ರಚಾರಕ್ಕಾಗಿ ಬಳಸಿಕೊಂಡು ಪ್ರಹ