ಸಿನಿಮಾ ಸುದ್ದಿ'ಕೆರೆಬೇಟೆ' ಬಿಡುಗಡೆಗೆ ಸಿದ್ಧ; ಚಿತ್ರದಲ್ಲಿ ನನ್ನ ಹುಟ್ಟೂರು ಮಲೆನಾಡಿನ ಸೊಬಗು ಆಳವಾಗಿ ಬೇರೂರಿದೆ: ನಿರ್ದೇಶಕ ರಾಜಗುರು
ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.