ದೇಶರಾಷ್ಟ್ರ ರಾಜಧಾನಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಹನುಮಾನ್ ಮಂದಿರ, ಮಜರ್ ಧ್ವಂಸ!
ರಾಷ್ಟ್ರ ರಾಜಧಾನಿಯ ಭಜನ್ಪುರ ಪ್ರದೇಶದಲ್ಲಿ ಭಾನುವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಪಿಡಬ್ಲ್ಯೂಡಿ ಇಲಾಖೆ ಹನುಮಾನ್ ಮಂದಿರ ಮತ್ತು ಮಜರ್ ನ್ನು ಧ್ವಂಸಗೊಳಿಸಿದೆ. ಉದ್ದೇಶಿತ ರಸ್ತೆ ವಿಸ್ತರಣೆ ಯೋಜನೆಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಈ ಧಾರ್ಮಿಕ ಕೇಂದ್ರಗಳನ್ನು ಕೆಡವಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.