21 ದಿನಗಳಲ್ಲಿ 13 ದೇಶಗಳ ಮೂಲಕ ಅದ್ಭುತ ರೈಲು ಪ್ರಯಾಣ! ಇದುವೇ ವಿಶ್ವದ ಅತಿ ಉದ್ದದ ಟ್ರೈನ್ ಟೂರ್

ಪೋರ್ಚುಗಲ್ ಟು ಸಿಂಗಾಪುರ: 21 ದಿನಗಳಲ್ಲಿ 13 ದೇಶಗಳನ್ನು ಸುತ್ತುವ ವಿಶ್ವದ ಅತ್ಯಂತ ಸುದೀರ್ಘ ರೈಲು ಪಯಣ! ಇಲ್ಲಿದೆ 18,755 ಕಿಲೋಮೀಟರ್ ಭೂಪ್ರದೇಶ, 2 ಖಂಡಗಳ ಸಾಹಸಮಯ ಯಾನದ ಕಂಪ್ಲೀಟ್ ಟ್ರಾವೆಲ್ ಡಿಟೇಲ್ಸ್!
World's Longest Train Journey
ವಿಶ್ವದ ಅತಿ ಉದ್ದದ ಟ್ರೈನ್ ಟೂರ್Online Desk
Updated on

World's Longest Train Journey: ವಿಮಾನದ ಜಂಜಾಟವಿಲ್ಲದೆ, ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಜಗತ್ತನ್ನು ಸುತ್ತಲು ಬಯಸುವ ಸಾಹಸಿಗರಿಗೆ ಇದೊಂದು ಕನಸಿನ ಪ್ರಯಾಣ. ಪೋರ್ಚುಗಲ್‌ನ ಲಿಸ್ಬನ್‌ನಿಂದ ಪ್ರಾರಂಭವಾಗಿ ಸಿಂಗಾಪುರದಲ್ಲಿ ಕೊನೆಗೊಳ್ಳುವ ಈ ಮಹಾಕಾವ್ಯದ ರೈಲು ಪ್ರಯಾಣವು ಸರಿಸುಮಾರು 18,755 ಕಿಲೋಮೀಟರ್‌ಗಳಷ್ಟು ಸುದೀರ್ಘ ಭೂಪ್ರದೇಶವನ್ನು ಆವರಿಸುತ್ತದೆ. ಹೌದು, ಸುಮಾರು 21 ದಿನಗಳ ಕಾಲ 13 ದೇಶಗಳಲ್ಲಿ ಪ್ರಯಾಣ ಮಾಡುವ ಈ ರೈಲಿನ ಕುರಿತ ಮಾಹಿತಿ ಇಲ್ಲಿದೆ:

21 ದಿನಗಳು, 13 ದೇಶಗಳು ಮತ್ತು ಸಾಟಿಯಿಲ್ಲದ ಅದ್ಭುತ ದೃಶ್ಯಾವಳಿ!

ಈ 21 ದಿನಗಳ ಪ್ರಯಾಣದಲ್ಲಿ ನೀವು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿರುವ 13 ದೇಶಗಳನ್ನು ಹಾದುಹೋಗುತ್ತೀರಿ. ಪೋರ್ಚುಗಲ್, ಸ್ಪೇನ್, ಫ್ರಾನ್ಸ್, ಜರ್ಮನಿ, ಪೋಲೆಂಡ್, ಬೆಲಾರಸ್, ರಷ್ಯಾ, ಮಂಗೋಲಿಯಾ, ಚೀನಾ, ಲಾವೋಸ್, ಥೈಲ್ಯಾಂಡ್, ಮಲೇಷ್ಯಾ ಮತ್ತು ಸಿಂಗಾಪುರ ದೇಶಗಳನ್ನ ಸುತ್ತು ಹಾಕುತ್ತಿರಿ.

ಹೌದು, ಯುರೋಪಿನ ಐತಿಹಾಸಿಕ ನಗರಗಳಾದ ಪ್ಯಾರಿಸ್ ಮತ್ತು ಮಾಸ್ಕೋದಿಂದ ಹಿಡಿದು, ಸೈಬೀರಿಯಾದ ಹಿಮಭರಿತ ಪ್ರದೇಶಗಳು, ಗೋಬಿ ಮರುಭೂಮಿ ಹಾಗೂ ಆಗ್ನೇಯ ಏಷ್ಯಾದ ಹಸಿರಿನಿಂದ ಕೂಡಿದ ಉಷ್ಣವಲಯದ ಕಾಡುಗಳನ್ನು ನೀವು ರೈಲಿನ ಕಿಟಕಿಯಿಂದಲೇ ವೀಕ್ಷಿಸಬಹುದು. ಪ್ರಮುಖ ನಗರಗಳಲ್ಲಿ ಸಂಸ್ಕೃತಿಯನ್ನು ತಿಳಿಯಲು ಮತ್ತು ವಿಶ್ರಾಂತಿಗಾಗಿ ರಾತ್ರಿ ವಾಸ್ತವ್ಯದ ಅವಕಾಶಗಳೂ ಲಭ್ಯವಿರುತ್ತವೆ.

World's Longest Train Journey
Online Desk
World's Longest Train Journey
Passport ಬೇಡ, VISA ಬೇಡ; ಭಾರತದಲ್ಲೇ ಇವೆ ವಿದೇಶವನ್ನೂ ಮೀರಿಸುವ ಅದ್ಭುತ ತಾಣಗಳು..!

ಒನ್ ಸೈಡ್ ಟ್ರಿಪ್ ಗೆ ದುಡ್ಡು ಎಷ್ಟು?

ಇದು ಒಂದೇ ರೈಲಿನ ನೇರ ಪ್ರಯಾಣವಲ್ಲ ಎಂಬುದನ್ನು ನೆನಪಿಡಬೇಕು. ಪ್ರಯಾಣಿಕರು ಬೇರೆ ಬೇರೆ ದೇಶಗಳ ಅಂತರರಾಷ್ಟ್ರೀಯ ರೈಲು ಸೇವೆಗಳನ್ನು (ಉದಾಹರಣೆಗೆ ಪ್ರಸಿದ್ಧ ಟ್ರಾನ್ಸ್-ಸೈಬೀರಿಯನ್ ರೈಲು) ಲಿಂಕ್ ಮಾಡುವ ಮೂಲಕ ಇದನ್ನು ಪೂರ್ಣಗೊಳಿಸಬೇಕಾಗುತ್ತದೆ.

ಅದರಂತೆ, ಮೂಲ ರೈಲು ಟಿಕೆಟ್‌ಗಳ ದರ ಸುಮಾರು 1,350 ಅಮೆರಿಕನ್ ಡಾಲರ್ ಅಂದ್ರೆ ಅಂದಾಜು ₹15 ಲಕ್ಷ ದಿಂದ ಪ್ರಾರಂಭವಾಗುತ್ತದೆ. ಆದರೆ, ಆಹಾರ ಮತ್ತು ವಾಸ್ತವ್ಯದ ವೆಚ್ಚ ಪ್ರತ್ಯೇಕ.

ರೈಲಿನ ಒಳಗೆ ಏನಿರುತ್ತದೆ? ಇದು ರೈಲಾ ಅಥವಾ 5-ಸ್ಟಾರ್ ಹೋಟೆಲಾ?

ಇದು ರೈಲು ಅಲ್ಲ, ಓಡಾಡುವ ಅರಮನೆ

  • ಕ್ಯಾಬಿನ್: ನಿಮ್ಮದೇ ಖಾಸಗಿ ಸೂಟ್. ಡಬಲ್ ಬೆಡ್, ಬಾತ್‌ರೂಮ್, ವೈನ್ ಗ್ಲಾಸ್, 24x7 ರೂಮ್ ಸರ್ವಿಸ್

  • ಡೈನಿಂಗ್ ಕಾರ್: ಮಿಚೆಲಿನ್ ಚೆಫ್ ಅಡುಗೆ. ಪ್ರತಿ ದೇಶದ ಲೋಕಲ್ ಫುಡ್ + ವೈನ್

  • ಬಾರ್ ಮತ್ತು ಲೌಂಜ್ : ಪಿಯಾನೋ, ಲೈವ್ ಮ್ಯೂಸಿಕ್. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು.

  • ಒಬ್ಸರ್ವಷನ್ ಕಾರ್ : ಗಾಜಿನ ಛಾವಣಿ. ಆಲ್ಪ್ಸ್, ಡ್ಯಾನ್ಯೂಬ್ ನದಿ ನೇರವಾಗಿ ನೋಡಿ

  • ಆಫ್ -ಟ್ರೈನ್ ಟೂರ್ಸ್ : ಪ್ರತಿ ನಗರದಲ್ಲಿ ಗೈಡ್ ಜೊತೆ ಪ್ರೈವೇಟ್ ಟೂರ್ . ಕೋಟೆ, ಮ್ಯೂಸಿಯಂ, ವೈನ್ ಟೇಸ್ಟಿಂಗ್ ಎಲ್ಲಾ ಇನ್ಕ್ಲ್ಯೂದೆ

World's Longest Train Journey
ರಾಜಧಾನಿಯ ಟ್ರಾಫಿಕ್ ಜಂಜಾಟಕ್ಕೆ ವೀಕೆಂಡ್ ಬ್ರೇಕ್; ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ದಿ ಬೆಸ್ಟ್ ಪ್ರವಾಸಿ ತಾಣಗಳು!

ಏತನ್ಮಧ್ಯೆ, ಈ ಪ್ರಯಾಣದ ವೇಳೆ ಹಾದುಹೋಗುವ ದೇಶಗಳ ವೀಸಾಗಳು ಮತ್ತು ರೈಲು ಟಿಕೆಟ್‌ಗಳನ್ನು ಮುಂಚಿತವಾಗಿಯೇ ಯೋಜಿಸಿ ಕಾಯ್ದಿರಿಸುವುದು ಅತ್ಯಗತ್ಯ. ಅದರಲ್ಲೂ, ಇದು ಸ್ಲೋ ಟ್ರಾವೆಲ್ ಬಯಸುವ ಪ್ರವಾಸಿಗರಿಗೆ ಇದು ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಲೇಬೇಕಾದ ಅದ್ಭುತ ಪಯಣವಾಗಿದೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com