ವಂದೇ ಭಾರತ್ ಸ್ಲೀಪರ್ ಕೋಚ್; Interior visuals

ದೇಶದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಸ್ಲೀಪರ್ ಕೋಚ್ ರೈಲಿನ ಮೂಲ ಮಾದರಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ಸ್ಲೀಪರ್ ರೈಲು ಮುಂದಿನ ಮೂರು ತಿಂಗಳೊಳಗೆ ಸಂಚಾರ ಪ್ರಾರಂಭಿಸಲಿದೆ. ಅದಕ್ಕೂ ಮುನ್ನಾ ಪ್ರಾಯೋಗಿಕ ಸಂಚಾರ ನಡೆಯಲಿದೆ.

ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ರೈಲು ಸುಧಾರಿತ ಅಪಘಾತ ಸುರಕ್ಷತಾ ವಿನ್ಯಾಸವನ್ನು ಹೊಂದಿದೆ. ಜೊತೆಗೆ ರೈಲು ಬೋಗಿಗಳು ಐಷರಾಮಿ ಸೌಲಭ್ಯದ ಸಂಚಾರ ಅನುಭವ ನೀಡಲಿದೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ದರಕ್ಕೆ ಸರಿಸಮವಾಗಿ ವಂದೇ ಭಾರತ್ ಸ್ವೀಪರ್ ದರ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com