ವಿಡಿಯೋ
ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ 3.5 ಕಿಲೋಮೀಟರ್ ವಾಯುನೆಲೆಯಲ್ಲಿ ಇಂದು ಭಾರತೀಯ ವಾಯುಪಡೆ ತನ್ನ ಕಾರ್ಯಾಚರಣೆಯ ಸಾಮರ್ಥ್ಯದ ಪ್ರದರ್ಶನಕ್ಕೆ ಸಜ್ಜಾಗಿದೆ.
ಇದೇ ಮೊದಲ ಬಾರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ, ರಫೇಲ್, ಜಾಗ್ವಾರ್, ಮಿರಾಜ್-2000, ಎಸ್‌ಯು-30 ಎಂಕೆಐ, ಮತ್ತು ಮಿಗ್-29 ನಂತಹ ಸುಧಾರಿತ ಯುದ್ಧ ವಿಮಾನಗಳು,
ಸಿ-130ಜೆ ಸೂಪರ್ ಹರ್ಕ್ಯುಲಸ್ ಮತ್ತು ಎಎನ್-32 ನಂತಹ ಸಾರಿಗೆ ವಿಮಾನಗಳು ಮತ್ತು ಬಹುಮುಖ ಎಂಐ-17 ವಿ5 ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ.
ಹಗಲು ಮತ್ತು ರಾತ್ರಿಯ ಎರಡು ಹಂತಗಳಲ್ಲಿ ಈ ವೈಮಾನಿಕ ಪ್ರದರ್ಶನವನ್ನು ನಿಗದಿಪಡಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement