ಯುಎನ್ ಭದ್ರತಾ ಮಂಡಳಿ ವಿಸ್ತರಣೆಗೆ ಯುಎಸ್, ಚೀನಾ, ರಷ್ಯಾ ವಿರೋಧ: ಭಾರತದ ಖಾಯಂ ಸದಸ್ಯತ್ವಕ್ಕೆ ಅಡ್ಡಿ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪುನಾರಚನೆಗೆ ಅಮೇರಿಕಾ, ಚೀನಾ, ರಷ್ಯಾ ನಿರಾಕರಿಸಿದ್ದು, ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಭಾರತಕ್ಕೆ ಅಡ್ಡಿ...
ವಿಶ್ವಸಂಸ್ಥೆ ಭದ್ರತಾ ಮಂಡಳಿ(ಸಾಂದರ್ಭಿಕ ಚಿತ್ರ)
ವಿಶ್ವಸಂಸ್ಥೆ ಭದ್ರತಾ ಮಂಡಳಿ(ಸಾಂದರ್ಭಿಕ ಚಿತ್ರ)

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪುನಾರಚನೆಗೆ ಅಮೇರಿಕಾ, ಚೀನಾ, ರಷ್ಯಾ ನಿರಾಕರಿಸಿದ್ದು, ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಭಾರತಕ್ಕೆ ಅಡ್ಡಿ ಉಂಟಾಗಿದೆ.

ಭದ್ರತಾ ಮಂಡಳಿಯ ವಿಸ್ತರಣೆ ಪ್ರಕ್ರಿಯೆಗೆ ಅಮೇರಿಕಾ ತಾತ್ವಿಕವಾಗಿ ಒಪ್ಪಿಗೆ ನೀಡುತ್ತದೆ. ಆದರೆ ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಳ ನಿರ್ವಹಣೆ ಕೊಡುಗೆ ನೀಡಲು ಸಾಮರ್ಥ್ಯ ಹೊಂದಿರುವುದನ್ನು ಗಮನಿಸಿ, ಯಾವುದೇ ರಾಷ್ಟ್ರಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೆಕೆಂದು ಭದ್ರತಾ ಮಂಡಳಿ ವಿಸ್ತರಣೆ ವಿಷಯದ ಉಸ್ತುವಾರಿ ವಹಿಸಿರುವ ಕೋರ್ಟನೆಯ್ ರಾಟ್ರೆ ಗೆ ಪತ್ರ ಬರೆದಿದೆ. ಅಲ್ಲದೇ ಭದ್ರತಾ ಮಂಡಳಿಯ ವಿಶೇಷ ಅಧಿಕಾರ ವಿಟೋ ನವೀಕರಣ ಅಥವಾ ವಿಸ್ತರಣೆಗೆ ವಿರೋಧವಿದೆ ಎಂದು ಅಮೇರಿಕಾ ಸ್ಪಷ್ಟಪಡಿಸಿದೆ.

ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನಿಡಿದ್ದಾಗ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವುದಕ್ಕೆ ಬೆಂಬಲಿಸುವುದಾಗಿ ಘೋಷಿಸಿದ್ದರು. ಆದರೆ ಭದ್ರತಾ ಮಂಡಳಿ ವಿಸ್ತರಣೆಗೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿರುವ ಅಮೇರಿಕಾ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ರಷ್ಯಾ ಸಹ ಈಗ ಉಲ್ಟಾ ಹೊಡೆದಿದ್ದು. ಭದ್ರತಾ ಮಂಡಳಿ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಈಗಿರುವ ಶಾಶ್ವತ ರಾಷ್ಟ್ರಗಳ ವಿಟೋ ಸೇರಿದಂತೆ ಎಲ್ಲಾ ವಿಶೇಷಾಧಿಕಾರಗಳೂ ಯಥಾ ಸ್ಥಿತಿಯಲ್ಲೇ  ಮುಂದುವರಿಯಬೇಕು ಎಂದು ಹೇಳಿದೆ.

ಈಗಿರುವ ಸದಸ್ಯ ರಾಷ್ಟ್ರಗಳ ಒಗ್ಗಟ್ಟನ್ನು ಲೆಕ್ಕಿಸದೇ ಭದ್ರತಾ ಸಂಸ್ಥೆಯ ವಿಸ್ತರಣೆ ಮಾಡಬಾರದು, ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿದ ನಂತರ  ಈ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಚೀನಾ ಹೇಳಿದೆ. ಭಾರತಕ್ಕೆ ಬೆಂಬಲ ನೀಡಿದ್ದ ಫ್ರಾನ್ಸ್ ಹಾಗೂ ಯು.ಕೆ ಈಗಲೂ ಭಾರತಕ್ಕೆ ಬೆಂಬಲ ಮುಂದುವರೆಸಿವೆ. ಆದರೆ ಅಮೇರಿಕಾ, ಚೀನ ರಷ್ಯಾ ಭದ್ರತಾ ಮಂಡಳಿಯಲ್ಲಿ ಭಾರತ, ಜಪಾನ್ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com