

ಲಂಡನ್: ವಿಶ್ವದಲ್ಲಿಯೇ ಭಾರತ ಎರಡನೇ ಮೌಢ್ಯ ಪ್ರಧಾನ ರಾಷ್ಟ್ರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ.
ಅಸಮಾನತೆ, ಧರ್ಮಶ್ರದ್ಧೆ, ಜನಸಂಖ್ಯೆ, ಮಹಿಳಾ ಉದ್ಯೋಗ ಮತ್ತು ಇಂಟರ್ ನೆಟ್ ಬಳಕೆಯಲ್ಲಿ ತೀರಾ ಹಿಂದುಳಿದಿದೆ ಎಂದು ಲಂಡನ್ ಮೂಲದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ತಿಳಿಸಿದೆ.
ಪ್ರಪಂಚದ 33 ರಾಷ್ಟ್ರಗಳ 25 ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಅತಿ ಹೆಚ್ಚು ಅಂದಾಜು ಮಾಡಿಕೊಂಡು ಅದರ ಬಗ್ಗೆ ಚಿಂತಿಸಿ, ಮಹತ್ವದ ವಿಷಯಗಳನ್ನು ಕಡೆಗಣಿಸುತ್ತಾರೆ ಎಂದು ಹೇಳಲಾಗಿದೆ.
ಭಾರತ ಮತ್ತು ಮೆಕ್ಸಿಕೋ ದೇಶದ ಜನತೆಗೆ ವಿಷಯಗಳನ್ನು ಗ್ರಹಿಸುವಲ್ಲಿ , ಕರಾರುವಾಕ್ಕಾದ ತೀರ್ಮಾನ ಇರುವುದಿಲ್ಲ. ಈ ವಿಷಯದಲ್ಲಿ ದಕ್ಷಿಣ ಕೊರಿಯಾ ಜನ ತುಂಬಾ ಕರಾರುವಕ್ಕು ಹಾಗೂ ನಿಖರವಾಗಿರುತ್ತಾರೆ. ಅದರ ನಂತರ ಐರಿಶ್ ದೇಶದ ಜನತೆ ತುಂಬಾ ನಿಖರವಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಗೆ ಬಳಸಿಕೊಂಡಿದ್ದ ಜನರಲ್ಲಿ, ರಾಷ್ಟ್ರದ ಸಂಪತ್ತು, ಧರ್ಮ, ಜನಸಂಖ್ಯೆ, ವಲಸೆ, ಪೋಷಕರ ಜೊತೆ ವಾಸ, ಸ್ತ್ರೀ ಉದ್ಯೋಗ, ಗ್ರಾಮೀಣ ಬದುಕು, ಇಂಟರ್ ನೆಟ್ ಬಳಕೆಗಳ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಅವರು ನೀಡಿದ ಉತ್ತರಗಳ ಆಧಾರದ ಮೇಲೆ ಮೌಢ್ಯ ರಾಷ್ಟ್ರಗಳೆಂದು ಪರಿಗಣಿಸಿ ಸಮೀಕ್ಷೆ ನಡೆಸಲಾಯಿತು ಎಂದು ಹೇಳಲಾಗಿದೆ.