ಪ್ರಸಕ್ತ ವರ್ಷ 2,400 ಮೈಕ್ರೋಸೆಫಲಿ (ಮುರುಟಿದ ಮೆದುಳು) ಪ್ರಕರಣಗಳು ಪತ್ತೆಯಾಗಿದ್ದು, 29 ಶಿಶುಗಳು ಸಾವನ್ನಪ್ಪಿವೆ. ಕಳೆದ ವರ್ಷ ಬ್ರೆಜಿಲ್‍ನಲ್ಲಿ ಇಂತಹ 147 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈ ವೈರಸ್‍ನ ಭೀತಿಯಿಂದಾಗಿ ಎಷ್ಟೋ ಮಹಿಳೆಯರು ಗರ್ಭಿಣಿಯಾಗುವುದಕ್ಕೇ ಹೆದರುತ್ತಿದ್ದಾರೆ ಎಂದು ಶಿಶುತಜ್ಞೆ ಏಂಜೆಲಾ ರೋಚಾ ತಿಳಿಸಿದ್ದಾರೆ.