

ಭಾರತ/ಢಾಕ: ಭಾರತ- ಬಾಂಗ್ಲಾ ಗಡಿ ಪ್ರದೇಶದಲ್ಲಿ ಗಸ್ತು ತಿರುಗುವ ಸುಮಾರು 30 000 ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಭಾರತದ ಗೋವುಗಳು ಅಕ್ರಮವಾಗಿ ಬಾಂಗ್ಲಾಗೆ ಸಾಗಣೆಯಾಗುವುದನ್ನು ತಡೆಗಟ್ಟಬೇಕು ಎಂದು ಸೂಚಿಸಿದೆ.
ಪ್ರತಿ ಎರಡು ದಿನಕ್ಕೊಮ್ಮೆ ಬಾಂಗ್ಲಾದ ಮಾರುಕಟ್ಟೆಗೆ ಹಸುಗಳ ಅಕ್ರಮ ಸರಬರಾಜು ಮಾಡುವವರನ್ನು ಗಸ್ತು ತಿರುಗುವ ಸೈನಿಕರು ಹಿಡಿಯುತ್ತಾರೆ. ಬಾಂಗ್ಲಾಗೆ ಆಕಳು ಅಕ್ರಮವಾಗಿ ಸಾಗಣೆಯಾಗುವುದನ್ನು ತಡೆಗಟ್ಟಲು ಕೈಗೊಂಡಿರುವ ಸರ್ಕಾರ, ಪ್ರಬಲ ಹಿಂದೂ ಸಿದ್ಧಾಂತದಿಂದ ಪ್ರಭಾವಿತಗೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಭಾರತದ ಈ ಕ್ರಮದಿಂದಾಗಿ ಭಾರತದಲ್ಲಿರುವ ಅಲ್ಪಸಂಖ್ಯಾತರ ಹಾಗೂ ನೆರೆ ರಾಷ್ಟ್ರದ ಆರ್ಥಿಕತೆ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ.
ಭಾರತದಿಂದ ಪ್ರತಿ ವರ್ಷವೂ 2 ಮಿಲಿಯನ್ ಹಸುಗಳ ಹಿಂಡನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದು ಕಳೆದ ನಾಲ್ಕು ದಶಕಗಳಲ್ಲಿ ಸುಮಾರು ವಾರ್ಷಿಕ 600 ಮಿಲಿಯನ್ ಡಾಲರ್ ವ್ಯಾಪಾರ ಪ್ರವರ್ಧಮಾನಗೊಂಡಿದೆ. ಇದನ್ನು ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಕಾನೂನಾತ್ಮಕ ಎಂದು ಪರಿಗಣಿಸಲಾಗಿದೆ. ಆದರೆ ಇವೆಲ್ಲದಕ್ಕೂ ಈಗ ಮೋದಿ ಸರ್ಕಾರ ಕಡಿವಾಣ ಹಾಕಲು ಹೊರಟಿದೆ.
ಇತ್ತೀಚೆಗಷ್ಟೇ ಬಾಂಗ್ಲಾ ಗಡಿ ಪ್ರದೇಶದಕ್ಕೆ ಭೇಟಿ ನೀಡಿದ್ದ ಕೆಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದನ್ನು ತಡೆಗಟ್ಟಬೇಕೆಂದು ಬಿಎಸ್ಎಫ್ ಯೋಧರಿಗೆ ಸೂಚನೆ ನೀಡಿದ್ದರು. ಈವರೆಗೂ ಬಿಎಸ್ಎಫ್ ಯೋಧರು 90 ,000 ಆಕಳುಗಳನ್ನು ವಶಪಡಿಸಿಕೊಂಡಿದ್ದು 400 ಕ್ಕೂ ಹೆಚ್ಚು ಭಾರತ- ಬಾಂಗ್ಲಾ ಮೂಲದ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದಾರೆ.
ಗೋವುಗಳ ಸಾಗಣಿಗೆಯನ್ನು ತಡೆಗಟ್ಟುವ ಮೋದಿ ಸರ್ಕಾರದ ಕ್ರಮದಿಂದಾಗಿ ಭಾರತದಲ್ಲಿ ಗೋಮಾಂಸವನ್ನು ರಫ್ತು ಮಾಡುವ ಉದ್ಯಮಕ್ಕೆ ತೀವ್ರ ಹೊಡೆತ ಬೀಳುತ್ತಿದ್ದು, ಕಳೆದ 6 ತಿಂಗಳಿಂದ ಹಸುಗಳ ಬೆಲೆ ಶೇ.40 ರಷ್ಟು ಹೆಚ್ಚಾಗಿದೆ ಎಂದು ಬಾಂಗ್ಲಾ ದೇಶದ ಬೀಫ್ ರಫ್ತು ಮಾಡುವ ಕಂಪನಿಯ ಮಾಲೀಕ ಸಯ್ಯದ್ ಹಸನ್ ಹಬಿಬ್ ಹೇಳಿದ್ದಾರೆ. ಅಲ್ಲದೇ ಬಾಂಗ್ಲಾದ ಬೀಫ್ ವ್ಯಾಪಾರ ಹಾಗೂ ಲೆದರ್ ಕಾರ್ಖಾನೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು 4,000 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.