

ಕೀನ್ಯಾ: 2013ರಲ್ಲಿ ಉಗ್ರರು ನಡೆಸಿದ ದಾಳಿಯಿಂದ ನಲುಗಿದ್ದ ಕೀನ್ಯಾದ ವೆಸ್ಟ್ ಗೇಟ್ ಮಾಲ್ ಎರಡು ವರ್ಷದ ಬಳಿಕ ಇದೀಗ ಮತ್ತೆ ರೀ ಓಪನ್ ಆಗುತ್ತಿದೆ.
ಕೀನ್ಯಾದ ಪ್ರತಿಷ್ಟಿತ ಮಾಲ್ ಎಂದು ಕರೆಸಿಕೊಳ್ಳುತ್ತಿದ್ದ ವೆಸ್ಟ್ ಗೇಟ್ ಮಾಲ್ ನಲ್ಲಿ 2013ರಲ್ಲಿ ಸೊಮಾಲಿಯ ಇಸ್ಲಾಮಿಕ್ ಉಗ್ರರು ನಾಲ್ಕು ದಿನಗಳ ಕಾಲ ನಡೆಸಿದ ದಾಳಿಯಲ್ಲಿ ಮಾಲ್ ನಲ್ಲಿದ್ದ 67 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ದಾಳಿಯಲ್ಲಿ ಮಾಲ್ ಸಾಕಷ್ಟು ಹಾನಿಗೊಳಪಟ್ಟಿತ್ತು.
ಹಾನಿಗೊಳಗಾದ ಮಾಲ್ ಮತ್ತೆ ಮೊದಲಿನಂತೆ ಮಾಡಲು ಎರಡು ವರ್ಷಗಳ ಕಾಲ ಬೇಕಾಯಿತು. ಇದೀಗ ಮತ್ತೆ ಕೀನ್ಯಾದ ವೆಸ್ಟ್ ಗೇಟ್ ಮಾಲ್ ರೀ ಓಪನ್ ಆಗುತ್ತಿದ್ದು, ತನ್ನ ಸೌಂದರ್ಯದ ಮೂಲಕ ಜನರನ್ನು ಆಕರ್ಷಿಸುತ್ತಿದೆ.