ಯುವತಿಯನ್ನು ಹಿಂಬಾಲಿಸಿ ಪೀಡಿಸುತ್ತಿದ್ದ ಅಳಿಲು ಅರೆಸ್ಟ್!

ಆಕೆ ಮನೆಯಿಂದ ಹೊರಗೆ ಹೊರಟರೆ ಸಾಕು ಈ ಅಳಿಲು ಆಕೆಯನ್ನು ಹಿಂಬಾಲಿಸುತ್ತದೆ. ಆಕೆಯ ಮೇಲೆಯೇ ಕಣ್ಣು ನೆಟ್ಟಿರುವ ಈ ಅಳಿಲು ಆಕೆ ಹೋದಲೆಲ್ಲಾ ...
ಬಂಧಿತ ಅಳಿಲು (ಕೃಪೆ: ಪೋಲಿಜೈ ರೆಕ್ಲಿಂಗ್ಹೌಸೆನ್ )
ಬಂಧಿತ ಅಳಿಲು (ಕೃಪೆ: ಪೋಲಿಜೈ ರೆಕ್ಲಿಂಗ್ಹೌಸೆನ್ )

ಆಕೆ ಮನೆಯಿಂದ ಹೊರಗೆ ಹೊರಟರೆ ಸಾಕು ಈ ಅಳಿಲು ಆಕೆಯನ್ನು ಹಿಂಬಾಲಿಸುತ್ತದೆ. ಆಕೆಯ ಮೇಲೆಯೇ ಕಣ್ಣು ನೆಟ್ಟಿರುವ ಈ ಅಳಿಲು ಆಕೆ ಹೋದಲೆಲ್ಲಾ ಬರುತ್ತದೆ. ಆ ಕಡೆ ಈ ಕಡೆ ತಿರುಗಲೂ ಬಿಡುವುದಿಲ್ಲ. ಎಲ್ಲಿಗೆ ಹೋದರೂ ದಾರಿಯಲ್ಲಿ ಅಡ್ಡವಾಗಿ ನಿಂತಿರುತ್ತದೆ. ಕೆಲವೊಮ್ಮೆ ಆಕೆಯ ಮೇಲೆ ದೈಹಿಕ ಹಲ್ಲೆ ಮಾಡಿದ್ದೂ ಉಂಟು! ಕೊನೆಗೆ ಆಕೆ ಈ ಉಪದ್ರವ ಸಹಿಸಲಾಗದೆ ಪೊಲೀಸರಿಗೆ ಫೋನ್ ಮಾಡುತ್ತಾಳೆ. ಆಕೆ ತನ್ನ ಸಂಕಟ ಹೇಳಿಕೊಂಡಾಗ ಪೊಲೀಸರಿಗೂ ಅಚ್ಚರಿ ಆಯ್ತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ಅಳಿಲನ್ನು ಬಂಧಿಸಿ ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ.

ಇಷ್ಟೆಲ್ಲಾ ಕತೆ ನಡೆದಿದ್ದು ಜರ್ಮನಿಯಲ್ಲಿ. ಇಲ್ಲಿನ ಬಾಟ್ರೋಪ್ ನಗರದ ಯುವತಿಯೊಬ್ಬಳು ಉತ್ತರ ರೈನ್-ವೆಸ್ಟ್ ಫಾಲಿಯಾ ಪೊಲೀಸರಿಗೆ ಫೋನ್ ಮಾಡಿ ಅಳಿಲೊಂದು ತನ್ನನ್ನು ಹಿಂಬಾಲಿಸಿ ಉಪದ್ರವ ಕೊಡುತ್ತಿರುವುದರ ಬಗ್ಗೆ ದೂರು ನೀಡಿದ್ದಳು.

ಈಕೆಯ ದೂರಿನ ಮೇರೆಗೆ ಪೊಲೀಸರು ಅಳಿಲನ್ನು ಬಂಧಿಸಿದ್ದಾರೆ. ಬಂಧಿತ ಅಳಿಲು ಸಿಕ್ಕಾಪಟ್ಟೆ ಕೋಪಗೊಂಡಿದ್ದು, ಅದಕ್ಕೆ ತುಂಬಾ ಸುಸ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಬಂಧನದಲ್ಲಿರುವ ಅಳಿಲಿಗೆ ಪೊಲೀಸರು ಜೇನು ತಿನಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ಅಳಿಲಿನ ರಕ್ಷಣೆಗಾಗಿ ಬೇರೆಡೆಗೆ ಅದನ್ನು ಸಾಗಿಸಲಾಗುವುದು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com